ನಟಿ ತ್ರಿಶಾ ಜೋತೆ ರೇ ಪ್ ಸೀನ್ ನಲ್ಲಿ ನಟಿಸಲು ಕಾಯುತ್ತಿದ್ದೆ ಎಂದು ಹೇಳಿಕೆ ಕೊಟ್ಟ ನಟ ಮನ್ಸೂರ್ ಅಲಿ ಖಾನ್, ಕೊನೆಗೆ ತ್ರಿಶಾ ಕೊಟ್ಟ ಉತ್ತರ ಏನು ನೋಡಿ!!

ಕನ್ನಡ ಸೇರಿದಂತೆ ಪರಭಾಷೆಯ ಕೆಲ ನಟ ನಟಿಯರು ಸಿನಿಮಾಕ್ಕಿಂತ ಹೆಚ್ಚು ವಿ-ವಾದಾತ್ಮಕ ಹೇಳಿಕೆ ಯಿಂದಲೇ ಸುದ್ದಿಯಾಗುವುದೇ ಹೆಚ್ಚು. ಈ ವಿಚಾರದಲ್ಲಿ ತಮಿಳು ನಟ ಮನ್ಸೂರ್ ಅಲಿ ಖಾನ್ (Mansoor Ali Khan) ಅವರು ಕೂಡ ಹೊರತಾಗಿಲ್ಲ. ಇತ್ತೀಚೆಗಷ್ಟೇ ಖ್ಯಾತ ನಟಿಯ ಬಗ್ಗೆ ಹೇಳಿಕೆ ನೀಡಿದ್ದು ಸುದ್ದಿಯಾಗಿದ್ದಾರೆ. ಹೌದು, ‘ಲಿಯೋ’ (Leo) ಸಿನಿಮಾದಲ್ಲಿ ತ್ರಿಶಾ (Trisha) ಜೊತೆಗಿನ ಸೀನ್ ಬಗ್ಗೆ ಮಾತನಾಡಿದ್ದು, ನೆಟ್ಟಿಗರ ಅ-ಕ್ರೋಶಕ್ಕೆ ಕಾರಣವಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಿದ್ದ ತಮಿಳು ನಟ ಮನ್ಸೂರ್ ಅಲಿ ಖಾನ್ “ನಾನು ತ್ರಿಶಾ ಜೊತೆ ಆಕ್ಟ್ ಮಾಡುತ್ತಿದ್ದೇನೆ ಎಂದು ಗೊತ್ತಾದಾಗ, ಆ ಸಿನಿಮಾದಲ್ಲಿ ಬೆ-ಡ್‌ ರೂಮ್ ಸೀನ್ ಇರುತ್ತೆ ಎಂದು ನಾನು ಭಾವಿಸಿದ್ದೆ. ನಾನು ಆಕೆಯನ್ನು ಎತ್ತಿಕೊಂಡು ಬೆಡ್ ರೂಮ್ ಒಳಗೆ ಹೋಗುತ್ತೇನೆ ಎಂದು ಭಾವಿಸಿದ್ದೆ. ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ನಟಿಯರನ್ನು ಎತ್ತಿಕೊಂಡು ಬೆಡ್‌ ರೂಮ್‌ ಒಳಗೆ ಹೋಗುವ ದೃಶ್ಯವಿತ್ತು.

ನಾನು ಸಿಕ್ಕಪಟ್ಟೆ ರೇ-ಪ್ ಸೀನ್‌ಗಳಲ್ಲಿ ನಟಿಸಿದ್ದೇನೆ. ಇದು ನನಗೆ ಹೊಸದೇನು ಆಗಿರಲಿಲ್ಲ. ಆದರೆ, ಇವರು ಕಾಶ್ಮೀರದಲ್ಲಿ ಶೂಟ್ ಮಾಡುವಾಗ ಆಕೆಯನ್ನು ತೋರಿಸಲಿಲ್ಲ” ಎಂದು ಹೇಳಿದ್ದರು. ನಟನ ಈ ಹೇಳಿಕೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಟನ ಈ ಹೇಳಿಕೆಗೆ ನಟಿ ತ್ರಿಶಾರವರು ಗರಂ ಆಗಿದ್ದರು.

ನಟಿ ತ್ರಿಶಾ (Trisha) ರವರು ತಮ್ಮ ಟ್ವಿಟರ್ ಖಾತೆ (Twitter Account) ಯಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದು, “ಇತ್ತೀಚೆಗೆ ಮಿಸ್ಟರ್ ಮನ್ಸೂರು ಅಲಿ ಖಾನ್ ಅವರು ಒಂದು ವಿಡಿಯೋದಲ್ಲಿ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡಿರುವುದು ಗಮನಕ್ಕೆ ಬಂತು. ನಾನು ಈ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಇದು ಅವರಲ್ಲಿರುವ ಲೈಂ-ಗಿಕತೆ, ಅಗೌರವ, ಸ್ತ್ರೀ-ದ್ವೇಷ, ಕೆ-ಟ್ಟ ಅಭಿರುಚಿಯನ್ನು ಸೂಚಿಸುತ್ತದೆ. ನಾನು ಇಂತಹ ವ್ಯಕ್ತಿಯೊಂದಿಗೆ ನಟಿಸದೇ ಇದ್ದಿದ್ದಕ್ಕೆ ಕೃತಜ್ಞನಾಗಿದ್ದೇನೆ.

ಅವರು ಅದೆಷ್ಟೇ ಕೋರಿಕೊಂಡರೂ ನನ್ನ ವೃತ್ತಿ ಬದುಕಿನಲ್ಲಿ ಮತ್ತೆ ಅವರೊಂದಿಗೆ ನಟಿಸುವುದಿಲ್ಲ. ಇಂತಹವರು ಮನುಕುಲಕ್ಕೆ ಕೆಟ್ಟ ಹೆಸರು” ಎಂದು ಹೇಳಿದ್ದರು. ನಟಿ ತ್ರಿಶಾರವರಿಗೆ ಪರವಾಗಿ ನಿಂತಿರುವ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು, “ನಾವೆಲ್ಲರೂ ಒಂದೇ ತಂಡದಲ್ಲಿ ಕೆಲಸ ಮಾಡಿದ್ದರಿಂದ ಶ್ರೀ ಮನ್ಸೂರ್ ಅಲಿ ಖಾನ್ ಮಾಡಿದ ಸ್ತ್ರೀ-ದ್ವೇಷದ ಕಾಮೆಂಟ್‌ಗಳನ್ನು ಕೇಳಿ ಅಸಮಾಧಾನ ಮತ್ತು ಕೋಪ ಬಂದಿದೆ.

ಮಹಿಳೆಯರು, ಸಹ ಕಲಾವಿದರು ಮತ್ತು ಈ ವೃತ್ತಿಯಲ್ಲಿರುವವರಿಗೆ ಗೌರವ ನೀಡುವುದರಲ್ಲಿ ಯಾವುದೇ ರಾಜಿ ಇಲ್ಲ. ನಾನು ಈ ನಡವಳಿಕೆಯನ್ನು ಸಂಪೂರ್ಣವಾಗಿ ವಿ-ರೋಧಿಸುತ್ತೇನೆ.” ಎಂದಿದ್ದಾರೆ.ಇತ್ತ ನಟಿಯ ಪರವಾಗಿ ನೆಟ್ಟಿಗರು ಬೆಂಬಲ ಸೂಚಿಸುವ ಮೂಲಕ ಕಾಮೆಂಟ್ ಗಳು ಬರುತ್ತಿದ್ದು, ಲೋಕೇಶ್ ಕನಗರಾಜ್ ಬಾಂಡಿಂಗ್ ಮತ್ತು ಅವರ ಸಿನಿಮಾಗಳಲ್ಲಿ ಮನ್ಸೂರ್ ಅಲಿ ಖಾನ್‌ಗೆ ಅವಕಾಶ ಕೊಡುವುದು ಅಂತ್ಯ ಕಂಡಿದೆ.” ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾನೆ. ಹೀಗೆ ನಟಿಗೆ ಬೆಂಬಲ ನೀಡುವ ಸಾಕಷ್ಟು ಕಾಮೆಂಟ್ ಗಳು ಬರುತ್ತಿದೆ.

Leave a Reply

Your email address will not be published. Required fields are marked *