ನಟ ಮಹೇಶ್ ಬಾಬುರವರ ಮಗಳು ಸಿತಾರಾ ಜ್ಯುವೆಲರಿ ಜಾಹೀರಾತಿಗಾಗಿ ಪಡೆದ ಸಂಭಾವನೆವೆಷ್ಟು ಗೊತ್ತಾ? ಬಾಬ್ ರೇ.. ಇಷ್ಟೊಂದಾ?!!

ಸೆಲೆಬ್ರಿಟಿಗಳ ಮಕ್ಕಳು ಕೂಡ ತಮ್ಮ ತಂದೆ ತಾಯಿಯಂತೆ ಸಿಕ್ಕಾಪಟ್ಟೆ ಫೇಮಸ್ ಆಗಿರುತ್ತಾರೆ. ಅದಲ್ಲದೇ, ಖ್ಯಾತ ನಟ ಮಹೇಶ್ ಬಾಬು (Mahesh Babu) ರವರ ಮಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾಳೆ. ನಟ ಮಹೇಶ್ ಬಾಬು ದಕ್ಷಿಣ ಭಾರತೀಯ ಚಿತ್ರರಂಗದ khyta ನಟನಾಗಿದ್ದು ಗುರುತಿಸಿಕೊಂಡಿದ್ದು, ಕೋಟ್ಯಾಂತರ ಫ್ಯಾನ್ ಫಾಲೋವರ್ಸ್ ಹೊಂದಿದ್ದಾರೆ.

ಇನ್ನೂ ಮಹೇಶ್ ಬಾಬು ಮಗಳು ಸಿತಾರಾ (Sitara) ಕೂಡ ಮಹೇಶ್ ಬಾಬು ಹಾಗೇನೇ ಸಿಕ್ಕಾಪಟ್ಟೆ ಫೇಮಸ್ ಎಂದರೆ ತಪ್ಪಿಲ್ಲ. ನಟ ಮಹೇಶ್ ಬಾಬು ಮಗಳು ಸಿತಾರಾ (Sitara) ಇನ್ನು ಸಿನಿ ರಂಗಕ್ಕೆ ಪಾದಾರ್ಪಣೆ ಮಾಡಿಲ್ಲವಾದರೂ ಕೂಡ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ ಎನ್ನುವುದನ್ನು ಮತ್ತೆ ಮತ್ತೆ ಹೇಳಬೇಕಾಗಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಸಿತಾರಾಗೆ ಸಾಕಷ್ಟು ಸಂಖ್ಯೆಯ ಫಾಲ್ಲೋರ್ಸ್ ಇದ್ದಾರೆ.

ಈ ಹಿಂದೆಯಷ್ಟೇ ಒಂದು ಮಿಲಿಯನ್‌ ದಾಟಿದ ಖುಷಿಗೆ ಸಿತಾರಾ ತನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದರು. ಈ ಧನ್ಯವಾದ ಹೇಳಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದರು. ಇದೀಗ ನಟನ ಪುತ್ರಿ ಸಿತಾರಾ ಮತ್ತೆ ಸುದ್ದಿಯಾಗಿದ್ದಾಳೆ. ಈಗಾಗಲೇ ಸಿತಾರಾ ಸಾಕಷ್ಟು ಬ್ರ್ಯಾಂಡ್​ಗಳಿಗೆ ಅವಳು ಅಂಬಾಸಿಡರ್ (Ambassador) ಆಗುತ್ತಿದ್ದಾಳೆ.

ಇತ್ತೀಚೆಗಷ್ಟೇ ಸಿತಾರಾ ಜ್ಯುವೆಲರಿ ಕಂಪನಿ (Jewelery Company) ಒಂದಕ್ಕೆ ಪ್ರಚಾರ ರಾಯಭಾರಿ ಆಗಿದ್ದು, ಇದಕ್ಕಾಗಿ ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಜ್ಯುವೆಲರಿ ಕಂಪನಿಯ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಫೋಟೋಶೂಟ್ (Photoshoot) ಕೂಡ ಮಾಡಿಸಿದ್ದರು. ಈ ಜ್ಯುವೆಲರಿ ಕಂಪನಿಯ ಪ್ರಚಾರಕ್ಕಾಗಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಜ್ಯುವೆಲರಿ ಬ್ರ್ಯಾಂಡ್ ಅವರು ಅಮೆರಿಕದ ನ್ಯೂಯಾರ್ಕ್ (New York) ನಲ್ಲಿರುವ ಟೈಮ್ ಸ್ಕ್ವೇರ್ನಲ್ಲಿ ಸಿತಾರಾಳ ಫೋಟೋ ಅನ್ನು ಪ್ರದರ್ಶನ ಮಾಡಿದ್ದು, ಸದ್ಯಕ್ಕೆ ಅಪ್ಪನ ಹೆಸರನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾಳೆ. ಈ ಜ್ಯುವೆಲರಿ ಬ್ರ್ಯಾಂಡ್ ಆಗಿರುವ ಮಹೇಶ್ ಬಾಬುರವರ ಈ ಸುಂದರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.ಮಹೇಶ್ ಬಾಬುರವರ ಮಗಳು ಸಿತಾರರವರು ಡ್ಯಾನ್ಸರ್ ಕೂಡ ಆಗಿದ್ದು, ಆಗಾಗ ಡ್ಯಾನ್ಸ್ (Dance) ಮಾಡಿದ ವಿಡಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದನ್ನು ಕಾಣುತ್ತೇವೆ.

ಈ ಹಿಂದೆಯಷ್ಟೇ, ಸರ್ಕಾರು ವಾರಿ ಪಾಟ (Sarkar Wari Pata) ಸಿನಿಮಾದ ಪ್ರಮೋಷನಲ್ ಹಾಡಿನಲ್ಲಿ ಸಿತಾರಾ ಹೆಜ್ಜೆಹಾಕಿದ್ದಳು. ಈ ಮೂಲಕ ಆಕೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಳು. ಕೇವಲ ಹತ್ತು ವರ್ಷ ವಯಸ್ಸಾಗಿರುವ ಸಿತಾರಾ ಬಾಲ ನಟಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಅಪ್ಪನ ಸಿನಿಮಾಗಳನ್ನು ಹೆಚ್ಚಿನ ಮಟ್ಟದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಮೋಟ್ ಮಾಡುವಲ್ಲಿ ಗಮನ ಕೊಡುತ್ತಾಳೆ. ಅದಲ್ಲದೇ, ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಸಿತಾರಾ ಹಲವು ಸೆಲೆಬ್ರಿಟಿಗಳನ್ನು ಸಂದರ್ಶನ ಮಾಡಿದ್ದು, ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾಳೆ. .

Leave a Reply

Your email address will not be published. Required fields are marked *