ಚಂದನವನದ ಮುದ್ದಾದ ಜೋಡಿಯೆಂದರೆ ಅದುವೇ ಲವ್ಲೀ ಸ್ಟಾರ್ ಪ್ರೇಮ್ ದಂಪತಿಗಳು. ಚಂದನವನದ ನಟ ಲವ್ಲೀ ಸ್ಟಾರ್ ಪ್ರೇಮ್ (Lovely Star Prem) ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿಯು ಸಕ್ರಿಯರಾಗಿದ್ದಾರೆ. ಇತ್ತ ಇವರ ಇಬ್ಬರೂ ಮಕ್ಕಳು ಕೂಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು, ಓದು ಹಾಗೂ ನಟನೆ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.
ನಟ ನೆನಪಿರಲಿ ಖ್ಯಾತಿಯ ಪ್ರೇಮ್ (Prem) ಅವರದ್ದು ಪತ್ನಿ ಹಾಗೂ ಇಬ್ಬರೂ ಮಕ್ಕಳಿರುವ ಮುದ್ದಾದ ಕುಟುಂಬವಾಗಿದ್ದು ನಟ ಪ್ರೇಮ್ ಅವರು ಬಿಡುವು ಸಿಕ್ಕಾಗಲೆಲ್ಲಾ ಫ್ಯಾಮಿಲಿ ಜೊತೆಗೆ ಸಮಯ ಕಳೆಯುವುದನ್ನು ಕಾಣುತ್ತೇವೆ. ಆದರೆ ಇದೀಗ ಲವ್ಲೀ ಸ್ಟಾರ್ ಪ್ರೇಮ್ ದಂಪತಿಗಳ ಮುದ್ದಾದ ಫ್ಯಾಮಿಲಿ ಫೋಟೋಗಳು ವೈರಲ್ ಆಗಿವೆ.

ಈ ಫೋಟೋದಲ್ಲಿ ಲವ್ಲೀ ಸ್ಟಾರ್ ಪ್ರೇಮ್ ದಂಪತಿಗಳು ಹಾಗೂ ಇಬ್ಬರೂ ಮಕ್ಕಳು ವಿವಿಧ ರೀತಿಯಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.ನಟ ಪ್ರೇಮ್ ಹಾಗೂ ಜ್ಯೋತಿಯವರದ್ದು ಪಕ್ಕಾ ಲವ್ ಮ್ಯಾರೇಜ್. ಸಿನಿಮಾರಂಗಕ್ಕೆ ಎಂಟ್ರಿ ಕೊಡುವ ಮೊದಲೇ ಪ್ರೇಮ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಜ್ಯೋತಿ ಮತ್ತು ಪ್ರೇಮ್ ಅವರಿಗೆ ಬಹಳ ವರ್ಷದ ಪರಿಚಯವಿದ್ದ ಕಾರಣ, ಪ್ರೇಮ್ ಅವರನ್ನೇ ಮದುವೆ ಆಗುತ್ತೇನೆ ಜ್ಯೋತಿ ಹಠ ಹಿಡಿದು ಕುಳಿತಿದ್ದರಂತೆ. ಕೊನೆಗೆ ಎರಡು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದು ಇಬ್ಬರೂ ಮಕ್ಕಳ ಜೊತೆಯಲ್ಲಿ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಲವ್ಲೀ ಸ್ಟಾರ್ ಪ್ರೇಮ್ (Lovely Star Prem) ಹಾಗೂ ಜ್ಯೋತಿ (Jyothi) ದಂಪತಿಗಳಿಗೆ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು.
ನಟ ಪ್ರೇಮ್ ಮತ್ತು ಜ್ಯೋತಿ ಅವರ ಪ್ರೀತಿಯ ದಾಂಪತ್ಯ ಜೀವನಕ್ಕೆ 25 ವರ್ಷ ತುಂಬಿತ್ತು. ಈ ಸುಂದರ ದಿನದಂದು ನಟ ಪ್ರೇಮ್ ಮತ್ತು ಜ್ಯೋತಿ ಅವರ ಜೊತೆಗೆ ಬಾಲಿ (Bali) ಗೆ ತೆರಳಿದ್ದರು. ಅಲ್ಲಿ ನಟ ಪ್ರೇಮ್ ದಂಪತಿಗಳಿಬ್ಬರೂ ಜೊತೆಗೆ ಸಮಯ ಕಳೆದಿದ್ದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ನಟ ಪ್ರೇಮ್ ಮಗಳು ಅಮೃತಾ ಪ್ರೇಮ್ ಕೂಡ ಬಹಳ ಟ್ಯಾಲೆಂಟೆಡ್. ಹೀಗಾಗಿ ಬಣ್ಣದ ಲೋಕಕ್ಕೆ ಟಗರು ಪಲ್ಯ (Tagaru Palya) ಸಿನಿಮಾದ ಮೂಲಕ ಎಂಟ್ರಿ ಕೊಟ್ಟಿದ್ದಾಳೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಆದರೆ ಇದೀಗ ನಟಿ ಅಮೃತಾ ಪ್ರೇಮ್ ಅವರು ಟಗರು ಪಲ್ಯ’ ಚಿತ್ರದ ಟೈಟಲ್ ಟ್ರ್ಯಾಕ್ (Tittle Track) ಗೆ ಹಳ್ಳಿ ಹುಡುಗಿಯ ಗೆಟಪ್ ನಲ್ಲಿ ನಟಿ ಅಮೃತಾ ಪ್ರೇಮ್ ಅವರು ಸ್ಟೆಪ್ ಹಾಕಿದ್ದಾಳೆ.
ಈ ಡಾನ್ಸ್ ವಿಡಿಯೋವನ್ನು ಡಾಲಿ ಧನಂಜಯ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದ ಜೊತೆಗೆ “ನಾವ್ ಹಾಕಿದ್ದೇ ಸ್ಟೆಪ್ಪು, ಮಾಡಿದ್ದೆ ರೀಲೂ.. ಹಾಕೊ ಸ್ಟೆಪ್ ಹ್ಯಾಂಗಾರ ಇರ್ಲಿ.. ಹಾಡು ಟಗರುಪಲ್ಯದಾಗಿರ್ಲಿ.. ನಿಮ್ದು ಒಂದು ರೀಲ್ ಬರ್ಲಿ” ಎಂಬ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಈ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

ಉಮೇಶ್ ಕೆ. ಕೃಪ (Umesh K Krupa) ಕ್ಷನ್ ಕಟ್ ಹೇಳಿರುವ ‘ಟಗರು ಪಲ್ಯ’ಗೆ ಸ್ಯಾಂಡಲ್ವುಡ್ನ ಪ್ರತಿಭಾವಂತ ನಟ ನಾಗಭೂಷಣ್ (Nagabhushan) ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಬಿಡುಗಡೆಗೆ ತಯಾರಿ ಆರಂಭಗೊಂಡಿದ್ದುಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ.