ಕುರಿ ಮೇಯಿಸುವವರಿಗೆ ಸಹಾಯ ಮಾಡಿದ ಡಿ ಬಾಸ್, ಡಿ ಬಾಸ್ ಕೊಟ್ಟ ಹಣ ಎಷ್ಟು ಲಕ್ಷ ಗೊತ್ತಾ ಯಾರಿಗೂ ತಿಳಿಯದ ವಿಷಯ ಬಿಚ್ಚಿಟ್ಟ ಕುಮಾರ್ ಗೋವಿಂದ್!!!

ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅವರು ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡವರುಡವರು. ಅಭಿಮಾನಿಗಳ ಪ್ರೀತಿಯ ಡಿ ಬಾಸ್. ಅಂದಹಾಗೆ, ಸಿನಿಮಾದಲ್ಲಿ ಹೇಗೆ ಹೀರೋನೋ, ನಿಜ ಜೀವನದಲ್ಲಿ ಒಂದು ಲೆಕ್ಕದಲ್ಲಿ ಹೀರೋನೇ. ಕಷ್ಟ ಎಂದು ಯಾರು ಬಂದರೂ ಕೂಡ ತಮ್ಮ ಕೈಲಾದ ಮಟ್ಟಿಗಿನ ಸಹಾಯ ಮಾಡಿ ಕಳಿಸುವ ಮನೋಭಾವ ದರ್ಶನ್ ಅವರದ್ದು.

ಹೀಗಾಗಿಯೇ ದರ್ಶನ್ ಅವರಿಗೆ ವಿಶೇಷವಾದ ಅಭಿಮಾನಿಗಳ ಬಳಗವಿದೆ. ಸದ್ಯಕ್ಕೆ ಸಿನಿ ಕೆರಿಯರ್ ನಲ್ಲಿ ಬ್ಯುಸಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ (Aradhana Ram) ನಟಿಸಿರುವ ಕಾಟೇರ (Katera) ಸಿನಿಮಾ ಡಿಸೆಂಬರ್ 29ರಂದು ತೆರೆಗೆ ಬರಲಿದ್ದು, ಸದ್ಯಕ್ಕೆ ಚಿತ್ರ ತಂಡವು ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ.

ಕಾಟೇರಾ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುಮಾರ್ ಗೋವಿಂದ್ (Kumar Govind) ದರ್ಶನ್ ಸರಳತೆ ಹೇಗಿದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಖಾಸಗಿ ಟಿವಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದು, ‘ಕಾಟೇರ ಚಿತ್ರದ ಕೊನೆ ಭಾಗವನ್ನು ಪಾಂಡವಪುರದಲ್ಲಿ ಚಿತ್ರೀಕರಣ ಮಾಡುವಾಗ ಅಲ್ಲಿ ಒಬ್ಬ 250 ಕುರಿಗಳನ್ನು ಮೇಯಿಸಿಕೊಂಡು ಬಂದ್ರು. ದರ್ಶನ್ ಮತ್ತು ನಾನು ರೈತರಿಗೆ ಕನೆಕ್ಟ್‌ ಆಗುವ ವಿಚಾರಗಳು ಎನಾದರೂ ಇದ್ರೆ ಚರ್ಚೆ ಮಾಡುತ್ತೀವಿ ಹೀಗಾಗಿ ಬಾಸ್ ನೀವು ಇದೇ ತರ ಕುರಿ ಸಾಕಿರುವುದಾ ಎಂದು ಕೇಳಿದೆ.

ಇಲ್ಲ ಅಣ್ಣ ನಂದು ಬೇರೆ ಬ್ರೀಡ್‌ ಕುರಿ (ಬೇರೆ ತಳಿ) ಎಂದು ಕ್ಷಣವೇ ಕುರಿ ಮೇಯಿಸುವವರನ್ನು ಕರೆದರು. ಸಣ್ಣ ಪುಟ್ಟ ಮಾತುಕತೆ ಶುರುವಾಯ್ತು…ಇಷ್ಟು ಕುರಿ ಇಟ್ಟುಕೊಂಡಿರುವುದಕ್ಕೆ ಅದೆಲ್ಲಾ ಪಡೆದುಕೊಂಡಿದ್ದೀರಾ ಅಂತ ದರ್ಶನ್ ಕೇಳುತ್ತಾರೆ. ಪಾಪ ಕುರಿಕಾಯುವ ಹುಡುಗ ಅಣ್ಣ ಏನೂ ಗೊತ್ತಿಲ್ಲ ಅಣ್ಣ ಅಂತಾನೆ. ಆಗ ದರ್ಶನ್ ಏನ್ ಅಣ್ಣ ನೀವು ಇಷ್ಟು ಕುರಿ ಇರುವುದಕ್ಕೆ ಸರ್ಕಾರದಿಂದ ನಿಮಗೆ ಕಮ್ಮಿ ಅಂದ್ರು 50 ಲಕ್ಷ ಹಣ ಬರಬೇಕು ಅಂತ ಹೇಳುತ್ತಾರೆ.

ಅಲ್ಲಿ ಶೂಟಿಂಗ್‌ಗೆ ರೆಡಿಯಾಗಿ ಎಲ್ಲ ಕೆಲಸಗಳು ನಡೆಯುತ್ತಿದೆ…ಒಂದು ನಿಮಿಷಕ್ಕೆ ದರ್ಶನ್ ಅದನ್ನು ಮರೆತು ಅಲ್ಲಿದ ಸ್ನೇಹಿತರನ್ನು ಕರೆದು ಕುರಿಕಾಯುವ ಹುಡುಗ ಮೊಬೈಲ್‌ಗೆ ವಾಟ್ಸಪ್‌ ಓಪನ್ ಮಾಡಿ ಬ್ಯಾಂಕ್ ಅಕೌಂಟ್ ಓಪನ್ ಮಾಡಲು ತಕ್ಷಣವೇ ಸಹಾಯ ಮಾಡಿದರು. ನಿಮ್ಮ ಊರಿನಲ್ಲಿ ವೆಟರ್ನರಿ ಡಾಕ್ಟರ್ ಇರ್ತಾರೆ ಅವರಿಗೆ ಸರ್ಟಿಫಿಕೇಟ್ ಮಾಡಲು ಹೇಳಿ.

ದರ್ಶನ್ ಬಳಿ ಎಷ್ಟು ಮಾಹಿತಿ ಇದೆ.ಒಬ್ಬ ಸಾಮಾನ್ಯ ಮನುಷ್ಯನ ಮೇಲೆ ಸೂಪರ್ ಸ್ಟಾರ್ ಅಷ್ಟು ಕೇರ್ ಮಾಡಿ ಸಹಾಯ ಮಾಡುವ ಗುಣ ಅವರು ತುಂಬಾ ರಿಯಲ್ ಅನಿಸುತ್ತದೆ. ದಿನ ಯೋಚನೆ ಮಾಡಿಕೊಂಡು ಕುರಿ ಮೇಯಿಸುವವನ್ನು ಕರೆದು 50 ಲಕ್ಷ ಸಿಗುತ್ತೆ ಅಂದ್ರೆ ಅವನ ಸ್ಥಿತಿ ಯೋಚನೆ ಮಾಡಿದೆ. ನೀವು ನಿಜಕ್ಕೂ ಗ್ರೇಟ್ ಎಂದು ಬಾಸ್‌ಗೆ ಅಲ್ಲೇ ಹೇಳಿದೆ’ ಎಂದಿದ್ದಾರೆ.

Leave a Reply

Your email address will not be published. Required fields are marked *