BREAKING NEWS: ‘ಸ್ಯಾಂಡಲ್ ವುಡ್ ನಟ ಜಗ್ಗೇಶ್’ ಪಾದದ ಮೂಳೆ ಮುರಿತ!!

ಸ್ಯಾಂಡಲ್ ವುಡ್ ನಟ ಜಗ್ಗೇಶ್ ( Sandalwood Actor Jaggesh) ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳನ್ನು ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಅಪ್ಡೇಟ್ ನೀಡುವ ನಟ ಜಗ್ಗೇಶ್ (Actor Jaggesh)ಶಾಕಿಂಗ್ ವಿಚಾರವನ್ನು ಹೊರ ಹಾಕಿದ್ದಾರೆ.

ಆದರೆ ಇದೀಗ ಕಾಲು ಮುರಿದುಕೊಂಡು ನಟ ಜಗ್ಗೇಶ್ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್ (Twitter) ಮೂಲಕ ಮಾಹಿತಿ ನೀಡಿದ್ದಾರೆ. ಸಣ್ಣ ಅಚಾತುರ್ಯ. ನಡಿಗೆಯಿಂದ ಪಾದದ ಮೂಳೆ ಮುರಿತ. 6 ವಾರದ ದಿಗ್ಭಂಧನ ನಡಿಗೆಗೆ ಎಂದು ಬರೆದುಕೊಂಡಿದ್ದಾರೆ. ನಟ ಜಗ್ಗೇಶ್ ಹಂಚಿಕೊಂಡಿರುವ ಪೋಟೋದಲ್ಲಿ ಅವರ ಎಡಗಾಲಿನ ಮೊಳಕಾಲು ಕಳೆಗಿನಿಂದ ಪಾದದವರೆಗೆ ಬ್ಯಾಂಡೇಜ್ ಸುತ್ತಿಕೊಳ್ಳಲಾಗಿದೆ. ಹೀಗಾಗಿ ಅವರು ಕಾಲು ಮುರಿದುಕೊಂಡಿರುವುದು ತಿಳಿದಿದೆ.

ಇದೀಗ ನಟ ಜಗ್ಗೇಶ್ ಅವರು ಪಾದದ ಮೂಳೆಯ ಮುರಿತದ ಕಾರಣ 6 ವಾಲಗಳ ಕಾಲ ಸಂಪೂರ್ಣವಾಗಿ ಮನೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕಾಗಿದೆ. ಅದಲ್ಲದೇ ನಟನು ಪಾದದ ಮೂಳೆ ಮುರಿತ ಹೇಗೆ ಆಯ್ತು ಎನ್ನುವ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಆದರೆ ಈ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ.

jaggesh photo of leg fracture

ನಟನ ಆರೋಗ್ಯದ ಕುರಿತು ವಿಚಾರಿಸುವ ಮೂಲಕ ಕಾಮೆಂಟ್ ಮಾಡುತ್ತಿದ್ದಾರೆ. ಬೇಗ ಕಾಲು ಗುಣಮುಖವಾಗಲಿ ಎಂದು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಹಾರೈಸುತ್ತಿದ್ದಾರೆ.ಇತ್ತೀಚೆಗಷ್ಟೇ ಜಗ್ಗೇಶ್ ಅವರ ನಟನೆಯ ರಾಘವೇಂದ್ರ ಸ್ಟೋರ್ (Raghavendra Stores) ಸಿನಿಮಾವು ತೆರೆ ಕಂಡಿತ್ತು. ಆದರೆ ಈ ಸಿನಿಮಾ ವು ಅಷ್ಟೇನು ಯಶಸ್ಸು ಕಾಣಲಿಲ್ಲ.

ಸದ್ಯಕ್ಕೆ ಜಗ್ಗೇಶ್ ರಂಗನಾಯಕ (Ranganayaka) ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾಗೆ ಗುರು ಪ್ರಸಾದ್ (Guru Prasad) ನಿರ್ದೇಶನ ಮಾಡುತ್ತಿದ್ದಾರೆ. ಜಗ್ಗೇಶ್ ಮತ್ತು ಗುರು ಪ್ರಸಾದ್ ಕಾಂಬಿನೇಷನ್‌ನ ಸಿನಿಮಾವು ಮೂಡಿ ಬರುತ್ತಿದೆ. ವಿಶ್ರಾಂತಿಯಲ್ಲಿರುವ ಕಾರಣ ಸಿನಿಮಾದ ಶೂಟಿಂಗ್ ಗೆ ಹೋಗುತ್ತಿಲ್ಲ. ಆರೋಗ್ಯವು ಚೇತರಿಸಿಕೊಂಡ ಬಳಿಕವಷ್ಟೇ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Leave a Reply

Your email address will not be published. Required fields are marked *