dwarkesh actor :ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಬದುಕು ಕಟ್ಟಿಕೊಂಡ ಎಲ್ಲರಿಗೂ ಯಶಸ್ಸು ಎನ್ನುವುದು ಒಲಿದು ಬರುವುದಿಲ್ಲ. ಸಾವಿರಾರು ಕನಸು ಹೊತ್ತು ಈ ರಂಗಕ್ಕೆ ಎಂಟ್ರಿ ಕೊಡುವ ಅನೇಕರು ಗೆಲುವಿನ ಜೊತೆಗೆ ಸೋಲನ್ನು ಕಾಣುತ್ತಾರೆ. ಆದರೆ ಜನರಿಗೆ ಈ ಸಿನಿರಂಗದಲ್ಲಿರುವವರು ಶ್ರೀಮಂತರು ಎಂದೇ ಭಾವಿಸುತ್ತಾರೆ. ಅಷ್ಟೇ ಅಲ್ಲದೆ ಅವರಿಗೇನು ಕಡಿಮೆ ಕೈ ತುಂಬಾ ಸಂಪಾದನೆ ಮಾಡುತ್ತಾರೆ, ನೇಮ್ ಫೇಮ್ ಎರಡು ಇದೆ ಎಂದುಕೊಳ್ಳುತ್ತೇವೆ.
ಆದರೆ ಸಿನಿಮಾರಂಗದವರ ಬದುಕು ಕೂಡ ಕಷ್ಟದಿಂದ ತುಂಬಿರುತ್ತದೆ. ಅಂದಹಾಗೆ, ಸೋಲು ಹಾಗೂ ಗೆಲುವನ್ನು ಜೊತೆಯಾಗಿ ಕಂಡವರಲ್ಲಿ ನಟ ಕಮ್ ನಿರ್ದೇಶಕ ದ್ವಾರಕೀಶ್ ಅವರು ಒಬ್ಬರು. ನಟ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಗುರುತಿಸಿಕೊಂಡವರಲ್ಲಿ ದ್ವಾರಕೀಶ್ ಅವರು ಕೂಡ ಒಬ್ಬರು. ಆ ಕಾಲಕ್ಕೆ ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಸುಲಭ. ಅಷ್ಟೇ ಅಲ್ಲದೇ, ಈಗ ನಟರಿಗೆ ಸಿಗುವ ಕೋಟಿ ಕೋಟಿ ಸಂಭಾವನೆಯು ಆ ಕಾಲದ ಕಲಾವಿದರಿಗೆ ಸಿಗುತ್ತಿರಲಿಲ್ಲ..
ಲಕ್ಷ ಹಾಗೂ ಸಾವಿರ ರೂಪಾಯಿಗಳಲ್ಲಿಯೇ ಸಂಭಾವನೆಯು ನಿಗದಿಯಾಗುತ್ತಿತ್ತು. ಅದರಲ್ಲಿಯು ದೊಡ್ಡ ಮಟ್ಟಿಗೆ ಹಣ ಹಾಕಿ ಸಿನಿಮಾ ಮಾಡುವುದು ಕೂಡ ಕಷ್ಟಕರ. ಆದರೆ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ದ್ವಾರಕೀಶ್ ಅವರು ಅನೇಕ ಸಿನಿಮಾಗಳಿಗೆ ಬಂಡವಾಳ ಹಾಕಿ ಕೈ ಸೋಲು ಕಂಡದ್ದು ಇದೆ. ಆದರೆ ಅವೆಲ್ಲವನ್ನು ಮೆಟ್ಟಿ ನಿಂತು ತನ್ನದೇ ಆದ ಹೆಸರನ್ನು ಸಂಪಾದಿಸಿಕೊಂಡವರು ನಿರ್ದೇಶಕ ಕಮ್ ನಿರ್ಮಾಪಕ ದ್ವಾರಕೀಶ್.
ಇದನ್ನು ತನ್ನ ಜೀವನಕ್ಕೆ ಹೋಲಿಕೆ ಮಾಡಿಕೊಂಡು, ನಾನು ಹೇಗೆ ಸಿನಿಮಾರಂಗದಲ್ಲಿ ಯಶಸ್ಸಿನ ಉತ್ತುಂಗ ಏರಿದೆ ಹೇಗೆ ಕೆಳಗೆ ಬಿದ್ದೆ ಎಂದು ಹೇಳಿದ್ದಾರೆ. ವೀರ ಸಂಕಲ್ಪ ಸಿನಿಮಾವು 1964 ರಲ್ಲಿ ತೆರೆ ಕಂಡಿತ್ತು. ಬರೋಬ್ಬರಿ ಮೂರು ವರ್ಷಗಳ ಕಾಲ ಸಿನಿಮಾ ಚಿತ್ರೀಕರಣ ನಡೆದಿತ್ತು. ಈ ಸಿನಿಮಾಕ್ಕೆ ಒಬ್ಬ ನಾಯಕ ನಟಿಯನ್ನು ಹುಡುಕುತ್ತಿರುವಾಗಲೇ ನಟಿ ವಾಣಿಶ್ರೀ ಸಿಕ್ಕಿದ್ದರು.
ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ಹೆಸರು ಮಾಡಿದ್ದ ಎನ್. ಟಿ ರಾಮರಾವ್, ಎ ಶಿವಾಜಿ ಗಣೇಶನ್, ಎಂ ಡಿ ರಾಮಚಂದ್ರನ್ ಸೇರಿದಂತೆ ಮೊದಲಾದ ನಟರು ವಾಣಿಶ್ರೀ ಜೊತೆಗೆ ನಟಿಸಲು ಕಾಯುತ್ತಿದ್ದರಂತೆ. ಈ ಸಿನಿಮಾದ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ವಾಣಿಶ್ರೀ ನಟಿಸಿದ್ದರು ಎಂದು ದ್ವಾರಕೀಶ್ ಹೇಳಿದ್ದಾರೆ. ಹೌದು ನಟಿ ವಾಣಿಶ್ರೀಯವರ ನಿಜವಾದ ಹೆಸರು ರತ್ನಕುಮಾರಿ. ಇವರು ಒಂದು ಪುಟ್ಟ ಗುಡಿಸಲಿನಲ್ಲಿ ಇದ್ದರು.
ಆದರೆ ಇವರನ್ನು ಸಿನಿ ಲೋಕಕ್ಕೆ ಕರೆದುಕೊಂಡು ಬಂದದ್ದೇ ದ್ವಾರಕೀಶ್ ಎನ್ನುವುದನ್ನು ಹೇಳಿದ್ದು, ಹಾಸ್ಯ ನಟಿಯಾಗಿ ಸಿನಿಮಾರಂಗವನ್ನು ಪ್ರವೇಶಿಸಿದರು. ತದನಂತರದಲ್ಲಿ ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿಯಾಗಿ ಮಿಂಚಿದರು. ಒಟ್ಟಿನಲ್ಲಿ ಒಂದೊಳ್ಳೆ ಪ್ರತಿಭೆಗೆ ಅವಕಾಶ ಮಾಡಿಕೊಟ್ಟ ಕೀರ್ತಿ ನಟ ದ್ವಾರಕೀಶ್ ಅವರಿಗೆ ಸಲ್ಲುತ್ತದೆ.