ನನ್ನ ಹುಟ್ಟು ಹಬ್ಬಕ್ಕೆ ಯಶ್ ಫ್ಯಾನ್ಸ್ ಯಶ್ ಫ್ಯಾನ್ಸ್ ರೀತಿ ಮಾಡಬೇಡಿ ಎಂದು ಅಭಿಮಾನಿ ಗಳಿಗೆ ಮನವಿ ಮಾಡಿದ ನಟ ದುನಿಯಾ ವಿಜಯ್

ಸ್ಟಾರ್ ನಟರ ಹುಟ್ಟುಹಬ್ಬವೆಂದ ಕೂಡಲೇ ಫ್ಯಾನ್ಸ್ ಗಳು ತಮ್ಮ ಹುಟ್ಟುಹಬ್ಬದಂತೆ ಆಚರಿಸುತ್ತಾರೆ. ಎಲ್ಲೆಂದರಲ್ಲಿ ಸ್ಟಾರ್ ನಟರ ಕಟೌಟ್ ಗಳು ಹಾಗೂ ಮನೆಯ ಮುಂದೆ ಅಭಿಮಾನಿಗಳ ದಂಡೇ ತುಂಬಿರುತ್ತದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬಕ್ಕಾಗಿ ಕಟೌಟ್ ಹಾಕುವ ವೇಳೆ ವಿದ್ಯುತ್ ತಂತಿ ತಗುಲಿ ಮೂವರು ಮೃ- ತ ಘಟನೆಯು ಇನ್ನು ಹಸಿಯಾಗಿಯೇ ಇದೆ.

ಯಶ್ ಫ್ಯಾನ್ಸ್ (Yash Fans) ದುರಂತ ಸಾ-ವಿನ ಬಳಿಕ ನಟರು ತಮ್ಮ ನೆಚ್ಚಿನ ಅಭಿಮಾನಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಕರಿಚಿರತೆ ದುನಿಯಾ ವಿಜಯ್ (Duniya Vijay) ಅವರದ್ದು ಜನವರಿ 20 ರಂದು ಹುಟ್ಟಿದ ದಿನ. ಈ ಬಾರಿ ಹುಟ್ಟುಹಬ್ಬವನ್ನು ಜನವರಿ 20ರಂದು ಹುಟ್ಟೂರಾದ ಕುಂಬಾರನಹಳ್ಳಿ (Kumbaranahalli) ಯಲ್ಲಿ ಆಚರಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ನಟ ದುನಿಯಾ ವಿಜಯ್​ ಮಾತನಾಡಿದ್ದು, ಈ ಬಾರಿಯು ತಂದೆ-ತಾಯಿ ಸಮಾಧಿ ಬಳಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವೆ ಎಂದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನಟ ದುನಿಯಾ ವಿಜಯ್, ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದು, ಅಲ್ಲಿಯೇ ಅಭಿಮಾನಿಗಳನ್ನು ಭೇಟಿಯಾಗಲಿದ್ದೇನೆ.

ಕೈ ಮುಗಿದು ಕೇಳಿಕೊಳ್ಳುತ್ತೇನೆ ಯಾವ ಅಭಿಮಾನಿಗಳು ಸಹ ಈ ಬಾರಿ ನಡೆದುಕೊಂಡು ಬರಬೇಡಿ, ಯಾರು ಕೇಕ್ ಮತ್ತು ಹೂವಿನ ಹಾರ ತರಬೇಡಿ. ನನಗೆ ನಿಮ್ಮ ಜೊತೆಗೆ ಕುಳಿತು ಪ್ರೀತಿಯಿಂದ ಊಟ ಮಾಡುವ ಆಸೆಯಿದೆ. ಜನವರಿ 20ರಂದು ಬೆಳಿಗ್ಗೆ ಎಲ್ಲರೂ ಸುರಕ್ಷಿತವಾಗಿ ಬನ್ನಿ. ಜನವರಿ 19ರವರೆಗೂ ನಮಗೆ ಸಿನಿಮಾ ಕೆಲಸ ಇದೆ. ಹೀಗಾಗಿ ಜ. 20ರಂದು ಎಲ್ಲರೂ ಬನ್ನಿ ಜೊತೆಯಲ್ಲಿ ಕುಳಿತು ಊಟ ಮಾಡೋಣ. ಯಾರು ನನ್ನ ಹುಟ್ಟುಹಬ್ಬದ ದಿನ ಫ್ಲೆಕ್ಸ್ ಬ್ಯಾನರ್ ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಹುಟ್ಟುಹಬ್ಬದ ಹಿನ್ನೆಲೆ ದುನಿಯಾ ವಿಜಯ್​, ಆನೇಕಲ್ ಬಳಿಯ ಕುಂಬಾರನಹಳ್ಳಿಯಲ್ಲಿ ಅಭಿಮಾನಿಗಳಿಗಾಗಿ ಭರ್ಜರಿ ಬಾಡೂಟ ವ್ಯವಸ್ಥೆ ಮಾಡಿದ್ದಾರೆ.ಸದ್ಯಕ್ಕೆ ನಟ ದುನಿಯಾ ವಿಜಯ್ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದುನಿಯಾ ವಿಜಯ್ ಅವರೇ ನಿರ್ದೇಶನ ಮಾಡಿರುವ ‘ಭೀಮ’ (Bheema) ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ಸಿನಿಮಾದ ಹಾಡು ಈಗಾಗಲೇ ಬಿಡುಗಡೆ ಆಗಿದ್ದು ವೈರಲ್ ಆಗುತ್ತಿವೆ. ಹಾಡುಗಳಿಂದ ಬಹಳಷ್ಟು ನಿರೀಕ್ಷೆಯನ್ನು ಹುಟ್ಟಿಸಿರುವ ಭೀಮದ ಅಬ್ಬರ ನೋಡಲು ವಿಜಿ ಫಾನ್ಸ್ ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *