ನಟ ದುನಿಯಾ ವಿಜಯ್ ಅವರಿಂದ ಪತ್ನಿ ಕೀರ್ತಿ ಪಟ್ಟಾಡಿ ದೂರವಾಗಿದ್ದಾರಾ? ಕೊನೆಗೂ ಎಲ್ಲಾ ಪ್ರಶ್ನೆಗಳಿಗೂ ಬಿತ್ತು ಬ್ರೇಕ್!

ಸಿನಿಮಾರಂಗ ಎಂದ ಮೇಲೆ ನಟ ನಟಿಯರು ಸಿನಿಮಾದ ಜೊತೆಗೆ ವೈಯುಕ್ತಿಕ ಜೀವನದ ಕುರಿತಾಗಿಯು ಸುದ್ದಿಯಾಗುವುದಿದೆ. ಈ ವಿಚಾರದಲ್ಲಿ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ (Duniya Vijay) ಅವರು ಕೂಡ ಸೇರಿದ್ದಾರೆ. ಫ್ಯಾಮಿಲಿ ವಿಚಾರವಾಗಿ ಸದಾ ಸುದ್ದಿಯಲ್ಲಿರುವ ದುನಿಯಾ ವಿಜಯ್ ಅವರ ವೈವಾಹಿಕ ಜೀವನವು ಒಂದಲ್ಲ ಒಂದು ಕಾರಣಕ್ಕೆ ಮುನ್ನಲೆಗೆ ಬರುವುದಿದೆ.

ಆದರೆ ಇದೀಗ ನಟ ದುನಿಯಾ ವಿಜಯ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಕೇಳಿ ಬರುತ್ತಿದೆ. ಹೌದು, ನಟನ ಪತ್ನಿ ಕೀರ್ತಿ ಪಟ್ಟಾಡಿ (Keerthi Pattadi) ಯವರು ಪತಿ ವಿಜಯ್‌ ಜೊತೆಗಿನ ಫೋಟೋಗಳು ಕಾಣಸಿಗುವುದಿಲ್ಲ. ಹೀಗಾಗಿ “ಪತಿ ಜತೆಗಿನ ಫೋಟೋ ಶೇರ್‌ ಮಾಡಿ ಪ್ಲೀಸ್‌” ಎಂದು ಮನವಿ ಮಾಡಿಕೊಂಡಿದ್ದರು.

ಹೀಗಿರುವಾಗ ಕೀರ್ತಿ ಇದ್ದಕ್ಕಿದ್ದಂತೆ ವಿಜಯ್ ಕುಮಾರ್ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ ಯುಸರ್‌ ನೇಮ್ ಬದಲಾಯಿಸಿದ್ದಾರೆ. ಹೀಗಾಗಿ ನಟ ದುನಿಯಾ ವಿಜಯ್ ಅವರ ಪತ್ನಿ ಕೀರ್ತಿಯವರು ದೂರವಾಗಿದ್ದಾರೆ ಎನ್ನುವ ಚರ್ಚೆಗಳು ಆಗುತ್ತಿದ್ದು, ಆದರೆ ಇದೀಗ ಕೀರ್ತಿಯವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನಟಿ ಕೀರ್ತಿಯವರಿಗೆ ಅಭಿಮಾನಿ ಸೋನಿ ಸದಾಶಿವಯೊಬ್ಬರು . ‘ನೀವು ದುನಿಯಾ ವಿಜಯ್ ಸರ್ ಜೊತೆಗಿದ್ದೀರಾ? ನಿಮ್ಮಿಬ್ಬರ ಫೋಟೋ ನೋಡಿಲ್ಲ’ ಎನ್ನುವ ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರ ನೀಡಿರುವ ಕೀರ್ತಿ ‘Always and Forever’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬಳಿಕ ಅಭಿಮಾನಿ ಸೋನಿಯವರು, ತುಂಬಾ ಸಿಂಪಲ್ ಮತ್ತು ಬ್ಯೂಟಿಫುಲ್ ಆಗಿ ಉತ್ತರ ಕೊಟ್ಡಿದ್ದಕ್ಕೆ ವಂದನೆಗಳು. ದೇವರು ನಿಮ್ಮಿಬ್ಬರನ್ನು ಚೆನ್ನಾಗಿ ಇಡಲಿ’ ಎಂದಿದ್ದಾರೆ. ಕೊನೆಗೆ ಕೀರ್ತಿ ಪಟ್ಟಾಡಿ, ‘ನೀವು ಇಷ್ಟು ಕೈಂಡ್ ಆಗಿದ್ದು ಸಪೋರ್ಟ್ ಮಾಡುತ್ತಿರುವುದಕ್ಕೆ ವಂದನೆಗಳು’ ಎಂದು ಹೇಳಿದ್ದು, ಈ ಪೋಸ್ಟ್ ವೊಂದು ವೈರಲ್ ಆಗುತ್ತಿದೆ. ಈ ಪೋಸ್ಟ್ ಮೂಲಕ ಅಭಿಮಾನಿಗಳ ಎಲ್ಲಾ ಪ್ರಶ್ನೆ ಗಳಿಗೂ ಉತ್ತರ ಸಿಕ್ಕಿದಂತಾಗಿದೆ.

Leave a Reply

Your email address will not be published. Required fields are marked *