ಬೆಡ್ ಗಾಗಿ ಶ್ವಾನದ ಜೊತೆಗೆ ಜಗಳ ಮಾಡುತ್ತಿರುವ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ, ಇಲ್ಲಿದೆ ನೋಡಿ ಅಪರೂಪದ ದೃಶ್ಯ

ಕನ್ನಡ ಖ್ಯಾತ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ (Big Boss) ನಲ್ಲಿ ಚಿರಪರಿಚಿತವಾಗಿರುವ ಜೋಡಿಯೆಂದರೆ ಅದುವೇ ನಟಿ ದಿವ್ಯಾ ಉರುಡುಗ (Divya Uruduga) ಹಾಗೂ ಅರವಿಂದ್ ಕೆಪಿ (Aravind KP). ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಈ ಜೋಡಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿರುತ್ತದೆ. ಇದೀಗ ಬಿಗ್ ಬಾಸ್ ಖ್ಯಾತಿಯ ಅರವಿಂದ್ ಕೆಪಿಯವರು ದಿವ್ಯಾ ಉರುಡುಗರವರ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಬೈಕ್ ರೇಸರ್ ಅರವಿಂದ್ ಕೆಪಿ (Bike Racer) ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ನಟಿ ದಿವ್ಯಾ ಉರುಡುಗರವರು ಬೆಡ್ ಗಾಗಿ ಶ್ವಾನದ ಜೊತೆಗೆ ಜಗಳ ಮಾಡುತ್ತಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡು, “ಕರಿ ನನ್ ಮಗ ಕುಳ್ಳಿ ನನ್ನ ಮಗಳು ಹಾಸಿಗೆಗಾಗಿ ಜಗಳ. ಜಗಳದ ನಂತರ ಅವರು ಒಂದೇ ಹಾಸಿಗೆಯ ಮೇಲೆ ಮಲಗಿದ್ದರು” ಎಂದು ಬರೆದುಕೊಂಡಿದ್ದರು. ಈ ವಿಡಿಯೋಗೆ ತೊಂಭತ್ತೇಳು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಅದಲ್ಲದೇ ಇತ್ತೀಚೆಗಷ್ಟೇ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಅವರ ರೋಮ್ಯಾಂಟಿಕ್ ಫೋಟೋ (Romantic Photos)ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಈ ಇಬ್ಬರೂ ಒಟ್ಟಿಗೆ ಡಿನ್ನರ್ (Dinner) ಮಾಡಿದ್ದಾರೆ. ಈ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರು ಊಟ ಮಾಡುತ್ತಾ ಒಂದಿಷ್ಟು ತರ್ಲೆ ಮಾಡಿದ್ದು, ಈ ಫೋಟೋದಲ್ಲಿ ಆ ದೃಶ್ಯಗಳನ್ನು ನೋಡಬಹುದು.

ಅಂದಹಾಗೆ, ನಟಿ ಕಮ್ಬಿ ಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಪ್ರೀತಿ ವಿಚಾರವು ಎಲ್ಲರಿಗೂ ತಿಳಿದಿದೆ. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದ ಈ ಇಬ್ಬರ ನಡುವೆ ಒಳ್ಳೆಯ ಗೆಳೆತನವಿತ್ತು. ತದನಂತರದಲ್ಲಿ ಇವರಿಬ್ಬರ ನಡವಳಿಕೆ ನೋಡಿದಾಗ ಇವರಿಬ್ಬರ ನಡುವೆ ಪ್ರೀತಿ ಚಿಗುರಿದೆ ಎನ್ನಲಾಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕವು ಜೊತೆಗೆ ಇದ್ದಾರೆ.

ದಿವ್ಯಾ ಉರುಡುಗ ಕಿರುತೆರೆ ಧಾರಾವಾಹಿ ಹಾಗೂ ಕನ್ನಡ ಸಿನಿಮಾ ನಟಿಯಾಗಿ ಗುರುತಿಸಿಕೊಂಡಿದ್ದ ದಿವ್ಯಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು. ಧ್ವಜ (Dwaja), ಫೇಸ್ 2 ಫೇಸ್ (Face To Face) ಮತ್ತು ರಾಂಚಿ (Ranchi) ಸಿನಿಮಾಗಳಲ್ಲಿ ನಟಿಸಿಸಿದ್ದಾರೆ. ಹುಲಿರಾಯ ಸಿನಿಮಾದಲ್ಲಿ ನಟಿಸುವ ಮೂಲಕ ತೆರೆ ಮೇಲೆ ಕಾಣಿಸಿಕೊಂಡರು.

ಆದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಅರವಿಂದ್ ಹಾಗೂ ದಿವ್ಯಾ ‘ಅರ್ದಂಬರ್ಧ ಪ್ರೇಮ ಕಥೆ’ (Ardambardha) ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾ ತೆರೆಗೆ ಬಂದ ಬಳಿಕ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ತಮ್ಮಿಬ್ಬರ ಮದುವೆಯ ಬಗ್ಗೆ ಈ ಜೋಡಿಯೇ ಅಧಿಕೃತವಾಗಿ ರಿವೀಲ್ ಮಾಡಬೇಕು.

Leave a Reply

Your email address will not be published. Required fields are marked *