ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ರವರು ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ. ಸಿನಿಮಾದಲ್ಲಿ ಬ್ಯುಸಿಯಾಗುವುದರ ಜೊತೆಗೆ ವೈಯುಕ್ತಿಕ ಜೀವನಕ್ಕೂ ಅಷ್ಟೇ ಮಹತ್ವವನ್ನು ನೀಡುತ್ತಾರೆ. ಈಗಾಗಲೇ ಧ್ರುವಸರ್ಜಾರವರದ್ದು ಮಡದಿ ಹಾಗೂ ಮಗಳಿರುವ ಮುದ್ದಾದ ಕುಟುಂಬ.
ಮಗಳು ಇನ್ನು ಸಣ್ಣವಳಿರುವಾಗಲೇ ನಟ ಧ್ರುವ ಸರ್ಜಾರವರು ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಹೇಳಿಕೊಂಡಿದ್ದರು. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ವಿಶೇಷ ವಿಡಿಯೋ (Special Video) ಮಾಡಿ ಶೇರ್ ಮಾಡಿಕೊಂಡಿದ್ದರು ನಟ ಧ್ರುವ ಸರ್ಜಾ. ಧ್ರುವ ಸರ್ಜಾ ಹಾಗೂ ಪ್ರೇರಣಾ ಸರ್ಜಾ (Prerana Sarja)ರವರಿಗೆ ಈ ಬಾರಿ ಗಂಡು ಮಗುವೇ ಆಗುವುದು ಎಂದು ಫ್ಯಾನ್ಸ್ ಗಳು ಹೇಳಿಯೇ ಬಿಟ್ಟಿದ್ದರು.

ಅದರಂತೆಯೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಗೌರಿ ಗಣೇಶ ಹಬ್ಬ (Gowri Ganesh Festival) ದಂದು ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. ಸರ್ಜಾ ಕುಟುಂಬದಲ್ಲಿ ಸಂಭ್ರಮವೋ ಸಂಭ್ರಮವು ಮನೆ ಮಾಡಿದೆ. ಧ್ರುವ ಸರ್ಜಾರವರು ಗಂಡು ಮಗುವಿಗೆ ತಂದೆಯಾದ ಸಂಭ್ರಮವು ಎದ್ದು ಕಾಣುತ್ತಿದೆ.
ಮಗನ ನೋಡಿ ಪತ್ನಿಯನ್ನು ಮಾತನಾಡಿಸಿಕೊಂಡು ಬಂದ ಧ್ರುವ ಸರ್ಜಾರವರು ಈ ಸಂತಸದ ಗಳಿಗೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ನಟ ಧ್ರುವ ಸರ್ಜಾ, “ಜನರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ ಈಗ ಚಿರು ಮಗನ ರೂಪದಲ್ಲಿ ಧ್ರುವ ಸರ್ಜಾ ಮಡಿಲು ಸೇರಿದ್ದಾರೆ ಎಂದು. ಜನರ ಮಾತಿನಂತೆ ಹಾಗೆ ನಡೆಯಲಿ.
ನಮ್ಮ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಂಭ್ರಮ ಮನೆ ಮಾಡಿದ ಮೊದಲು ರಾಯನ್ ಆಮೇಲೆ ನನ್ನ ಮಗಳು ಈಗ ಮಗ. ತಾಯಿ ಗರ್ಭಿಣಿ ಆಗಿರುವಾಗ ಮಗುವಿಗೆ ನಾಮಕರಣ ಮಾಡಬಾರದು ಎಂದು ಹೇಳಿದ್ದರು. ಅದಿಕ್ಕೆ ಹೆಸರಿಟ್ಟಿರಲಿಲ್ಲ ಹೀಗಾಗಿ ಒಟ್ಟಿಗೆ ಎರಡೂ ಮಾಡುತ್ತೇವೆ. ಫ್ಯಾಮಿಲಿಯಲ್ಲಿ ಮೂರು ಜನ ಮಕ್ಕಳಿದ್ದಾರೆ. ಎಲ್ಲರೂ ತುಂಬಾ ಹ್ಯಾಪಿ ಆಗಿದ್ದಾರೆ’ ಎಂದಿದ್ದಾರೆ.
‘ನಾನು ಮೊದಲು ಮೊಬೈಲ್ ಹಿಡಿದು Chi ಅಂತ ಟೈಪ್ ಮಾಡಿ ಓ ….ಆಮೇಲೆ ಅರ್ಜುನ್ ಅಂಕಲ್‌ಗೆ ಕಾಲ್ ಮಾಡಿದೆ. ಅಂಕಲ್ ನೋಡಿದರು ಖುಷಿ ಆಯ್ತು ಮೊದಲು ಅವರಿಗೆ ಹೇಳಿದ್ದು. ಅಣ್ಣನ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ನಾನು ಮೂರು ವರ್ಷಗಳಿಂದ ನಾನು ಅಣ್ಣನ ಸಮಾಧಿ ಬಳಿ ಮಲಗುತ್ತೀನಿ ಯಾರೋ ಅದನ್ನು ಎಡಿಟ್ ಮಾಡಿ ಕೆಲವು ಕ್ಷಣಗಳನ್ನು ವೈರಲ್ ಮಾಡಿದ್ದಾರೆ. ನಾನು ಎಲ್ಲೂ ಅಣ್ಣನ ಮಿಸ್ ಮಾಡಿಕೊಳ್ಳುತ್ತೀನಿ. ಆದರೆ ಎಲ್ಲೂ ತೋರಿಸಿಕೊಳ್ಳುವುದಿಲ್ಲ ಅಷ್ಟು ಖುಷಿ ಬೇಸರ ಮಾಡಿಕೊಂಡರೆ ನನ್ನ ತಂದೆತಾಯಿ ಬೇಸರ ಮಾಡಿಕೊಳ್ಳುತ್ತಾರೆ ಅದಿಕ್ಕೆ ಜಾಸ್ತಿ ಎಕ್ಸಪ್ರೆಸ್ ಮಾಡುವುದಿಲ್ಲ’ ಎಂದು ಹೇಳಿಕೊಂಡಿದ್ದಾರೆ.
‘ಹಬ್ಬದ ನನಗೆ ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ನನಗೆ ಎರಡನೇ ಮಗ. ನನ್ನ ಮಗಳಿಗೆ ಹೆಸರಿಟ್ಟಿಲ್ಲ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ದೊಡ್ಡ ಗಣ್ಯರ ಹುಟ್ಟುಹಬ್ಬದ ದಿನ ಹಬ್ಬದ ದಿನ ನನ್ನ ಪತ್ನಿ ಹುಟ್ಟುಹಬ್ಬ ದಿನ ಎಲ್ಲವೂ 18 ನಂಬರ್ ತುಂಬಾ ಖುಷಿಯಾಗುತ್ತದೆ. ಯಾವ ದಿನ ಮಗು ಹುಟ್ಟಿದ್ದರೂ ಓಕೆ ಯಾವ ಮಗು ಆಗಿದ್ದರೂ ಓಕೆ ಅಂತ ಇದ್ದೆ. ನಾರ್ಮಲರ್ ಡೆಲಿವರಿಯಲ್ಲಿ ತುಂಬಾ ಕಿರ್ಚಾಟ ಇರುತ್ತೆ ಅದಿಕ್ಕೆ ಗಾ-ಬರಿ ಆಗಿದ್ದೆ’ ಎಂದಿದ್ದಾರೆ. ಒಟ್ಟಿನಲ್ಲಿ ಧ್ರುವ ಸರ್ಜಾ ಕುಟುಂಬಕ್ಕೆ ಮತ್ತಷ್ಟು ರಂಗನ್ನು ಮಗ ತುಂಬಿದ್ದಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.