ಸರ್ಜಾ ಕುಟುಂಬದ ನಗುವೇ ರಾಯನ್ ರಾಜ್ ಸರ್ಜಾ (Rayan Raj Sarja). ಸರ್ಜಾ ಕುಟುಂಬದ ಕುಡಿ ಚಿರಂಜೀವಿ ಸರ್ಜಾ (Cheeranjeevi Sarja) ನನ್ನು ಕಳೆದುಕೊಂಡ ಕುಟುಂಬಕ್ಕೆ ರಾಯನ್ ಆಗಮನ ಖುಷಿ ನೀಡಿತ್ತು. ಇದೀಗ ರಾಯನ್ ನ ನಗುವಿನಲ್ಲಿ ಚಿರುವನ್ನು ಕಾಣುತ್ತಿದ್ದಾರೆ ಸರ್ಜಾ ಕುಟುಂಬ. ಇತ್ತ ಮೇಘನಾ ರಾಜ್ (Meghana Raj) ಕೂಡ ರಾಯನ್ ಎಂದರೆ ಪ್ರಾಣ. ತಂದೆಯಿಲ್ಲದ ಮಗನಿಗೆ ತಂದೆ ತಾಯಿ ಎರಡು ಆಗಿ ಮಗನಿಗೆ ಯಾವುದೇ ಕೊರತೆ ಕಾಡದಂತೆ ಬೆಳೆಸುತ್ತಿದ್ದಾರೆ.
ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಪುತ್ರ ರಾಯನ್ ತುಂಬಾ ಆಕ್ಟೀವ್ (Active) ಆಗಿದ್ದಾನೆ. ಇತ್ತ ಮೇಘನಾ ರಾಜ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಗನ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವುದಿದೆ. ಆದರೆ ಇದೀಗ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ತಮ್ಮ ಅಣ್ಣನ ಮಗ ರಾಯನ್ ಮುದ್ದಾಡಿರುವ ಫೋಟೋ ವೈರಲ್ ಆಗಿದೆ.

ಧ್ರುವ ಸರ್ಜಾ ತಮ್ಮ ಅಣ್ಣನ ಮಗ ಹಾಗೂ ತನ್ನ ಮಗಳ ಜೊತೆಗೂ ಟೈಮ್ ಸ್ಪೆಂಡ್ ಮಾಡುತ್ತಾರೆ. ಇಬ್ಬರು ಮಕ್ಕಳ ಜೊತೆಗಿನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲೂ ಶೇರ್ ಆಗಿ ಗಮನ ಸೆಳೆಯುತ್ತವೆ. ಆದರೆ ಕಳೆದ ಭಾನುವಾರದಂದು ಧ್ರುವ ಸರ್ಜಾ ಒಂದು ಕಾರ್ಯಕ್ರಮಕ್ಕೂ ಹೋಗಿದ್ದರು. ಆ ಸಮಯದಲ್ಲಿಯೇ ಕಾರ್‌ನಲ್ಲಿ ಕುಳಿತಿದ್ದ ರಾಯನ್ ಎತ್ತಿಕೊಂಡು ಮುದ್ದಾಡಿದ್ದಾರೆ. ಈ ಒಂದು ಅದ್ಭುತ ಕ್ಷಣವು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಅಮ್ಮನ ಜೊತೆಗೆ ತತ್ಸಮ ತದ್ಬವ ಚಿತ್ರದ “ದೂರಿ ಲಾಲಿ” ಹಾಡಿನಲ್ಲಿ ಕಾಣಿಸಿಕೊಂಡಿದ್ದನು. ಅಮ್ಮ-ಮಗನ ಈ ರೀಲ್ಸ್ ವಿಡಿಯೋ ವೊಂದು ಎಲ್ಲರ ಗಮನ ಸೆಳೆದಿತ್ತು. ‘ತತ್ಸಮ ತದ್ಭವ’ (Tatsama Tadbhava) ಚಿತ್ರದ ದೂರಿ ಲಾಲಿ ಹಾಡು ರಿಲೀಸ್ ಆಗಿತ್ತು. ಹೀಗಾಗಿ ಈ ಹಾಡಿನ ಕಾರಣ ತಮ್ಮ ಮಗ ರಾಯನ್ನನ್ನು ಮಲಗಿಸುವ ವಿಡಿಯೋ ಅನ್ನು ಅವರು ಇನ್ಸ್ಟಾಗ್ರಾಮ್ (Instagram) ನಲ್ಲಿ ಶೇರ್ ಮಾಡಿಕೊಂಡಿದ್ದರು.
ಈ ವಿಡಿಯೋದ ಕೊನೆಯಲ್ಲಿ ನಟಿ ಮೇಘನಾ ರಾಜ್ ಎಲ್ಲ ಅಮ್ಮಂದಿರಿಗೆ ಒಂದು ಚಾಲೆಂಜ್ ಕೂಡ ಹಾಕಿದ್ದರು. ಈ ವಿಡಿಯೋದಲ್ಲಿ ನಟಿ ಮೇಘನಾ ರಾಜ್ ಅವರು, “ನಿಮ್ಮ ಮಕ್ಕಳನ್ನು ನೀವು ಹೇಗೆಲ್ಲಾ ಮಲಗಿಸುತ್ತೀರಿ ಎನ್ನುವ ರೀಲ್ಸ್ ಮಾಡಿ ಅದನ್ನು ಅಪ್ಲೋಡ್ ಮಾಡಬೇಕು. ಮಗುವನ್ನು ಮಲಗಿಸುವಾಗ ದೂರಿ ಲಾಲಿ (Doori Laali) ಹಾಡನ್ನು ಹಾಡುತ್ತಿರಬೇಕು.
ಅದರಲ್ಲಿ ಅದೃಷ್ಟವಂತ ಮೂವರು ಅಮ್ಮಂದಿರಿಗೆ ನನ್ನನ್ನು ಭೇಟಿಯಾಗುವ ಅವಕಾಶ ಸಿಗುತ್ತದೆ. ಆ ಸಮಯದಲ್ಲಿ ನಾನು ಹಾಗೂ ನನ್ನ ಮಗ ಹಾಗೂ ಆ ಮೂವರು ಅಮ್ಮಂದಿರ ಜೊತೆ ಮಕ್ಕಳ ಬಗ್ಗೆ ಚರ್ಚೆ ಮಾಡುವ ಅವಕಾಶ ಸಿಗುತ್ತದೆ. ಇದು ದೂರಿ ಲಾಲಿ ಚಾಲೆಂಜ್ ಆಗಿದ್ದು, ನಿಮ್ಮನ್ನು ಮೀಟ್ ಮಾಡಲು ನಾನು ಕಾಯುತ್ತಿರುತ್ತೇನೆ” ಎಂದಿದ್ದರು. ತತ್ಸಮ ತದ್ಭವ ಸಿನಿಮಾದ ಮೂಲಕ ಕಮ್ ಬ್ಯಾಕ್ ಮಾಡುತ್ತಿರುವ ಮೇಘನಾ ರಾಜ್ ಅವರನ್ನು ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.