ನಟ ಧ್ರುವ ಸರ್ಜಾ (Actor Dhruva Sarja) ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಆಕ್ಷನ್ ಪ್ರಿನ್ಸ್ ವೈಯುಕ್ತಿಕ ಜೀವನದ ಕುರಿತು ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತನ್ನ ಮುದ್ದಾದ ಕುಟುಂಬ (Cute Family)ದ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ನಟ ಇದೀಗ ವಿಶೇಷ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಆದರೆ ಇದೀಗ ಗಂಡು ಮಗುವಿಗೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಗೌರಿ ಗಣೇಶ ಹಬ್ಬದ ದಿನವೇ ಸರ್ಜಾ ಕುಟುಂಬಕ್ಕೆ ಎರಡನೇ ಮಗುವಿನ ಆಗಮನವಾಗಿದೆ. ಈ ಸಂಭ್ರಮವೋ ನಟ ಧ್ರುವ ಸರ್ಜಾ ಮನೆಯಲ್ಲಿ ಮನೆ ಮಾಡಿದೆ. ಕಳೆದ ವರ್ಷ ಧ್ರುವ ಸರ್ಜಾ ಪತ್ನಿ ಪ್ರೇರಣಾ ಸರ್ಜಾ (Prerana Sarja) ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕ್ಷನ್ ಪ್ರಿನ್ಸ್‌ಗೆ ಮಗಳು ಜನಿಸಿದ್ದಾಳೆ ಎಂದು ಫ್ಯಾನ್ಸ್ ಖುಷಿ ಪಟ್ಟಿದ್ದರು.

ಆದಾದ ಬಳಿಕ ಕೆಲವು ತಿಂಗಳುಗಳ ನಂತರದಲ್ಲಿ ಧ್ರುವ ಸರ್ಜಾ ಮೊದಲ ಬಾರಿಗೆ ಮಗಳ ಮುಖವನ್ನು ಸೋಶಿಯಲ್ ಮೀಡಿಯಾ (Social Media) ಮೂಲಕ ರಿವೀಲ್ ಮಾಡಿದ್ದರು. ನಟ ಧ್ರುವ ಸರ್ಜಾ ಫೋಟೋ ಶೇರ್ ಮಾಡಿಕೊಂಡು, “ಸ್ನೇಹಿತರು, ಕುಟುಂಬಸ್ಥರಿಗೆ ನಮಸ್ಕಾರ. ನನ್ನ ಹೆಸರಿನ್ನೂ ಇಡಬೇಕಿದೆ. ನನಗೀಗ 7 ತಿಂಗಳ ವಯಸ್ಸು. ಈಗ ನಾನು ಬೆಳೆಯುತ್ತಿರುವ ಜರ್ನಿಯನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ.
ನನಗೆ ಒಂದು ತಿಂಗಳು ವಯಸ್ಸು ಇದ್ದಾಗ ತೆಗೆದ ಫೋಟೋಗಳನ್ನು ಶೇರ್ ಮಾಡಲು ಇಷ್ಟಪಡ್ತಿದ್ದೇನೆ. ಭವಿಷ್ಯದಲ್ಲಿ ನನ್ನ ಇನ್ನಷ್ಟು ಫೋಟೋಗಳನ್ನು ಶೇರ್ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನಗೆ ಬೇಕು. ಜೈ ಹನುಮಾನ್” ಎಂದು ಬರೆದುಕೊಂಡಿದ್ದರು. ಈ ಫೋಟೋಗಳಿಗೆ ಫ್ಯಾನ್ಸ್ ಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.
ಇನ್ನು ಧ್ರುವ ಸರ್ಜಾ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಧ್ರುವ ಸರ್ಜಾ ಮಗಳು ಆಟ ಸಾಮಾನುಗಳೊಂದಿಗೆ ಆಟವಾಡುತ್ತಿದ್ದಾಳೆ. ಈ ಹೊಸ ವಿಡಿಯೋ ನೋಡಿದ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಗ (Baby Boy) ಹುಟ್ಟಿದ ಖುಷಿಯಲ್ಲಿದ್ದಾ ಧ್ರುವ ಅವರು ಆಸ್ಪತ್ರೆ (Hospital) ಗೆ ಭೇಟಿ ನೀಡಿ ಪತ್ನಿಯನ್ನು ಮಾತನಾಡಿಸಿದ್ದು ಬಂದು ಬಳಿಕ ಮಾಧ್ಯಮದ ಮುಂದೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ವೇಳೆಯಲ್ಲಿ ಧ್ರುವ ಸರ್ಜಾ, ‘ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯ. ಎರಡನೇ ಮಗು ಆಗಿದೆ. ಲೆಕ್ಕದ ಪ್ರಕಾರ ನನಗೆ ಇದು ಮೂರನೇ ಮಗು. ರಾಯನ್ ನನ್ನ ಮೊದಲ ಮಗ. ಆ ಬಳಿಕ ಹೆಣ್ಣು ಮಗು ಹುಟ್ಟಿತು. ಅವಳಿಗೆ ಇನ್ನೂ ಹೆಸರು ಇಟ್ಟಿಲ್ಲ. ಈಗ ಮತ್ತೊಂದು ಮಗು ಆಗಿದೆ. ಮನೆಯಲ್ಲಿ ಈಗ ಮೂರು ಮಕ್ಕಳಿದ್ದಾರೆ. ಸದ್ಯ ಪ್ರೇರಣಾ, ಮಗ ಆರೋಗ್ಯವಾಗಿದ್ದಾರೆ’ ಎಂದಿದ್ದಾರೆ.
‘ಮಗು ಯಾವಾಗ ಹುಟ್ಟಿದರೂ ಅದು ಒಳ್ಳೆಯ ದಿನವೇ ಆಗಿರುತ್ತದೆ. ಇಂದು ಲೆಜೆಂಡರಿಗಳು ಹುಟ್ಟಿದ ದಿನ. ಗೌರಿ ಗಣೇಶ ಹಬ್ಬ ಬೇರೆ. ಹೀಗಾಗಿ ಸಖತ್ ವಿಶೇಷ. ಗಂಡು ಮಗು ಆಗಿದ್ರೂ, ಹೆಣ್ಣು ಮಗು ಆಗಿದ್ರೂ ಯಾವುದಾದ್ರೂ ಅದನ್ನು ನಾವು ಖುಷಿಯಿಂದಲೇ ಸ್ವೀಕರಿಸುತ್ತಿದ್ದೆವು. ಅಣ್ಣನ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ ಧ್ರುವ ಸರ್ಜಾ. ನಟ ಧ್ರುವ ಸರ್ಜಾ ಗಂಡು ಮಗುವಿಗೆ ತಂದೆಯಾದ ಖುಷಿಗೆ ಫ್ಯಾನ್ಸ್ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.