ಮಾವ ಅರ್ಜುನ್ ಸರ್ಜಾರವರ ಫಾರ್ಮ್ ಹೌಸ್ ನಲ್ಲಿ ನಾಟ್ ಧ್ರುವ ಸರ್ಜಾ ಹಸು ಕರುವನ್ನು ಮುದ್ದು ಮಾಡುತ್ತಿರುವ ವಿಶೇಷ ಫೋಟೋ ಇಲ್ಲಿದೆ ನೋಡಿ!!

ಚಂದನವನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಹೊರತು ಪಡಿಸಿ ಇನ್ನಿತ್ತರ ವಿಚಾರಗಳಿಂದ ಸುದ್ದಿಯಾಗುತ್ತಾರೆ. ವೃತ್ತಿ ಜೀವನ ಹಾಗೂ ವೈಯುಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುವ ನಟ ಧ್ರುವ ಸರ್ಜಾರವರು ಇದೀಗ ಫಾರ್ಮ್ ಹೌಸ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಮಾವ ಅರ್ಜುನ್ ಸರ್ಜಾ (Arjun Sarja) ನವರ ಫಾರ್ಮ್ ಹೌಸ್ ನಲ್ಲಿ ಕರುವಿನ ಜೊತೆಗೆ ಸಮಯ ಕಳೆದಿದ್ದಾರೆ. ಈ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆರುನೂರಕ್ಕೂ ಅಧಿಕ ಲೈಕ್ಸ್ ಬಂದಿವೆ. ನಟ ಧ್ರುವ ಸರ್ಜಾ ಸಿನಿಮಾದ ಶೂಟಿಂಗ್ ನ ಬಿಡುವಿನ ಸಮಯದಲ್ಲಿ ಮಗಳ ಜೊತೆಗೆ ಸಮಯ ಕಳೆಯುತ್ತಾರೆ. ಆಗಾಗ ಧ್ರುವ ಸರ್ಜಾ ಮಗಳ ಜೊತೆಗೆ ಸಮಯ ಕಳೆಯುವ ವಿಡಿಯೋ ತುಣುಕು ವೈರಲ್ ಆಗುತ್ತಿರುತ್ತವೆ.

ಈ ಹಿಂದೆ ನಟ ಧ್ರುವ ಸರ್ಜಾ ಮಗಳ ಮುಖ ರಿವೀಲ್ ಮಾಡಿದ್ದರು. ಹೌದು ಮಗಳ ಫೋಟೋಶೂಟ್ ಮಾಡಿಸಿ ಧ್ರುವ ಫೋಟೋ ಶೇರ್ ಮಾಡಿಕೊಂಡು ಮುಖ ರಿವೀಲ್ ಮಾಡಿದ್ದರು..7 ತಿಂಗಳ ಬಳಿಕ ಮೊದಲ ಫೋಟೋ ಶೇರ್ ಮಾಡಿದ್ದರು. ಆದರೆ ಇದು 7 ತಿಂಗಳ ಮಗಳ ಫೋಟೋವಲ್ಲ. ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೋ ಇದಾಗಿದೆ. ಎಂದಿದ್ದರು.

ಈ ಫೋಟೋದ ಜೊತೆಗೆ ಕೆಲವು ಸಾಲು ಬರೆದುಕೊಂಡ ಧ್ರುವ ಸರ್ಜಾರವರು, “ಹಲೋ ಸ್ನೇಹಿತರೆ ಹಾಗೂ ಕುಟುಂಬದವರೆ, ನಿಮ್ಮೆಲ್ಲರಿಗೂ ನನ್ನ ಪ್ರೀತಿ. ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಮಗಳು ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್‌ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್” ಎಂದಿದ್ದರು.

ಸದ್ಯಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈಗಾಗಲೇ ನಟ ಧ್ರುವ ಸರ್ಜಾರವರ ಮಾರ್ಟಿನ್ (Martin) ಹಾಗೂ ಕೆಡಿ (KD) ಬಹಳ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಕೆಡಿ (KD) ಸಿನಿಮಾವು ಬಹಳ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಕೆವಿಎನ್‌ ಪ್ರೊಡಕ್ಷನ್‌ (KVN Production) ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಜೋಗಿ ಪ್ರೇಮ್ (Jogi Prem) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಧ್ರುವ ಸರ್ಜಾ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ತಾರೆಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.

Leave a Reply

Your email address will not be published. Required fields are marked *