ಮೊದಲ ಬಾರಿ ಪತ್ನಿ ಹಾಗೂ ಮಗಳ ಜೊತೆಗೆ ಕಾಣಿಸಿಕೊಂಡ ನಟ ಧ್ರುವ ಸರ್ಜಾ!! ಎಷ್ಟು ಕ್ಯೂಟ್ ಆಗಿದ್ದಾಳೆ ನೋಡಿ ಧ್ರುವ ಮಗಳು!!

ಚಂದನವನದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Action Prince Dhruva Sarja) ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದು, ನಟ ಕೆಡಿ (KD) ಹಾಗೂ ಮಾರ್ಟಿನ್ (Martin) ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ವೃತ್ತಿ ಜೀವನದ ಜೊತೆಗೂ ವೈಯುಕ್ತಿಕ ಜೀವನಕ್ಕೂ ಅಷ್ಟೇ ಮಹತ್ವ ನೀಡುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಗಳ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ.

ಇತ್ತೀಚೆಗಷ್ಟೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರವರು ಮಗಳ ಜೊತೆಗೆ ಆಟ ಆಡುತ್ತಿರುವ ಫೋಟೋಗೆ ಮಗಳು ಎಂದು ಬರೆದು ಪೋಸ್ಟ್ ಮಾಡಿದ್ದರು. ಇದೀಗ ಮಗಳು ಹಾಗೂ ಪತ್ನಿ ಜೊತೆಗೆ ವೈಟ್ ಅಂಡ್ ವೈಟ್ ಲುಕ್ ( White And White Look) ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟ ಧ್ರುವ ಸರ್ಜಾ ಮುದ್ದಿನ ಮಗಳನ್ನು ಎತ್ತಿಕೊಂಡಿರುವುದನ್ನು ಕಾಣಬಹುದು. ಈ ಫೋಟೋಗೆ ಒಂದು ಸಾವಿರಕ್ಕೂ ಅಧಿಕ ವ್ಯೂಸ್ ಬಂದಿದೆ.

ಧ್ರುವ ಸರ್ಜಾ (Dhruva Sarja) ಪತ್ನಿ ಪ್ರೇರಣಾ ಸರ್ಜಾ (Prerana Sarja) ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ”ಮಗಳೇ ನಮ್ಮ ಪ್ರಪಂಚ” ಎನ್ನುವ ಅರ್ಥದಲ್ಲಿ ಅವರ್ ಯೂನಿವರ್ಸಿ ಎಂದು ಕ್ಯಾಪ್ಷನ್‌ ನೀಡಿದ್ದರು. ಆದರೆ ಮಗುವಿನ ಮುಖವನ್ನು ಮಾತ್ರ ರಿವೀಲ್‌ ಮಾಡಿಲ್ಲ. ಈ ಪೋಟೋಗೆ ನೆಟಿಜನ್ಸ್‌ ಲೈಕ್ಸ್‌, ಕಮೆಂಟ್‌ ಮಾಡುತ್ತಿದ್ದರು. ‘ಸರ್ಜಾ ವಂಶದ ಪುಟ್ಟ ರಾಜಕುಮಾರಿ’ ಎಂದು ಅಭಿಮಾನಿಯೊಬ್ಬರು ಕಮೆಂಟ್‌ ಮಾಡಿದ್ದು, ಕೆಲವರು ‘ಮಗುವಿನ ಮುಖ ತೋರಿಸಿ’ ಎಂದು ಮನವಿ ಮಾಡಿದ್ದರು.

ಆದಾದ ಬಳಿಕ ಧ್ರುವ ಸರ್ಜಾ ಮಗುವಿನ ಮುಖವನ್ನು ರಿವೀಲ್ ಮಾಡಿದ್ದರು. ಕಳೆದ 7 ತಿಂಗಳಿಂದ ಮುದ್ದಾದ ಮಗಳ ಮುಖವನ್ನು ನಟ ರಿವೀಲ್ ಮಾಡಿರಲಿಲ್ಲ. ಫೋಟೋಶೂಟ್ ಮೂಲಕ ಧ್ರುವ ಪೋಸ್ಟ್ ಶೇರ್ ಮಾಡಿಕೊಂಡು ಮುಖ ರಿವೀಲ್ ಮಾಡಿದ್ದರು . 7 ತಿಂಗಳ ಬಳಿಕ ಮೊದಲ ಫೋಟೋ ಶೇರ್ ಮಾಡಿದ್ದರು. ಆದರೆ ಇದು 7 ತಿಂಗಳ ಮಗಳ ಫೋಟೋವಲ್ಲ. ಒಂದು ತಿಂಗಳಿದ್ದಾಗ ಕ್ಲಿಕ್ ಮಾಡಿದ ಫೋಟೋ ಇದಾಗಿದೆ. ಎಂದಿದ್ದರು.

“ಹಲೋ ಸ್ನೇಹಿತರೆ ಹಾಗೂ ಕುಟುಂಬದವರೆ, ನಿಮ್ಮೆಲ್ಲರಿಗೂ ನನ್ನ ಪ್ರೀತಿ. ನನಗೆ ಇನ್ನೂ ಹೆಸರಿಟ್ಟಿಲ್ಲ. ನನಗೆ ಈಗ 7 ತಿಂಗಳು. ನನ್ನ ಪಯಣವನ್ನು ಹಂಚಿಕೊಳ್ಳಲು ಖುಷಿ ಆಗುತ್ತದೆ. ಮಗಳು ಒಂದು ತಿಂಗಳ ಮಗುವಾಗಿದ್ದಾಗ ಕ್ಲಿಕ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಾನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಫೋಟೋಗಳು ಮತ್ತು ಅಪ್‌ಡೇಟ್ ಹಂಚಿಕೊಳ್ಳುತ್ತೇನೆ. ನಿಮ್ಮ ಆಶೀರ್ವಾದ ಇರಲಿ. ಜೈ ಹನುಮಾನ್” ಎಂದು ಧ್ರುವ ಸರ್ಜಾ ಬರೆದುಕೊಂಡಿದ್ದರು. ವೃತ್ತಿ ಜೀವನದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾರವರ ನಟನೆಯ ಕೆಡಿ ಹಾಗೂ ಮಾರ್ಟಿನ್ ಸಿನಿಮಾ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ.

Leave a Reply

Your email address will not be published. Required fields are marked *