ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡ ಗೀತಾ ಸೀರಿಯಲ್ ಖ್ಯಾತಿಯ ಧನುಷ್ ಗೌಡ, ಫ್ಯಾನ್ಸ್ ಫುಲ್ ಶಾಕ್!! ಹುಡುಗಿ ಯಾರು ನೋಡಿ!!

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗೀತಾ ಸೀರಿಯಲ್ ನಾಯಕ ನಟ ಧನುಷ್ ಗೌಡ (Dhanush Gowda) ಅವರು ಎಲ್ಲರಿಗೂ ಕೂಡ ಚಿರಪರಿಚಿತ. ಆದರೆ ಇದೀಗ ನಟ ಧನುಷ್ ಅವರು ಸದ್ದಿಲ್ಲದೇ ಎಂಗೇಜ್ಮೆಂಟ್ ಮಾಡಿಕೊಂಡು ಶಾಕ್ ನೀಡಿದ್ದಾರೆ. ಹೌದು ನಟ ಧನುಷ್ ಗೌಡರವರ ನಿಶ್ಚಿತಾರ್ಥ ಇಂದು ನಡೆದಿದೆ.

ನಟ ಧನುಷ್‌ ಮನಸ್ಸು ಮೆಚ್ಚಿದ ಹುಡುಗಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಅದು ಭವ್ಯಾ ಗೌಡ (Bhavya Gowda) ಅಲ್ಲ, ಧನುಷ್‌ ಅವರು ಸಂಜನಾ (Sanjana) ಎಂಬುವರ ಜೊತೆ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಗೀತಾ ಸೀರಿಯಲ್ ನಟಿ ಭವ್ಯ ಗೌಡ ಅವರು ತನ್ನ ಇಬ್ಬರು ತಂಗಿಯರು ಮತ್ತು ಸ್ನೇಹಿತರ ಜೊತೆಗೆ ಎಂಗೇಜ್ಮೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಅಷ್ಟೇ ಅಲ್ಲದೇ ಧನುಷ್ ಅವರ ಎಂಗೇಜ್ಮೆಂಟ್ ಫೋಟೋ (Engegment Photos) ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಫೈನಲಿ…. ಕಂಗ್ರಾಜುಲೇಶನ್ಸ್ ಧನು, ತುಂಬಾನೆ ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ. ಅದಲ್ಲದೇ ಉಂಗುರ ಬದಲಾಯಿಸುವ ವಿಡಿಯೋವನ್ನು ಹಂಚಿಕೊಂಡಿರುವುದು ವಿಶೇಷ.

ಎಂಗೇಜ್ಮೆಂಟ್ ಮಾಡಿಕೊಂಡಿರುವ ನಟ ಧನುಷ್ ಅವರಿಗೆ ಶುಭಾಶಯಗಳು ಹರಿದು ಬರುತ್ತಿವೆ.ಆದರೆ ಎಂಗೇಜ್ಮೆಂಟ್ ಫೋಟೋಗಳನ್ನು ನೋಡಿದ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಗೀತಾ ವಿಜಯ್ ಬೆಸ್ಟ್ ಜೋಡಿ ಹೀಗೆ ನಾನಾ ರೀತಿಯ ಕಾಮೆಂಟ್ ಗಳು ವ್ಯಕ್ತವಾಗಿವೆ. ಅದಲ್ಲದೇ ಎಲ್ಲರ ಮನಸ್ಸು ಗೆದ್ದಿದ್ದ ಈ ಜೋಡಿ ರಿಯಲ್ ಲೈಫ್ ನಲ್ಲಿಯೂ ರಿಯಲ್ ಜೋಡಿಗಳಾಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು.

ಗೀತಾ ಸೀರಿಯಲ್ ಶುರುವಾದ ಬಳಿಕ ಭವ್ಯಾ ಗೌಡ ಹಾಗೂ ಧನುಷ್ ಗೌಡರವರು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಹೀಗಾಗಿ ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹರಿದಾಡಿತ್ತು. ಆದರೆ ಈ ಇಬ್ಬರು ಸಾಕಷ್ಟು ಸಲ ತಾವು ಫ್ರೆಂಡ್ಸ್ ಎಂದು ಹೇಳಿದ್ದರು. ಆದರೆ ಸುಳ್ಳು ಹೇಳುತ್ತಿದ್ದಾರೆ ಎಂದೇ ಬಹುತೇಕರು ನಂಬಿದ್ದರು. ಆದರೆ ಇದೀಗ ಎಲ್ಲಾ ಗಾ-ಸಿಫ್ ಗಳಿಗೆ ಬ್ರೇಕ್ ಬಿದ್ದಿದ್ದು ಧನುಷ್ ಅವರು ಎಂಗೇಜ್ಮೆಂಟ್ ಆಗಿದ್ದು ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

Leave a Reply

Your email address will not be published. Required fields are marked *