ಕನ್ನಡ ಕಿರುತೆರೆಯ ನಟ ದೀಪಕ್ ಮಹಾದೇವ್ ಹಾಗೂ ನಟಿ ಚಂದನರವರ ಮುದ್ದಾದ ಫೋಟೋಗಳು ಹೇಗಿವೆ ಗೊತ್ತಾ? ಇಲ್ಲಿದೆ ನೋಡಿ ಅದ್ಭುತ ಜೋಡಿ!!

ಕನ್ನಡ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದು, ಪ್ರೀತಿಸಿ ಮದುವೆಯಾದ ಜೋಡಿಗಳು ಸಾಕಷ್ಟು ನಟ ನಟಿಯರು ಇದ್ದಾರೆ. ಅಂತಹ ಜೋಡಿಗಳಲ್ಲಿ ನಟ ದೀಪಕ್ ಮಹಾದೇವ್ (Deepak Mahadev) ಹಾಗೂ ಚಂದನ (Chandan) ಕೂಡ ಒಬ್ಬರಾಗಿದ್ದಾರೆ. ಆದರೆ ಇದೀಗ ದೀಪಕ್ ಮಹಾದೇವ್ (Deepak Mahadev) ಹಾಗೂ ಚಂದನ (Chandan) ಅವರ ಮುದ್ದಾದ ಫೋಟೋವೊಂದು ವೈರಲ್ ಆಗಿವೆ.

ಸದ್ಯಕ್ಕೆ ವೈರಲ್ ಆಗಿರುವ ಫೋಟೋದಲ್ಲಿ ನಟ ದೀಪಕ್ ಮಹಾದೇವ್ ದಂಪತಿಗಳು ಒಟ್ಟಿಗೆ ಕುಳಿತು ರೆಸ್ಟೋರೆಂಟ್ ನಲ್ಲಿ ಸಮಯ ಕಳೆದಿದ್ದಾರೆ. ನಟ ದೀಪಕ್ ಮಹಾದೇವ್ ಹಾಗೂ ಚಂದನ ದಂಪತಿಗಳು ಜೊತೆಯಾಗಿ ಜಾಲಿ ಮಾಡಿದ್ದು ವಿಭಿನ್ನವಾದ ಲುಕ್ ನಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋಗೆ ಆರುನೂರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

ನಟಿ ಚಂದನಾ ಮಹಾಲಿಂಗಯ್ಯ ಹಾಗೂ ನಟ ದೀಪಕ್ ಮಹಾದೇವ್ ಅವರು 2021 ಡಿಸೆಂಬರ್ 2 (December 2) ರಂದು ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು. ಹೌದು, ಬೆಂಗಳೂರಿನ (Banglore) ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‌ (Private Resort) ನಲ್ಲಿ ಈ ಮದುವೆಯು ಅದ್ದೂರಿಯಾಗಿ ನಡೆದಿತ್ತು. ಕಿರುತೆರೆಯ ಈ ಜೋಡಿಯ ಮದುವೆಗೆ ಸ್ಯಾಂಡಲ್ ವುಡ್ ನಟ ನಟಿಯರು ಸಾಕ್ಷಿಯಾಗಿದ್ದರು. ಮದುವೆಯಾದ ಬಳಿಕ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು.

ಕಳೆದ ಕೆಲವು ವರ್ಷಗಳಿಂದ ದೀಪಕ್ ಮಹಾದೇವ್ ಹಾಗೂ ಚಂದನಾ ಮಹಾಲಿಂಗಯ್ಯ ಪ್ರೀತಿಸುತ್ತಿದ್ದರು. ಆದರೆ ಎಂಗೇಜ್ಮೆಂಟ್ ಆಗುವವರೆಗೂ ಈ ಬಗ್ಗೆ ಎಲ್ಲಿಯು ರಿವೀಲ್ ಮಾಡಿರಲಿಲ್ಲ. ಆದರೆ ಎಂಗೇಜ್ಮೆಂಟ್ ಬಳಿಕ ಎಂಗೇಜ್ಮೆಂಟ್ ಫೋಟೋ ಶೇರ್ ಮಾಡಿಕೊಂಡು ಪ್ರೀತಿಯ ಬಗ್ಗೆ ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದರು. ಆದರೆ ಈ ಪೋಸ್ಟ್ ನೋಡುತ್ತಿದ್ದಂತೆ ಫ್ಯಾನ್ಸ್ ಅಚ್ಚರಿಯ ಜೊತೆಗೆ ಖುಷಿ ವ್ಯಕ್ತಪಡಿಸಿದ್ದರು.

ಗಂಡ ಹೆಂಡತಿ ಈ ಇಬ್ಬರೂ ಕೂಡ ಬದುಕಿಗಾಗಿ ಬಣ್ಣದ ಲೋಕವನ್ನು ನಂಬಿಕೊಂಡವರು. ಇಬ್ಬರೂ ಕೂಡ ಕಿರುತೆರೆಯ ಧಾರಾವಾಹಿಯಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದುಕೊಂಡಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ಪ್ರಸಾರವಾಗುತ್ತಿದ್ದ ‘ಸೀತಾ ವಲ್ಲಭ’ (Seetha Vallabha) ಧಾರಾವಾಹಿಯಲ್ಲಿ ನಟಿ ಚಂದನಾ ನಟಿಸಿದ್ದರು. ಇತ್ತ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದನಟ ದೀಪಕ್ ಮಹಾದೇವ್, ನಾ ನಿನ್ನ ಬಿಡಲಾರೆ (Na Ninna Bidalare), ನಾಯಕಿ (Nayaki) ಹಾಗೂ ಮರಳಿ ಮನಸ್ಸಾಗಿದೆ (Marali Manassagide) ನಟಿಸಿ ಪ್ರೇಕ್ಷಕ ವರ್ಗಕ್ಕೆ ಹತ್ತಿರರಾಗಿದ್ದರು.

Leave a Reply

Your email address will not be published. Required fields are marked *