ಸಿನಿ ಲೋಕದಲ್ಲಿ ತಮ್ಮ ನಟನೆಯ ಮೂಲಕ ಬೆರಗು ಮೂಡಿಸಿದವರು ಹಿರಿಯ ನಟ ದತ್ತಣ್ಣ. ಹೌದು, ದತ್ತಣ್ಣ ಎಂದೇ ಖ್ಯಾತಿಯಾರಾದ ಎಚ್. ಜಿ ದತ್ತಾತ್ರೇಯ ಅವರ ಪರಿಚಯ ಎಲ್ಲರಿಗೂ ಇದೆ. ಎಂಬತ್ತರ ವಯಸ್ಸಾದರೂ ಕೂಡ ಅವರಲ್ಲಿ ಕಾಣುವ ಹುಮ್ಮಸ್ಸು, ನೈಜವಾದ ನಟನೆಯ ಮೂಲಕ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಈಗಾಗಲೇ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ದತ್ತಣ್ಣ ಅವರು ಸಿನಿಮಾ ರಂಗಕ್ಕೆ ಬಂದದ್ದು 45ವರ್ಷ ದಾಟಿದ ಮೇಲೆ ಎಂಟ್ರಿ ಕೊಟ್ಟರು.
ಹಿರಿಯ ನಟ ದತ್ತಣ್ಣ ಅವರು ಚಿತ್ರದುರ್ಗದಲ್ಲಿ ಜನಿಸಿದರು. ಸಿನಿಮಾಕ್ಕೆ ಬರುವ ಮುಂಚೆ, ವಾಯುದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 20 ವರ್ಷಗಳ ಕಾಲ ನಟ ದತ್ತಣ್ಣ ವಾಯುದಳದಲ್ಲಿ ಸೇವೆ ಸಲ್ಲಿದ್ದರು. ನಿವೃತ್ತಿಯಾದ ನಂತರದಲ್ಲಿ ಸಿನಿಮಾದ ಕಡೆಗೆ ಮುಖ ಮಾಡಿದರು. ಅಂದಹಾಗೆ, ಓದಿನಲ್ಲಿ ಮುಂದೆ ಇದ್ದ ದತ್ತಣ್ಣ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಬಂದಿದ್ದರು.
ಪಿಯುಸಿಯಲ್ಲಿ ಅಧಿಕ ಅಂಕಗಳಿಸಿ ಇಂಜಿನಿಯರಿಂಗ್ ಪದವಿಯನ್ನು ಮದ್ರಾಸ್ ನಲ್ಲಿ ಮಾಡಿದರು. ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಸೇರಿಕೊಂಡರು. ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವೇಳೆಯಲ್ಲಿ ಭಾರತ ಹಾಗೂ ಚೀನಾ ದೇಶದ ಮಧ್ಯೆ ಒಡಕು ಉಂಟಾಗಿದ್ದ ಕಾರಣ ನೆಹರು ಸರ್ಕಾರ ವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿತ್ತು.
ದೇಶದಲ್ಲಿರುವ ಅಂತಿಮ ವರ್ಷ್ದ ವಿದ್ಯಾರ್ಥಿಗಳಿಗೆ ಸೇನೆಗೆ ಸೇರಲು ಅವಕಾಶವಿತ್ತು. ಹೀಗಾಗಿ ದತ್ತಣ್ಣ ಕೂಡ ಸೇನೆಗೆ ಆಯ್ಕೆಯಾಗಿ ವಾಯುದಳದಲ್ಲಿ ಕೆಲಸ ಮಾಡಿದರು. ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದಿದ್ದ ,ದೆಹಲಿಯ ಹೆಚ್‌ಎಎಲ್ ಅಕಾಡೆಮಿಯಲ್ಲಿ ಪ್ರಾಂಶುಪಾಲರಾಗಿದ್ದರು. ಬಾಲ್ಯದಿಂದಲೂ ನಟ ದತ್ತಣ್ಣ ಅವರಿಗೆ ನಾಟಕದ ಗೀಳಿತ್ತು.
ಆಗಿನ ಕಾಲದಲ್ಲಿ ಚಿತ್ರದುರ್ಗಕ್ಕೆ ಬರುತ್ತಿದ್ದ ಗುಬ್ಬಿ ಕಂಪೆನಿ ಹಾಗೂ ಜಮಖಂಡಿ ನಾಟಕ ಕಂಪೆನಿಗಳು ಇವರ ಮೇಲೆ ಪ್ರಭಾವ ಬೀರಿತ್ತು. ಈ ಸಿನಿಮಾ ರಂಗಕ್ಕೆ ಬರುವ ಮುಂಚೆ ಏರ್ ಫೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಹೆಚ್ಚಾಗಿ ಬೆಂಗಳೂರಿನಲ್ಲಿರಲ್ಲಿಲ್ಲ. ಚಂಡೀಗಢ, ದೆಹಲಿ, ಅಂಡಮಾನ್ ಮುಂತಾದೆಡೆ ಇದ್ದ ಕಾರಣ ಇನ್ನಿತ್ತರ ಕೆಲಸದಲ್ಲಿ ತೊಡಗಿಸಿ ಕೊಳ್ಳಲು ಸಾಧ್ಯವಾಗಿರಲಿಲ್ಲ.
1987ರಲ್ಲಿ ಅವರು ಬೆಂಗಳೂರಿನ ಎಚ್.ಎ.ಎಲ್‌ಗೆ ವರ್ಗವಾಗಿ ಬಂದ ನಂತರದಲ್ಲಿ ಟಿ.ಎಸ್. ರಂಗ ಅವರು ಮೊದಲ ಬಾರಿಗೆ 1 ಘಂಟೆ ಅವಧಿಯ ‘ಉದ್ಭವ್’ ಎಂಬ ಸಿನಿಮಾದ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು. ತದನಂತರದಲ್ಲಿ ನಾಗಾಭರಣರ ಆಸ್ಫೋಟ ಚಿತ್ರ ತೆರೆಗೆ ಬಂದಿತು. ಆ ಸಿನಿಮಾದಲ್ಲಿ ಖಳನಟನ ಪಾತ್ರಕ್ಕೆ ರಾಷ್ಟ್ರಮಟ್ಟದ ಶ್ರೇಷ್ಠ ಪೋಷಕನಟ ಪ್ರಶಸ್ತಿ ದೊರಕಿತು. ಆದಾದ ಬಳಿಕ ಶರವೇಗದ ಸರದಾರ, ಮಾಧುರಿ ಮುಂತಾದ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡರು.
ವೈದ್ಯೋ ನಾರಾಯಣೋ ಹರಿ ಎಂಬ ಧಾರವಾಹಿ ಮಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಈ ನಡುವೆ ಕೆಲಸದಲ್ಲಿದ್ದುದರಿಂದ ಹೆಚ್ಚಾಗಿ ನಟಿಸಲಾಗುತ್ತಿರಲ್ಲಿಲ್ಲ. ಅಲ್ಲಲ್ಲಿ ಒಂದೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರು. 1994ರಲ್ಲಿ ಕೆಲಸಕ್ಕೆ ರಾಜಿನಾಮೆ ನೀಡಿದ ನಂತರದಲ್ಲಿ ನಿರಂತರವಾಗಿ ಸಿನಿಮಾ, ನಾಟಕ, ಟಿವಿ ಮತ್ತು ರೇಡಿಯೋಗಳಲ್ಲಿ ನಟಿಸುತ್ತಾ ಸಾಗಿದ್ದಾರೆ. ವಯಸ್ಸು 80 ಆದರೂ ಸಿನಿಮಾದಲ್ಲಿನ ನಟನೆಯನ್ನು ನಿಲ್ಲಿಸಿಲ್ಲ. ಅದರ ಜೊತೆಗೆ ಹಿರಿಯ ನಟ ದತ್ತಣ್ಣ ಮದುವೆಯಾಗಿಲ್ಲ.
ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಖ್ಯಾತ ಹಿರಿಯ ನಟ ದತ್ತಣ್ಣ ಮದುವೆಯಾಗದೇ ಇರಲು ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚೆಗಷ್ಟೇ ಖಾಸಗಿ ಸುದ್ದಿ ವಾಹಿನಿಯಲ್ಲಿ ದತ್ತಣ್ಣ ಅವರಿಗೆ ಮದುವೆ ಯಾಕೆ ಆಗಿಲ್ಲ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಉತ್ತರ ನೀಡಿರುವ ಹಿರಿಯ ನಟ ದತ್ತಣ್ಣ ಶೂಟಿಂಗ್ ಅಂತ ದಿನಗಟ್ಟಲೆ ಹೋಗುತ್ತಿದ್ದರಿಂದ ಮದ್ವೆ ಬಗ್ಗೆ ಯೋಚನೆ ಮಾಡ್ಲೇ ಇಲ್ಲ. ಮೋರೋವರ್ ನನ್ನ ಪ್ರೊಫೆಷನ್ ಮದ್ವೆಗೆ ಸಫೋರ್ಟ್ ಮಾಡಿಲ್ಲ. ಅಷ್ಟಕ್ಕೂ ಮದ್ವೆ ಬಗ್ಗೆ ನನ್ನ ನಂಬಿಕೆನೇ ಬೇರೆ. ನನಗೆ ಮದುವೆಯಾಗಲು ಸ್ಪಷ್ಟವಾದ ಕಾರಣವೇ ಸಿಕ್ಕಿಲ್ಲ ಎಂದಿದ್ದಾರೆ.