ಪಾನಿಪುರಿ ಅಂಗಡಿಯವನಿಗೆ ಭರವಸೆಯಾದ ಸೆಲೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು, ಅಷ್ಟಕ್ಕೂ ಡಿ ಬಾಸ್ ಏನು ಹೇಳಿದ್ರು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಎಂದು ಎಲ್ಲರಿಗೂ ಚಿರಪರಿಚಿತರಾಗಿ, ಅಭಿಮಾನಿಗಳ ಪಾಲಿಗೆ ನೆಚ್ಚಿನ ಡಿ ಬಾಸ್ ಆಗಿ ದೊಡ್ಡ ಅಭಿಮಾನಿ ಗಳನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇವರು ಸಿನಿಮಾಗಳಲ್ಲಿ ಮಾತ್ರ ಹೀರೋ ಆಗದೇ ರಿಯಲ್ ಲೈಫ್ ನಲ್ಲಿಯು ಹೀರೋ ಆಗಿದ್ದಾರೆ.ಅಷ್ಟೇ ಅಲ್ಲದೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿಯು ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವನೆವನ್ನು ಹೊಂದಿದ್ದಾರೆ.

ನಟ ದರ್ಶನ್ ಅವರ ಮಾತುಗಳು ಈಗಾಗಲೇ ಅನೇಕರ ಜನರಿಗೆ ಸ್ಫೂರ್ತಿಯಾಗಿದೆ. ಅಷ್ಟೇ ಅಲ್ಲದೇ ನಟ ದರ್ಶನ್ ಅವರನ್ನು ಮಾದರಿಯಾಗಿ ತೆಗೆದುಕೊಂಡವರು ಹಲವರಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರಿಗೆ ನಿಮಗೆ ಸ್ಫೂರ್ತಿ ಯಾರು ಎಂದು ಪ್ರಶ್ನೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ದರ್ಶನ್, “ಪ್ರತಿದಿನ ಕಲಿಯುವಂಥದ್ದು ಇದ್ದೇ ಇರುತ್ತದೆ. ಯಾರದರೂ ಒಬ್ಬರನ್ನು ನೋಡಿ ಕಲಿಯುವುದು ಇದ್ದೇ ಇರುತ್ತದೆ.

ಯಾರೋ ಕೈ ಇಲ್ಲದವರು ದುಡಿಯುತ್ತಿರುತ್ತಾರೆ. ಭಿಕ್ಷೆ ಬೇಡುವುದು ಬಿಟ್ಟು ಸ್ವಾಭಿಮಾನದಿಂದ ಬದುಕುತ್ತಾರೆ. ಅವರನ್ನು ನೋಡಿ ಕಲಿಯುವುದು ಇದೆ. ಇತ್ತೀಚೆಗೆ ಒಂದು ವಿಡಿಯೋ ನೋಡಿದೆ. ನಾಗರಬಾವಿಯಲ್ಲಿ ಒಬ್ಬರು ಪಾನಿಪುರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇಂತಹ ವ್ಯಕ್ತಿಗಳು ನಮಗೆ ಸ್ಫೂರ್ತಿ. ಆತ ಭಿಕ್ಷೆ ಬೇಡದೇ ನಾಲ್ಕು ಜನರಿಗೆ ಕೆಲಸ ಕೊಟ್ಟಿದ್ದಾನಲ್ಲ. ಗ್ರೇಟ್ ಅಲ್ವಾ? ಆತನ ಅಂಗಡಿ ಹುಡುಕಿಕೊಂಡು ಹೋಗಿ ನಾವೆಲ್ಲ ತಿಂದ್ರೆ ಇನ್ನು ನಾಲ್ಕು ಜನಕ್ಕೆ ಸ್ಫೂರ್ತಿ ಆಗುತ್ತಾನೆ” ಎಂದು ದರ್ಶನ್ ಹೇಳಿದ್ದರು.

ದರ್ಶನ್ ಅವರ ಮಾತಿಗೂ ಸಹಾಯ ಮನೋಭಾವಕ್ಕೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡಬಹುದು.ಅಂದಹಾಗೆ, ವೀರೇಶ್ (Veeresh) ಎನ್ನುವ ವ್ಯಾಪಾರ ಆಗದ ಕಾರಣ ಪಾನಿಪುರಿ ಅಂಗಡಿ ಮುಚ್ಚಬೇಕು ಎಂದು ಕೊಂಡಿದ್ದರು. ಆದರೆ ಇದೀಗ ಇದೇ ವೀರೇಶ್ ಅವರು ದರ್ಶನ್ ಅವರ ಮಾತು ಕೇಳಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ನಾಗರಬಾವಿ ಸೆಕೆಂಡ್ ಸ್ಟೇಜ್ ಪಾಪುರೆಡ್ಡಿ ಪಾಳ್ಯದಲ್ಲಿ ಇವರ ‘ಹೊಟ್ಟೆಪಾಡು ಚಾಟ್ಸ್’ (Hottepadu Chats) ಅಂಗಡಿ ಇದೆ. ನಾನು ಅಲ್ಲಿಗೆ ಹೋಗಿ ಚಾಟ್ಸ್ ತಿನ್ನುತ್ತೇನೆ ಎಂದು ಸಂದರ್ಶನದಲ್ಲಿ ಹೇಳಿರುವುದು ವಿರೇಶ್ ಅವರಿಗೆ ಖುಷಿ ತಂದಿದೆ. ದರ್ಶನ್ ಅವರ ಮಾತು ಕೇಳಿ ಇದೀಗ ಮತ್ತೆ ವ್ಯಾಪಾರ ನಡೆಸುವ ನಿರ್ಧಾರವನ್ನು ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು ಈ ಬಗ್ಗೆ ಪಾನಿ ಪುರಿ ವ್ಯಾಪಾರಿ ವೀರೇಶ್ (Veeresh) ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡಿದ್ದು, “ಡಿ ಬಾಸ್ ನಮ್ಮನ್ನು ಗುರ್ತಿಸಿ ಮಾತನಾಡಿರುವುದು ಹೆಮ್ಮೆಯ ವಿಷಯ. ಬೀದಿಯಲ್ಲಿ ಪಾನಿಪುರಿ ಮಾರುವವರನ್ನು ಗುರ್ತಿಸಿದ್ದಾರೆ ಅಂದ್ರೆ ಅದು ನಮಗೆ ಹೆಮ್ಮೆಯ ವಿಷಯ. ಇದೊಂದು ತಿಂಗಳು ನೋಡೋಣ. ಡಿಸೆಂಬರ್‌ಗೆ ಅಂಗಡಿ ಕೊನೆ ಮಾಡೋ ಎಂದು ಅಂದುಕೊಂಡಿದ್ದೆ. ಆದರೆ ಡಿಬಾಸ್ ನನ್ನ ಬಗ್ಗೆ ಹೇಳಿದ್ದಾರೆ ಅಂದ್ರೆ ನನಗೆ ಖುಷಿ. ಎಲ್ಲಿ ಬೇಕಾದರೂ ಬದುಕಬಹುದು ಎನ್ನುವ ಭರವಸೆ ಬಂದಿದೆ”.

“ಬೆಳಗ್ಗಿ 150 ರಿಂದ 200 ಕರೆಗಳು ಬಂದಿದೆ. ರಿಸೀವ್ ಮಾಡೋಕು ಟೈಮ್ ಸಾಲುತ್ತಿಲ್ಲ. ಎಷ್ಟು ಗಂಟೆಗೆ ಅಂಗಡಿ ಓಪನ್ ಸರ್ ಎಂದು ಕೇಳುತ್ತಿದ್ದಾರೆ. ತುಂಬಾ ಹೆಮ್ಮೆಯ ವಿಷಯ. ಯಾರು ನಮ್ಮನ್ನು ಗುರುತು ಹಿಡಿದಿಲ್ಲ. ಅವರು ಕನ್ನಡ ಚಿತ್ರರಂಗದ ಸ್ಟಾರ್ ನಟ. ಅಂಗವಿಕಲರ ಬಗ್ಗೆ ಅವರು ಸಾಕಷ್ಟು ಮಾತನಾಡಿದ್ದಾರೆ.

ನಾನು ಅವರ ಅಭಿಮಾನಿ. ದೊಡ್ಡ ದೊಡ್ಡ ರೆಸ್ಟೋರೆಂಟ್ ಬಿಟ್ಟು, ಫುಟ್‌ಪಾತ್‌ನಲ್ಲಿರುವ ಪಾನಿಪುರಿ ಅಂಗಡಿ ಬಗ್ಗೆ ಮಾತನಾಡಿದ್ದಾರೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ದರ್ಶನ್ ಅವರ ಮಾತು ಒಬ್ಬ ಪಾನಿಪುರಿ ಅಂಗಡಿಯ ವ್ಯಾಪಾರಿಗೆ ಇಷ್ಟೊಂದು ಭರವಸೆವನ್ನು ನೀಡುತ್ತದೆ ಎನ್ನುವುದಾದರೆ ಅದಕ್ಕಿಂತ ದೊಡ್ಡದು ಮತ್ತೇನಿದೆ ಅಲ್ಲವೇ.

Leave a Reply

Your email address will not be published. Required fields are marked *