ಮುದ್ದಿನ ಮಗನ ಜೊತೆಗೆ ಕ್ಯಾಮೆರಾಗೆ ಪೋಸ್ ಕೊಟ್ಟ ಕಾಣಿಸಿಕೊಂಡ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ, ಅಪರೂಪದ ಫೋಟೋಗಳು ವೈರಲ್

ತೆರೆ ಮೇಲೆ ಮಾಸ್ ಡೈಲಾಗ್ ಹಾಗೂ ಹೀರೋಯಿಸಮ್ ನಿಂದಲೇ ಸೈ ಎನಿಸಿಕೊಂಡವರು ದರ್ಶನ್ ರಿಯಲ್ಲೈ ಫ್ ನಲ್ಲಿಯು ಹೀರೋ ಎಂದರೆ ತಪ್ಪಿಲ್ಲ. ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ (Challenging Star Darshan) ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿದ್ದಾರೆ. ನಟ ದರ್ಶನ್ ಅವರು ವೃತ್ತಿ ಜೀವನದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.

ಆದರೆ ಸಿನಿ ಕೆರಿಯರ್ ನಲ್ಲೂ ಎಷ್ಟೇ ಬ್ಯುಸಿಯಿದ್ದರೂ ಕೂಡ ಪತ್ನಿ ಹಾಗೂ ಮಕ್ಕಳಿಗೂ ಸಮಯ ನೀಡುತ್ತಾರೆ. ಮಡದಿ ಹಾಗೂ ಮಗನ ಜೊತೆಗೆ ಔಟಿಂಗ್ ತೆರೆಳುತ್ತಾರೆ. ಪತ್ನಿ ವಿಜಯಲಕ್ಷ್ಮಿ (Vijayalakshmi) ಯವರು ಸಂಸಾರವನ್ನು ನೋಡುಕೊಳ್ಳುವುದರ ಜೊತೆಗೆ ಪತಿ ದರ್ಶನ್ ಗೆ ಸಾಥ್ ನೀಡುತ್ತಿದ್ದಾರೆ. ಆದರೆ ಇದೀಗ ನಟ ದರ್ಶನ್ ಮಡದಿಯ ಫೋಟೋವೊಂದು ವೈರಲ್ ಆಗಿವೆ.

ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಜೊತೆಗೆ ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ನಟನ ಪತ್ನಿ ವಿಜಯಲಕ್ಷ್ಮಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೀಗಾಗಿ ವಿಜಯಲಕ್ಷ್ಮಿಯವರ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಆದರೆ ಇದೀಗ ವಿಜಯಲಕ್ಷ್ಮಿ ತನ್ನ ಮುದ್ದಿನ ಮಗ ವಿನೀಶ್ ಜೊತೆಗೆ ಇರುವ ಫೋಟೋಗಳು ವೈರಲ್ ಆಗಿವೆ. ಈ ಫೋಟೊ ನೋಡಿದ ಡಿ ಬಾಸ್ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ನಟ ದರ್ಶನ್ ಹಾಗೂ ವಿಜಯಲಕ್ಷ್ಮಿಯವರದ್ದು ಪಕ್ಕಾ ಲವ್ ಮ್ಯಾರೇಜ್. ಆ ಒಂದು ಭೇಟಿಯು ನಟ ದರ್ಶನ್ (Actor Darshan) ಹಾಗೂ ವಿಜಯಲಕ್ಷ್ಮಿ (Vijayalakshmi)ಯವರ ನಡುವೆ ಪ್ರೀತಿ ಚಿಗುರುವಂತೆ ಮಾಡಿತ್ತು. ದರ್ಶನ್ ಅವರು ತನ್ನ ಸ್ನೇಹಿತನ ಬರ್ತ್ ಡೇ ಸೆಲೆಬ್ರೇಶನ್ ಗೆ ಹೋಗಿದ್ದಾಗ ಅಲ್ಲಿ ವಿಜಯಲಕ್ಷ್ಮಿಯವರನ್ನು ಮೊದಲ ಸಲ ಭೇಟಿಯಾಗಿದ್ದರು.

ಅದಲ್ಲದೇ ಈ ವಿಜಯಲಕ್ಷ್ಮಿ ಅವರು ದರ್ಶನ್ ಅವರ ದೂರದ ಸಂಬಂಧಿಯಾಗಿದ್ದರು. ಮೊದಲ ಸಲವೇ ನೋಡಿದಾಗ ಪ್ರೀತಿ ಚಿಗುರಿತ್ತು. ಈ ಬಗ್ಗೆ ಆ ದಿನವೇ ತನ್ನ ತಾಯಿಯ ಬಳಿ ದರ್ಶನ್ ಹೇಳಿಕೊಂಡಿದ್ದರು. ಡಿ ಬಾಸ್ ಅವರ ತಾಯಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಇತ್ತ ದರ್ಶನ್ ಕೂಡ ಪ್ರೇಮನಿವೇದನೆ ಮಾಡಿಕೊಂಡಾಗ ವಿಜಯಲಕ್ಷ್ಮಿ ಗ್ರೀನ್ ಸಿಗ್ನಲ್ ಕೊಟ್ಟರು.ಕೊನೆಗೆ ಎರಡು ಕುಟುಂಬದವರು ಮಾತುಕತೆ ನಡೆಸಿ ಮದುವೆ ಮಾಡಲು ಒಪ್ಪಿದರು.

2003ರಲ್ಲಿ ಮೇ 19 ರಂದು ಧರ್ಮಸ್ಥಳದಲ್ಲಿ ನಟ ದರ್ಶನ್ ಹಾಗೂ ವಿಜಯ್ ಲಕ್ಷ್ಮಿಯವರು ಹೊಸ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ವಿನೀಶ್ (Vinish) ಎನ್ನುವ ಮುದ್ದಾದ ಮಗನಿದ್ದಾನೆ. ಆದರೆ ಈ ಹಿಂದೆ ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿಯೊಂದು ಕೇಳಿ ಬಂದಿತ್ತು. ಅದೆಲ್ಲವನ್ನು ಮರೆತು ಡಿ ಬಾಸ್ ದಂಪತಿಗಳು ಸುಖವಾಗಿ ಬದುಕುತ್ತಿದ್ದಾರೆ. ಕ್ರಾಂತಿ (Kranthi) ಸಿನಿಮಾದ ಬಳಿಕ ದರ್ಶನ್ ಅವರು ಕಾಟೇರ (Katera)ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *