ನಟ ದಳಪತಿ ವಿಜಯ್ ಮೇಲೆ ಚಪ್ಪಲಿ ಎಸೆತ, ಸ್ಟಾರ್ ನಟನ ಮೇಲೆ ಚಪ್ಪಲಿ ಎಸೆದಿದ್ದು ಯಾಕೆ ಗೊತ್ತಾ?

ಕಾಲಿವುಡ್‌ ನಟ ಹಾಗೂ ರಾಜಕಾರಣಿ ಕ್ಯಾಪ್ಟನ್‌ ವಿಜಯ್ ಕಾಂತ್‌ (Vijay Kanth) ಅವರು ಇಲ್ಲವಾಗಿದ್ದಾರೆ ರಾಜಕಾರಣಿ ಹಾಗೂ ನಟನಾಗಿ ಗುರುತಿಸಿಕೊಂಡಿದ್ದ ವಿಜಯ್ ಕಾಂತ್ ಡಿಸೆಂಬರ್ 28 ರಂದು ನಿ-ಧನರಾಗಿದ್ದರು. ವಿಜಯ್‌ಕಾಂತ್‌ ನಿ-ಧನಕ್ಕೆ ಇಡಿ ತಮಿಳು ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿತ್ತು.

ರಾಜಕಾರಣಿ, ನಟ ವಿಜಯಕಾಂತ್ ನಿಧನರಾದ ಬೆನ್ನಲ್ಲೇ ಡಿಎಂಡಿಕೆ ಮುಖ್ಯಸ್ಥರ ನಿವಾಸದಲ್ಲಿ ಅಂ-ತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೀಗಾಗಿ ಅವರ ಅಂತಿಮ ದರ್ಶನ ಪಡೆಯಲು ಚಿತ್ರರಂಗದ ಗಣ್ಯರು ಹಾಗೂ ಆಗಮಿಸಿದ್ದರು. ಅಷ್ಟೇ ಅಲ್ಲದೇ ಅಭಿಮಾನಿಗಳು ವಿಜಯ್ ಕಾಂತ್ ಅವರ ದರ್ಶನ ಪಡೆಯಲು ಕಾಯುತ್ತಿದ್ದರು.

ನಟ ದಳಪತಿ ವಿಜಯ್ (Dalapati Vijay) ಕೂಡ ಕ್ಯಾಪ್ಟನ್‌ಗೆ ಅಂತಿಮ ನಮನ ಸಲ್ಲಿಸಲು ಬಂದಿದ್ದರು. ಈ ವೇಳೆಯಲ್ಲಿ ಅವರ ಮೇಲೆ ಚಪ್ಪಲಿ ಎಸೆದು ಹ-ಲ್ಲೆ ನಡೆಸಿದ್ದಾರೆ. ಈ ವೇಳೆ ಕಿ-ಡಿಗೇಡಿಯೊಬ್ಬ ಅವರ ಮೇಲೆ ಚ-ಪ್ಪಲಿ ಎಸೆದಿದ್ದು, ಈ ವಿಡಿಯೋವೊಂದು ಸದ್ಯಕ್ಕೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗುತ್ತಿವೆ.

ಹೌದು, ಖ್ಯಾತ ನಟ ದಳಪತಿ ವಿಜಯ್‌ ಜನಸಾಗರದ ನಡುವೆಯೇ ದಾರಿ ಮಾಡಿಕೊಂಡು ಬಂದ ನಟ ವಿಜಯ್ ಅವರು ತೀರಾ ಭಾವುಕರಾಗಿದ್ದು, ವಿಜಯಕಾಂತ್ ಅವರ ಕುಟುಂಬದವರಿಗೆ ಧೈರ್ಯ ತುಂಬಿದದ್ದರು. ಆ ಬಳಿಕ ಆ ಅಭಿಮಾನಿಗಳ ನಡುವೆಯೇ ಮನೆಗೆ ಹಿಂತಿರುಗಲು ಯತ್ನಿಸಿದಾಗ ಈ ಘಟನೆಯೊಂದು ನಡೆದಿದೆ.

ದರ್ಶನ ಪಡೆದು ನಟ ವಿಜಯ್ ಅವರು, ಹಿಂತಿರುಗುತ್ತಿದ್ದ ವೇಳೆ ಮಾಧ್ಯಮದವರು ಅವರನ್ನು ಮಾತನಾಡಿಸಲು ಸುತ್ತುವರೆದಿದ್ದಾರೆ. ಈ ವೇಳೆಯಲ್ಲಿ ಪೊಲೀಸರು ಮತ್ತು ಅವರ ಭದ್ರತಾ ಸಿಬ್ಬಂದಿ ಅವರನ್ನು ಹೊರಗೆ ಕರೆದುಕೊಂಡು ಹೋಗಲು ಯತ್ನಿಸಿದ್ದು, ಈ ವೇಳೆ ಅವರ ಮೇಲೆ ಯಾರೋ ಕಿ-ಡಿಗೇಡಿಯೊಬ್ಬ ಅವರ ಮೇಲೆ ಚ-ಪ್ಪಲಿ ಎ-ಸೆದ ಪರಿಣಾಮವಾಗಿ ಅದುವ್ ಅವರ ಬೆನ್ನಿಗೆ ತಗುಲಿದೆ.

ಹೌದು, ಖ್ಯಾತ ಸ್ಟಾರ್‌ ನಟನ ಮೇಲೆ ಚಪ್ಪಲಿ ಎಸೆದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಫ್ಯಾನ್ಸ್ ಗಳು ಈ ಘಟನೆಯ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ನಟನ ಅಭಿಮಾನಿಗಳು ಈ ವರ್ತನೆ ಸರಿಯಲ್ಲ ಎಂದು ಕೆಲವರು ಪ್ರತಿಕ್ರಿಯಿಸುತ್ತಿದ್ದಾರೆ.ಇನ್ನು ಕೆಲವರು ಯಾವುದೇ ಕಲಾವಿದರಿಗೂ ಈ ರೀತಿ ಘಟನೆಗಳು ಆಗಬಾರದು ಎನ್ನುತ್ತಿದ್ದಾರೆ. ಈ ಘಟನೆಯು ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದನ್ನು ಕಾದು ನೋಡಬೇಕು ಅಷ್ಟೇ.

Leave a Reply

Your email address will not be published. Required fields are marked *