ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದು ಬಿ ಗೌಡರವರ ಮದುವೆಯ ಕ್ಷಣ ಹೇಗಿತ್ತು ಗೊತ್ತಾ? ಇಲ್ಲಿದೆ ವಿಶೇಷ ಕ್ಷಣದ ಫೋಟೋಗಳು

ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ನಟರಲ್ಲಿ ಚಂದು ಬಿ ಗೌಡ (Chandu B Gowda) ಕೂಡ ಒಬ್ಬರಾಗಿದ್ದಾರೆ. ಕನ್ನಡ (Kannada) ಕಿರುತೆರೆ ಮತ್ತು ತೆಲುಗು (Telugu) ಕಿರುತೆರೆಯಲ್ಲಿ ಚಂದು ಗೌಡರವರು ನಟರಾಗಿ ಗುರುತಿಸಿಕೊಂಡಿದ್ದಾರೆ. ನಟನೆಗೆ ಮಾತ್ರವಲ್ಲದೇ ನಿರೂಪಣೆಗೂ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿರುವ ಚಂದು ಬಿ ಗೌಡರವರಿಗೆರವರಿಗೆ ಎಲ್ಲಿಲ್ಲದ ಬೇಡಿಕೆಯಿದೆ.

ನಟ ಚಂದು ಬಿ ಗೌಡರನ್ನು ನೋಡಿದಾಗ ಈ ನಟ ಇನ್ನು ಬ್ಯಾಚುಲರ್ ಹಾಗೆ ಇದ್ದಾರೆ. ಆದರೆ ಚಂದು ಗೌಡರವರಿಗೆ ಈಗಾಗಲೇ ಮದುವೆಯಾಗಿದ್ದು ಒಂದು ಮಗು ಕೂಡ ಇದೆ. ಇದೀಗ ನಟ ಚಂದು ಬಿ ಗೌಡರವರ ಮದುವೆಯ ಫೋಟೋ (Marriage Photo) ವೊಂದು ವೈರಲ್ ಆಗಿದೆ. ನಟ ಚಂದು ಬಿ ಗೌಡರವರು ಒಂದೆರಡು ವರ್ಷದ ಹಿಂದೆ ಶಾಲಿನಿ (Shalini) ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕೊರೋನ ಕಾರಣದಿಂದ ಸಿಂಪಲ್ ಆಗಿ ಸರಳವಾಗಿ ವಿವಾಹ ಮಾಡಿಕೊಂಡಿದ್ದರು.

ಸದ್ಯಕ್ಕೆ ಚಂದು ಬಿ ಗೌಡರ ಮದುವೆಯ ಫೋಟೋ ವೈರಲ್ ಆಗಿದ್ದು, ಈ ಫೋಟೋ ನೋಡಿದರೆ ಈ ನಟನ ಮದುವೆ ಕಿರುತೆರೆಯ ಕಲಾವಿದರು ಆಗಮಿಸಿದ್ದರು. ಈ ಫೋಟೋಗೆ ಆರು ನೂರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಫ್ಯಾನ್ಸ್ ಫೋಟೋ ನೋಡಿ ಫುಲ್ ಖುಷ್ ಆಗಿದ್ದಾರೆ. ಚಂದು ಬಿ ಗೌಡರವರ ಪತ್ನಿ ಶಾಲಿನಿ ಮಾಡಲಿಂಗ್ (Modeling) ಕ್ಷೇತ್ರದಲ್ಲೂ ಗುರುತಿಸಿಕೊಂಡವರು. ಇವರಿಬ್ಬರ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದ ಜೋಡಿ ಮದುವೆಯಾಗಿ ಸುಖವಾಗಿ ಸಂಸಾರ ಮಾಡುತ್ತಿದೆ.

ಚಂದು ಬಿ ಗೌಡರವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿದ್ದರು. ಚಂದು ಬಿ ಗೌಡ, ‘ ಕುಟುಂಬಕ್ಕೆ ಸ್ವಾಗತ ಮಾಡಲು ಎಲ್ಲ ರೆಡಿಯಾಗಿದೆ” ಎಂದು ಚಂದು ಬಿ ಗೌಡ ಬರೆದುಕೊಂಡಿದ್ದರು. ತದನಂತರದಲ್ಲಿ ಚಂದು ಗೌಡ ಪತ್ನಿ ಶಾಲಿನಿ 2022 ರ ಆಗಸ್ಟ್ 14ರಂದು ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಪುಟ್ಟ ಲಕ್ಷ್ಮಿಯನ್ನು ಬರಮಾಡಿಕೊಂಡಿದ್ದರು.

ನಟ ಕಮ್ ನಿರೂಪಕನಾಗಿರುವ ಚಂದು ಬಿ ಗೌಡರವರ ಹಿನ್ನಲೆಯನ್ನು ಹೇಳುವುದಾದರೆ, ಲಕ್ಷ್ಮಿ ಬಾರಮ್ಮ (Lakshmi Baramma) ಧಾರಾವಾಹಿಯಲ್ಲಿ ಚಂದನ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿಕೊಂಡರು. ಈ ಧಾರಾವಾಹಿಯಿಂದ ನಟರೊಬ್ಬರು ಹೊರಗೆ ಹೋದ ಚಂದನ್ ಪಾತ್ರಕ್ಕೆ ಇವರು ಮಾಡಿದರು. ಈ ಧಾರಾವಾಹಿಗೂ ಮೊದಲು, ಗೃಹಲಕ್ಷ್ಮಿ (Gruhalakshmi), ತೆಲುಗಿನಲ್ಲಿ ತ್ರಿನಯನಿ (Trinayani) ನಟಿಸಿ ಸೈ ಎನಿಸಿಕೊಂಡಿದ್ದಾರೆ.

ರಾಬರ್ಟ್ (Robert) ಸಿನಿಮಾದಲ್ಲಿ ನಟಿಸಿ ಬೆಳ್ಳಿತೆರೆಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಚಾಟ್ ಕಾರ್ನರ್ (Chat Corner) ಎಂಬ ಟಾಕಿಂಗ್ ಶೋವು ಇವರ ನಿರೂಪಣೆಯ ಮೂಲಕ ಮೋಡಿ ಮಾಡಿದ್ದಾರೆ. ನಟ ಚಂದು ಗೌಡರವರಿಗೆ ಆಫರ್ ಗಳು ಬರುತ್ತಿದ್ದು ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *