ಹಾಸ್ಯನಟ, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಖ್ಯಾತಿಯ ಚಂದ್ರಪ್ರಭಾ ಹಿಟ್ ಅಂಡ್ ರನ್ ಪ್ರಕರಣ, ಗಂಭೀರ ಸ್ಥಿತಿಯಲ್ಲಿರುವ ಮಾಲ್ತೇಶ್, ಇಲ್ಲಿದೆ ಅಸಲಿ ವಿಚಾರ

ಹಾಸ್ಯನಟ, ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ (Gichchi gili gili reality show) ಖ್ಯಾತಿಯ ಚಂದ್ರಪ್ರಭಾ (Chandraprabha) ಅವರು ಅಪಘಾತ ಮಾಡಿ ಎಸ್ಕೆಪ್ ಆಗಿದ್ದಾರೆ ಎಂಬ ಆರೋಪವೊಂದುವೊಂದು ಕೇಳಿ ಬಂದಿದೆ. ಹೌದು, ಚಿಕ್ಕಮಗಳೂರು ಬಸ್ ನಿಲ್ದಾಣ (Chikkamanglore Bus Stand) ದ ಬಳಿ ರಾತ್ರಿ ಈ ಅ-ಪಘಾತ ನಡೆದಿದ್ದು, ಗಾ-ಯಾಳು ಮಾಲ್ತೇಶ್ (Malthesh) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆ (Hasan Private Hospital) ಗೆ ದಾಖಲಿಸಲಾಗಿದೆ. ಆದರೆ ಮಾಲ್ತೇಶ್ ಸ್ಥಿ-ತಿ ಗಂ-ಭೀರವಾಗಿದೆ ಎನ್ನಲಾಗಿದೆ. ಇತ್ತ ಮಗ ಸ್ಥಿತಿಯು ಗಂ-ಭೀರವಾಗಿರುವುದನ್ನು ಕಂಡು ಪೋಷಕರ ಪರಿಸ್ಥಿತಿಯು ಏನು ತೋಚದಂತೆ ಆಗಿದೆ.

ಕಾರ್ ಅ-ಪಘಾತದಲ್ಲಿ (Accident) ಗಾ-ಯಗೊಂಡಿರುವ ಮಾಲ್ತೇಶ್ ಕುಟುಂಬಸ್ಥರು ನಟನ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ವೇಳೆಯಲ್ಲಿ ಮಾಲ್ತೇಶ್ ಅಕ್ಕ ಶಿವಮ್ಮ, ಮಾಲ್ತೇಶ್ ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವ ವೇಳೆ ಹಿಂದಿನಿಂದ ಬಂದ ಕಾರ್ ಡಿ-ಕ್ಕಿ (Car C-ollided) ಹೊಡೆದಿದೆ. ಕಾರ್ ನಿಲ್ಲಿಸಿ ಏನಾಗಿದೆ ಅಂತ ನೋಡಬೇಕು ಅಲ್ಲವಾ? ಅವರಿಗೆ ಮಾನವೀಯತೆಯೂ ಇಲ್ಲವಾ” ಎಂದಿದ್ದಾರೆ.

“ಕೂಲಿ ಮಾಡ್ಕೊಂಡು ಜೀವನ ನಡೆಸುವ ಕುಟುಂಬ. ಮಾಲ್ತೇಶ್ ತಾಯಿ-ತಂದೆ ಕೂಲಿ ಮಾಡುತ್ತಾರೆ. ಅವನೇ ಕುಟುಂಬಕ್ಕೆ ಆಧಾರ. ಪೊಲೀಸರು ಹಾಸ್ಯ ನಟ ಚಂದ್ರಪ್ರಭಾ ಅವರೇ ಕಾರ್. ಈ ಅ-ಪಘಾತ ನಡೆದ ಸ್ಥಳದಲ್ಲಿದ್ದ ಪೊಲೀಸರು ಮತ್ತು ಆಟೋ ಚಾಲಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತ ಬಳಿಕ ಚಂದ್ರಪ್ರಭಾರವರು ಓಡಾಡಿಕೊಂಡಿದ್ದಾರೆ” ಎಂದಿದ್ದಾರೆ.

“ನಮಗೆ ನಮ್ಮ ಹುಡುಗನ ಜೀವ ಉಳಿಸಿಕೊಡಬೇಕು. ಸೋಮವಾರ ರಾತ್ರಿ ಅ- ಪಘಾತ ನಡೆದರೂ ಇದುವರೆಗೂ ಯಾರೂ ಬಂದಿಲ್ಲ. ದುಡಿಯುವ ಮಗನಿಗೆ ಅ-ಪಘಾತವಾದ್ರೆ ಪೋಷಕರು ಏನು ಮಾಡಬೇಕು. ಮಾಲ್ತೇಶ್ ಸಾ-ವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ನನ್ನ ತಮ್ಮ ಉಳಿಬೇಕು ಅವನು ಮೊದಲಿನಂತೆ ಅಗಬೇಕು ಅಷ್ಟೇ ” ಎಂದು ಕಣ್ಣೀರು ಹಾಕಿದ್ದಾರೆ.

ಹಿಟ್ ಅಂಡ್ ರನ್ ಆರೋಪ ಕೇಳಿ ಬರುತ್ತಿದ್ದಂತೆ ನಟ ಚಂದ್ರ ಪ್ರಭಾರವರು ಸ್ಪಷ್ಟನೆ ನೀಡಿದ್ದು, “ನಾನು ಗಾಯಾಳುವನ್ನು ಚಿಕ್ಕಮಗಳೂರು ಆಸ್ಪತ್ರೆಗೆ ಸೇರಿಸಿದ ಬಳಿಕವೇ ತೆರಳಿದ್ದೇನೆ. ನಾನೇ ಕಾರು ಚಲಾಯಿಸುತ್ತಿದ್ದೆ ಎನ್ನುವ ವಿಚಾರವನ್ನು ಪೊಲೀಸರಿಗೆ ಹೇಳಿದ್ದೆ. ಅವರ ಗಮನಕ್ಕೆ ತಂದ ಬಳಿಕವೇ ನಾನು ಅಲ್ಲಿಂದ ಹೊರಟು ಬಂದಿದ್ದೇನೆ. ಬೈಕ್ ಸವಾರನಿಗೆ ಗುದ್ದಿ ಹಾಗೆಯೇ ಹೋಗಿದ್ದೇನೆ ಎನ್ನುವ ಆ-ರೋಪ ಸು-ಳ್ಳು” ಎಂದಿದ್ದಾರೆ.

Leave a Reply

Your email address will not be published. Required fields are marked *