ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿಯವರ ಎರಡನೇ ಮುದ್ದಿನ ಮಡದಿ ರೂಪಾಲಿ ಬರೋವಾ ದೇಶ ವಿದೇಶ ಪ್ರವಾಸ ಮಾಡಿ ಹೇಗೆ ಎಂಜಾಯ್ ಮಾಡುತ್ತಾ ಇದಾರೆ ನೋಡಿ!!

ಇತ್ತೀಚೆಗಷ್ಟೇ ಬಹುಭಾಷಾ ನಟನಾಗಿ ಗುರುತಿಸಿಕೊಂಡಿರುವ ಆಶಿಶ್ ವಿದ್ಯಾರ್ಥಿ (Ashish Vidhyarthi) ಎರಡನೇ ಮದುವೆ ಮಾಡಿಕೊಂಡು ಸುದ್ದಿಯಾದದ್ದು ಗೊತ್ತೇ ಇದೆ. ಈ ಮದುವೆ ವಿಚಾರವಾಗಿ ಟ್ರೋಲ್ ಕೂಡ ಆಗಿದ್ದರು. ಹೌದು, 57 ವರ್ಷದ ನಟನಿಗೆ 22 ವರ್ಷ ಹುಡುಕಿ ಬೇಕಾ? ಮೊದಲ ಹೆಂಡತಿ ಏನು ಪಾಪ ಮಾಡಿದ್ದರು? ವಯಸ್ಸಿಗೆ ಬೆಲೆ ಬೇಡ್ವಾ, ವಯಸ್ಸಾದವರು ಮದುವೆ ಮಾಡಿಕೊಂಡರೆ ನಾವು ಏನು ಮಾಡಬೇಕು ಹಾಗೆ ಹೀಗೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಕೂಡ ಆಗಿದ್ದರು.

ಆದರೆ ನಟ ಆಶಿಶ್ ವಿದ್ಯಾರ್ಥಿಯವರು ಅದ್ಯಾವುದರ ಬಗ್ಗೆಯು ಯೋಚಿಸದೇ ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಹೌದು ಇದೀಗ ಆಶಿಶ್ ವಿದ್ಯಾರ್ಥಿ ಹಾಗೂ ರೂಪಾಲಿ ಬರುವಾ ಅವರ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ರೆಸ್ಟೋರೆಂಟ್ ನಲ್ಲಿ ಸೆಲ್ಫಿ ಕ್ಲಿಕಿಸಿಕೊಂಡಿರುವುದು ಸ್ಪಷ್ಟ ವಾಗಿ ಗೊತ್ತಾಗುತ್ತದೆ. ಈ ಫೋಟೋಗೆ ನೆಟ್ಟಿಗರಿಂದ ನೂರಕ್ಕೂ ಅಧಿಕ ಲೈಕ್ಸ್ ಗಳು ವ್ಯಕ್ತವಾಗಿದ್ದು, ಮೆಚ್ಚಿಕೊಂಡಿದ್ದರು. ತಮ್ಮ 60 ನೇ ವಯಸ್ಸಿನಲ್ಲಿ ಅಸ್ಸಾಂ (Assam) ಮೂಲದ ರೂಪಾಲಿ ಬರುವಾ (Roopali Baruvaa) ಅವರನ್ನು ಖಾಸಗಿ ಹೊಟೇಲ್‌ವೊಂದರಲ್ಲಿ ಸರಳವಾಗಿ ಆಪ್ತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದರು.

ಆದಾದ ಬಳಿಕ ಆಶಿಶ್ ವಿದ್ಯಾರ್ಥಿ ದಂಪತಿಗಳು ಹನಿಮೂನ್ ಗೆಂದು ಸಿಂಗಾಪುರ (Singapur) ಕ್ಕೆ ತೆರಳಿದ್ದರು.ಈ ಜೋಡಿ ವಾಹನವೊಂದರಲ್ಲಿ ಸವಾರಿ ಮಾಡುವ ಫೋಟೋವನ್ನು ನಟ ಆಶಿಶ್‌ ವಿದ್ಯಾರ್ಥಿ ಹಂಚಿಕೊಂಡಿದ್ದು, “ಪ್ರಿಯ ದೋಸ್ತ್, ನಿಮ್ಮ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದರು. ಈ ಫೋಟೋ ನೋಡುತ್ತಿದ್ದಂತೆ ನೆಟ್ಟಿಗರಲ್ಲಿ ಕೆಲವು ಮೆಚ್ಚುಗೆ ವ್ಯಕ್ತಪಡಿಸಿದರೆ ಇನ್ನು ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದರು.

ನಟ ಆಶಿಶ್ ವಿದ್ಯಾರ್ಥಿ ಕೈ ಹಿಡಿದಿರುವ ರೂಪಾಲಿ ಬರೋವಾ ಅವರು ಮೂಲತಃ ಅಸ್ಸಾಂ (Assam) ರಾಜ್ಯದವರು. ಇವರು ಕೋಲ್ಕತ್ತದಲ್ಲಿ ಹಲವಾರು ಫ್ಯಾಶನ್‌ ಮಳಿಗೆಗಳನ್ನು ಹೊಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ತಮ್ಮ ಕುಟುಂಬಕ್ಕೆ ಹೆಚ್ಚು ಸಮಯ ನೀಡುವ ರೂಪಾಲಿ ಬರೋವಾರವರನ್ನೇ ವರಿಸಿದ್ದರು. ಆದರೆ, ಖ್ಯಾತ ಖಳ ನಟ ಆಶಿಶ್ ವಿದ್ಯಾರ್ಥಿಯವರ ಈಗಾಗಲೇ ಒಂದು ಮದುವೆಯಾಗಿದ್ದರು.

ಮೊದಲ ಪತ್ನಿ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿಯಾಗಿ ಗುರುತಿಸಿಕೊಂಡಿರುವ ರಾಜೋಶಿ ಬರುವಾ (Rajoshi Baruvaa). ಆಶಿಶ್ ಮತ್ತು ರಾಜೋಶಿ ಮದುವೆಯಾಗಿ 23 ವರ್ಷಗಳಾಗಿದ್ದು, ಅವರಿಗೆ ಅರ್ಥ ವಿದ್ಯಾರ್ಥಿ (Artha Vidhyarti) ಎಂಬ ಮಗನಿದ್ದಾನೆ. ರಾಜೋಶಿ ಬರುವಾ ಹಾಗೂ ಆಶಿಶ್ ವಿದ್ಯಾರ್ಥಿ ವೈವಾಹಿಕ ಜೀವನವು ಅಷ್ಟಾಗಿ ಉತ್ತಮವಾಗಿಲ್ಲದ ಕಾರಣ ಬೇರೆ ಬೇರೆಯಾಗಿದ್ದರು. ಆದರೆ ಇದೀಗ ರೂಪಾಲಿ ಬರೋವಾರನ್ನು ಮದುವೆಯಾಗಿದ್ದು ಸುಖವಾಗಿ ಸಂಸಾರ ಮಾಡುವುದರ ಜೊತೆಗೆ ವೃತ್ತಿ ಜೀವನದಲ್ಲಿಯು ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *