ನದಿಯ ಮಧ್ಯೆ ನಿಂತು ಕ್ಯಾಮೆರಾಗೆ ಪೋಸ್ ನೀಡಿದ ಅರ್ಜುನ್ ಸರ್ಜಾ ಪುತ್ರಿ ಅಂಜನಾ ಸರ್ಜಾ, ಈ ಬೆಡಗಿಯ ಫೋಟೋಗಳು ವೈರಲ್

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿಕೊಂಡಿರುವ ನಟ ಅರ್ಜುನ್ ಸರ್ಜಾ (Arjun Sarja) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ನಟ ಅರ್ಜುನ್ ಸರ್ಜಾರವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಫ್ಯಾಮಿಲಿಗೆ ಜೊತೆಗೆ ಸಮಯ ಕಳೆಯುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಅರ್ಜುನ್ ಸರ್ಜಾರವರಿಗೆ ಇಬ್ಬರೂ ಮುದ್ದಾದ ಮಕ್ಕಳಿದ್ದಾರೆ.

ಹಿರಿಯ ಪುತ್ರಿ ಐಶ್ವರ್ಯ (Aishwarya Arjun) ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟನಾ ಕಿರಿಯ ಪುತ್ರಿಯ ಹೆಸರು ಅಂಜನಾ (Anjana Arjun) ಬ್ಯುಸಿನೆಸ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅರ್ಜುನ್ ಸರ್ಜಾ ಮಗಳು ಅಂಜನಾ ಹೊಸ ಉದ್ಯಮವನ್ನು ಆರಂಭಿಸಿದ್ದರು. ಸರ್ಜಾ ಹೆಸರಿನಲ್ಲಿ ಫ್ರೂಟ್ಸ್ ಲೆಥರ್ ಬ್ಯಾಗ್ ಉದ್ಯಮವನ್ನು ಆರಂಭಿಸಿದ್ದು ಈ ಮೂಲಕ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದರು. ತಮ್ಮ ಈ ಉದ್ಯಮವನ್ನು ಪ್ರಪೋಟ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಅಂಜನಾ ಸರ್ಜಾ (Anjana Sarja) ರವರು ಇದೀಗ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಇದೀಗ ನದಿ (River) ಯ ಮಧ್ಯೆಯಲ್ಲಿ ಹರಿಯುತ್ತಿರುವ ನೀರಿನ ಮಧ್ಯೆ ನಿಂತು ಕ್ಯಾಮೆರಾಗೆ ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ರಿವರ್ ಡೇ ಎಂದು ಬರೆದುಕೊಂಡಿದ್ದಾರೆ. ನಟ ಅರ್ಜುನ್ ಸರ್ಜಾ ಪುತ್ರಿ ಅಂಜನಾ ಸರ್ಜಾ ಶೇರ್ ಮಾಡಿಕೊಂಡಿರುವ ಈ ಫೋಟೋ ಆರು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಇತ್ತೀಚೆಗಷ್ಟೇ ಅರ್ಜುನ್ ಸರ್ಜಾ ಪುತ್ರಿ ಅಂಜನಾ (Anjana) ಅವರ ಜನ್ಮದಿನವನ್ನು ಕುಟುಂಬಸ್ಥರು ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದರು. ಅಂಜನಾ ಅವರ ಬರ್ತ್‌ಡೇ ಸೆಲೆಬ್ರೇಷನ್‌ನ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಸಿನಿಮಾರಂಗಕ್ಕೆ ಎಂಟ್ರಿ ಕೊಡದೇ ಇದ್ದರೂ ಕೂಡ ಸಾಕಷ್ಟು ಫ್ಯಾನ್ಸ್ ಗಳನ್ನು ಹೊಂದಿದ್ದು, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದರು.

ಅದಲ್ಲದೇ ಇತ್ತೀಚೆಗಷ್ಟೇ ಅರ್ಜುನ್‌ ಸರ್ಜಾ ಮೊದಲ ಮಗಳು ಐಶ್ವರ್ಯ (Aishwarya) ಕೂಡ ಸುದ್ದಿಯಾಗಿದ್ದಾರೆ. ತಮಿಳು ಖ್ಯಾತ ಹಾಸ್ಯನಟ ತಂಬಿ ರಾಮಯ್ಯ (Tambi Ramayya) ಪುತ್ರ ಉಮಾಪತಿ (Umaapati) ಎಂಬುವರನ್ನು ಐಶ್ವರ್ಯ ಪ್ರೀತಿಸುತ್ತಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗಿದೆ. ಈ ಜೋಡಿ ಶೀಘ್ರದಲ್ಲಿಯೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಮುಂದಿನ ವರ್ಷ ಐಶ್ವರ್ಯ, ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅರ್ಜುನ್ ಸರ್ಜಾ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿಯೂ ಹೊರಬಿದ್ದಿಲ್ಲ.

Leave a Reply

Your email address will not be published. Required fields are marked *