ಕಿರುತೆರೆಯ ನಟ ಆರವ್ ಸೂರ್ಯರವರ ಮದುವೆಯ ಸುಂದರ ಕ್ಷಣಗಳು ಹೇಗಿವೆ ಗೊತ್ತಾ? ಇಲ್ಲಿದೆ ನೋಡಿ ಅಪರೂಪದ ಫೋಟೋಸ್

ಕನ್ನಡ ಕಿರುತೆರೆ ಲೋಕದಲ್ಲಿ ಕೆಲವು ನಟ ನಟಿಯರು ವೃತ್ತಿ ಜೀವನದ ಜೊತೆಗೆ ವೈಯುಕ್ತಿಕ ಜೀವನದ ಕಡೆಗೂ ಅಷ್ಟೇ ಮಹತ್ವವನ್ನು ನೀಡುತ್ತಾರೆ. ಈ ವಿಚಾರದಲ್ಲಿ ಯಾರಿವಳು (Yaarivalu) ಮತ್ತು ವೀಣಾದೀಪ (Veenadeepa) ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡ ನಟ ಆರವ್ ಸೂರ್ಯ (Arav Surya) ಕೂಡ ಹೊರತಾಗಿಲ್ಲ.

ಈ ಹಿಂದೆ 2021 ರಲ್ಲಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಟ ಆರವ್ ಸೂರ್ಯ ಮತ್ತು ಗೆಳತಿ ವೈಷ್ಣವಿ (Vaishnavi) ಡಿಸೆಂಬರ್ 12ರಂದು ತಿರುಪತಿಯಲ್ಲಿ (Tirupati) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ನಟ ಆರವ್ ಸೂರ್ಯರವರು ಮದುವೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ (Social media) ಹಂಚಿಕೊಂಡಿದ್ದರು.

ಇದೀಗ ನಟನ ವೆಡ್ಡಿಂಗ್ ಫೋಟೋಗಳು ವೈರಲ್ ಆಗಿವೆ. ಈ ಫೋಟೋದಲ್ಲಿ ಮುದ್ದಾದ ಜೋಡಿಯೂ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದು, ಇನ್ನೂರಕ್ಕೂ ಅಧಿಕ ಲೈಕ್ಸ್ ಬಂದಿವೆ. ನಟ ಆರವ್ ಸೂರ್ಯರವರ ತಿರುಪತಿಯಲ್ಲಿ ನಡೆದ ಮದುವೆಯಲ್ಲಿ ಕುಟುಂಬಸ್ಥರು (Family) ಮಾತ್ರ ಭಾಗಿಯಾಗಿದ್ದರು. ಅರವ್ ರೇಷ್ಮೆ ಪಂಚೆ ಶೆಲ್ಯ (Silk outfit) ಧರಿಸಿದ್ದು, ವೈಷ್ಣವಿ ಕ್ರೀಮ್ ಮತ್ತು ಕೆಂಪು ಬಣ್ಣದ ಸೀರೆ (Saree)ಯಲ್ಲಿ ಕಂಗೊಳಿಸಿದ್ದರು.

ಮದುವೆಗೂ ಮೊದಲು ಅಂದರೆ ವರ್ಷ ಫೆಬ್ರವರಿ (February) ತಿಂಗಳಿನಲ್ಲಿ ಇಬ್ಬರೂ ಅದ್ಧೂರಿಯಾಗಿ ನಿರ್ಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಈ ಸಮಯದಲ್ಲಿ ತಮ್ಮ ಸಂಗಾತಿ ವೈಷ್ಣವಿ ಅವರನ್ನು ಸಿನಿ ಸ್ನೇಹಿತರಿಗೆ ಪರಿಚಯಿಸಿದ್ದರು. ಅದಲ್ಲದೇ, ಮದುವೆಗೂ ಮುನ್ನ ಇಬ್ಬರೂ ವಿಭಿನ್ನ ಕಾನ್ಸೆಪ್ಟ್‌ನಲ್ಲಿ ಫೋಟೋಶೂಟ್ (Concept Prewedding Photoshoot) ಮಾಡಿಸಿದ್ದರು.

ಹಳ್ಳಿ ಬ್ಯಾಕ್‌ಗ್ರೌಂಡ್‌ ರೀತಿ, ಮನೆ ಮುಂದೆ ಕುರ್ಚಿ ಮೇಲೆ ಆರವ್ ಕೂತಿದ್ದು, ಹಿಂದೆ ವೈಷ್ಣವಿ ನಿಂತಿದ್ದ ಫೋಟೋಗಳು ವೈರಲ್ ಆಗಿದ್ದವು. ಇದು ಲವ್ ಮ್ಯಾರೇಜ್ (Love Marriage) ಅಥವಾ ಅರೇಂಜ್ಜ್ ಮ್ಯಾರೇಜ್‌ (Arrange Marriage) ಅಂತ ಯಾರಿಗೂ ಕ್ಲಾರಿಟಿ ಸಿಕ್ಕಿರಲಿಲ್ಲ. ಹೀಗಾಗಿ ವೈಷ್ಣವಿಯವರ ಬಗ್ಗೆ ಹೇಳಿ ಎಂದು ನಟನಿಗೆ ಫ್ಯಾನ್ಸ್ ಒತ್ತಾಯಿಸಿದ್ದರು. ಹೀಗಾಗಿ ವೈಷ್ಣವಿಯವರು ಬಣ್ಣದ ಲೋಕದಲ್ಲಿ ಸಕ್ರಿಯರಾದವರು ಅಲ್ಲ ಎನ್ನುವುದು ಪಕ್ಕಾ ಆಗಿತ್ತು. ಮದುವೆಯಾದ ಒಂದೇ ವರ್ಷದಲ್ಲಿ ತಂದೆಯಾದ ವಿಚಾರವನ್ನು ಹಂಚಿಕೊಂಡಿದ್ದರು.

2022 ರಲ್ಲಿ ಡಿಸೆಂಬರ್ ನಲ್ಲಿ ತಂದೆಯಾದ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆರವ್ ತಮ್ಮ ಮಗನಿಗೆ ಯಂಶ್ ಅರಸು ಎಂದು ನಾಮಕರಣ ಮಾಡಿದ್ದು, ಬಂಧು ಬಾಂಧವರೊಡನೆ ಅದ್ಧೂರಿ ಸಮಾರಂಭ ಕೂಡ ಏರ್ಪಡಿಸಿದ್ದರು. ಒಟ್ಟಿನಲ್ಲಿ ವೈಯುಕ್ತಿಕ ಬದುಕಿನ ಬಗ್ಗೆ ಕಂಪ್ಲೀಟ್ ಅಪ್ಡೇಟ್ ನೀಡಿದ್ದ ನಟ ಆರವ್ ಸೂರ್ಯ ವೃತ್ತಿ ಜೀವನದಲ್ಲಿಯೂ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *