ತನ್ನ ಮುದ್ದಾದ ಕುಟುಂಬದ ಜೊತೆಗೆ ಸೆಲ್ಫಿಗೆ ಪೋಸ್ ಕೊಟ್ಟ ನಂಬರ್ ಒನ್ ನಿರೂಪಕಿ ಅನುಶ್ರೀ, ಇಲ್ಲಿದೆ ನೋಡಿ ಫೋಟೋ

ಕನ್ನಡ ಕಿರುತೆರೆ ಲೋಕದ ನಂಬರ್ ಒನ್ ನಿರೂಪಕಿಯಾಗಿರುವ ಅನುಶ್ರೀ (Anushree) ಯವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಅರಳು ಹುರಿದಂತೆ ಮಾತನಾಡುವ ಬೆಡಗಿ ಅಭಿಮಾನಿ ಬಳಗವು ಬಹಳ ದೊಡ್ಡದಿದೆ. ಪಟ ಪಟ ಮಾತನಾಡುತ್ತ, ತನ್ನ ಮಾತಿನ ಮೂಲಕವೇ ಎಲ್ಲರನ್ನು ಸೆಳೆಯುವ ತಾಕತ್ತು ಇವರಿಗಿದ್ದು ಎಲ್ಲಿಲ್ಲದ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದಾರೆ.

ಕನ್ನಡ ಕಿರುತೆರೆ (Small Screen) ಹಾಗೂ ಬೆಳ್ಳಿತೆರೆ (Big Screen) ಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಮೊದಲ ಆಯ್ಕೆಯೇ ಈ ಅನುಶ್ರೀ. ನಿರೂಪಣೆ ಮಾತ್ರವಲ್ಲದೆ ಕೆಲವು ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಬೇಡಿಕೆ ಹೊಂದಿರುವ ನಿರೂಪಕಿಯಾಗಿದ್ದು ಮದುವೆಯಾಗದೇ ಒಂಟಿಯಾಗಿಯೇ ಬದುಕುತ್ತಿದ್ದಾರೆ.

ಜೀ ಕನ್ನಡ (Zee Kannada) ದಲ್ಲಿ ಅನುಶ್ರೀ ಅವರು ಫೇಮಸ್ ನಿರೂಪಕಿ. ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ನಿರೂಪಣೆ ಮಾಡುತ್ತಿದ್ದು, ತಮ್ಮ ಅದ್ಭುತವಾದ ಮಾತಿನಿಂದಲೇ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ. ನಟಿ ಕಮ್ ನಿರೂಪಕಿ ಅನುಶ್ರೀ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದೀಗ ಫೋಟೋದಲ್ಲಿ ನಿರೂಪಕಿ ಅನುಶ್ರೀಯವರು ತಾಯಿ ಹಾಗೂ ಮುದ್ದಿನ ತಮ್ಮನ ಜೊತೆಗೆ ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಲೈವ್ ಬಂದಿದ್ದ ಅನುಶ್ರೀಯವರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ ಮದುವೆಯ ಬಗ್ಗೆಯೂ ಉತ್ತರಿಸಿದ್ದರು. ಲೈವ್ ವೇಳೆಯಲ್ಲಿ ನಟಿಯು ಮದುವೆಯ ಬಗ್ಗೆ ಮಾತನಾಡಿದ್ದು,, ” ನಾನು ಎಲ್ಲೇ ಹೋದರು ಜನರು ನನ್ನ ಮದುವೆ ಯಾವಾಗ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಮದುವೆ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯವಿದೆ. ನಾನು ಮೊದಲು ಕೆಲಸ ಮಾಡಬೇಕು. ಮದುವೆ ಅನ್ನೋದು ಒಂದು ಸುಂದರ ಅನುಭವ ಸುಮ್ಮನೆ ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ” ಎಂದಿದ್ದರು.

“ದಯವಿಟ್ಟು ನನ್ನ ಮದುವೆ ಬಗ್ಗೆ ಮಾತ್ರ ಕೇಳಬೇಡಿ. ಎಷ್ಟು ಸಲ ಹೇಳಿದ್ದರೂ ಅಭಿಮಾನಿಗಳು ಅದೇ ಹೇಳುತ್ತಾರೆ. ಒಬ್ಬ ವ್ಯಕ್ತಿ ಮದುವೆಯನ್ನು. ಯಾವಾಗ ಯಾಕೆ ಆಗುತ್ತಾರೆ ಗೊತ್ತಾ? ಈ ಮದುವೆ ಅನ್ನೋದು ಒಂದು ಬ್ಯೂಟಿಫುಲ್ ಅನುಭವ ನಾವು ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ, ಈ ಸಂಬಂಧದ ಒಳಗೆ ಇಬ್ಬರು ಹೇಗ್ಬೇಕು ಇದಕ್ಕೆಲ್ಲಾ ಸ್ವಲ್ಪ ಟೈಮ್ ಬೇಕಾಗುತ್ತದೆ. ನಿಮಗೆ ಏಜ್ ಆಯ್ತು ನಿಮ್ಮ ವಯಸ್ಸುಎ ಷ್ಟು ಅಂತಾ ಕೇಳುತ್ತಾರೆ ಹೀಗೆ ಹೇಳಿದರು ಎಂದು ನಾನು ಮದುವೆ ಆಗಲು ಆಗಲ್ಲ. ಈ ವಿಚಾರವನ್ನು ನಮ್ಮ ದೇವರು ನಮ್ಮ ಕೊರಗಜ್ಜನ ಮೇಲೆ ಬಿಡ್ತೀನಿ ದೇವರೇ ಎಲ್ಲಾ ನೋಡಿಕೊಳ್ಳುತ್ತಾನೆ’ ಎಂದಿದ್ದರು ಅನುಶ್ರೀ. ಸದ್ಯಕ್ಕೆ ನಿರೂಪಣೆ ಮೂಲಕ ವೃತ್ತಿಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *