ನಟಿ ಅನುಪಮಾ ಗೌಡ ಬರ್ತ್ಡೇ ಸೆಲೆಬ್ರೇಶನ್ ಫೋಟೋ ಹಂಚಿಕೊಂಡ ನಟಿ ದಿವ್ಯಾ ಉರುಡುಗ

ನಟಿ ದಿವ್ಯಾ ಉರುಡುಗ (Divya Uruduga) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8 (Big Boss Sisan 8) ರಲ್ಲಿ ಭಾಗವಹಿಸಿ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು ಇತ್ತೀಚೆಗಷ್ಟೇ ಫೋಟೋ ಗಳನ್ನ ಪೋಸ್ಟ್ ಮಾಡಿದ್ದರು.

ದಿವ್ಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ ಸಿಂಪಲ್ ಡ್ರೆಸ್‍ನಲ್ಲೂ ಸುಂದರವಾಗಿ ಕಾಣಿಸಿದ್ದು, ವೈಟ್ ಟೀ ಶರ್ಟ್, ಬ್ಲ್ಯಾಕ್ ಪ್ಯಾಂಟ್ ಹಾಕಿಕೊಂಡಿದ್ದರು. ಫೋಟೋಗಳ ಜೊತೆ ಬೇಗ ಸಿಗೋಣ ಎಂದು ಹಾಕಿಕೊಂಡಿದ್ದರು. ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದ ಅಭಿಮಾನಿಗಳು ಸಹ ನಾವು ಕಾಯ್ತಾ ಇದ್ದೇವೆ ಎಂದು ಹೇಳಿದ್ದರು. ಆದರೆ ಇದೀಗ ನಟಿ ದಿವ್ಯಾ ಉರುಡುಗ ಮತ್ತೆ ಸುದ್ದಿಯಾಗಿದ್ದಾರೆ.

ಇದೀಗ ದಿವ್ಯಾ ಉರುಡುಗ ನಟಿ ಅನುಪಮಾ ಗೌಡ (Anupama Gowda)ರ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಅನುಪಮಾ ಗೌಡರ ಬರ್ತ್ಡೇ ಸೆಲೆಬ್ರೇಶನ್ ನಲ್ಲಿ ದಿವ್ಯಾ ಉರುಡುಗ , ನಟಿ ಅಮೂಲ್ಯ (Amulya), ನಟ ರಾಕೇಶ್ ಅಡಿಗ (Rakesh Adiga), ನಟಿ ನೇಹಾ (Neha) ರವರು ಭಾಗಿಯಾಗಿದ್ದಾರೆ. ಬರ್ತ್ಡೇ ಸೆಲೆಬ್ರೇಶನ್ ವಿಡಿಯೋ ಹಾಗೂ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋಗೆ ಹದಿನೇಳು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ.

ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಮೊದಲು ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಸಕ್ರಿಯರಾಗಿದ್ದಾರೆ. ದಿವ್ಯಾ ಉರುಡುಗರವರು ಮೂಲತಃ ಶಿವಮೊಗ್ಗ (Shivamogga) ದ ತೀರ್ಥಹಳ್ಳಿ (Theerthahalli) ಯವರಾದ ದಿವ್ಯಾ ಶಾಲಾದಿನಗಳಲ್ಲಿ ಕ್ರೀಡೆಯಲ್ಲಿ ಸಕ್ರಿಯರಾಗಿದ್ದರು. ಮಂಗಳೂರಿನಲ್ಲಿದ್ದಾಗ ತಮ್ಮ ವಿದ್ಯಾಭ್ಯಾಸವನ್ನು ಮಾಡುತ್ತಿರುವಾಗಲೇ ಕಿರುತೆರೆಯಲ್ಲಿ ನಟಿಸಲು ಅವಕಾಶವು ಸಿಕ್ಕಿತು. ದಿವ್ಯಾ ಉರುಡುಗರವರು ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಸೀರಿಯಲ್‌ಗಳಲ್ಲಿ ನಟಿಸಿ ಪ್ರೇಕ್ಷಕರ ಮನಸ್ಸನ್ನು ಗೆದ್ದುಕೊಂಡರು.

ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ’ (Super Kabaddi) ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು. 2017 ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ `ಹುಲಿರಾಯ’ (Huliraya) ಚಿತ್ರದಿಂದ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ದಿವ್ಯಾ ಅವರಿಗೆ ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು. ಧ್ವಜ (Dhwaja) ಮತ್ತು ಫೇಸ್ 2 ಫೇಸ್ (Face To Face) ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಿಗ್ ಬಾಸ್ ಬಳಿಕ ವೃತ್ತಿ ಜೀವನ ದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *