ಸ್ಯಾಂಡಲ್ ವುಡ್ ನಟಿ ಸಿರಿ ರವಿಕುಮಾರ್ (Siri Ravikumar) ಹೆಸರು ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಕನ್ನಡದ ಪ್ರಸಿದ್ದ ಆರ್ಜೆಗಳಲ್ಲಿ ಒಬ್ಬರಾದ ಸಿರಿ ರವಿಕುಮಾರ್ ದೊಡ್ಡ ಸಂಖ್ಯೆ ಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಸಿರಿ ರವಿಕುಮಾರ್ ಕನ್ನಡದ ಪ್ರಸಿದ್ದ ಆರ್ಜೆ, ನಟಿ ಹಾಗೂ ರೂಪದರ್ಶಿ. ಇವರು ಕನ್ನಡ ಕಿರುತೆರೆಯಲ್ಲೂ ಸಹ ಪ್ರಸಿದ್ಧರಾಗಿದ್ದು ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ. ಸದ್ಯಕ್ಕೆ ನಟಿ ಸಿರಿ ರವಿಕುಮಾರ್ ಅವರ ಅಪರೂಪದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಫೋಟೋದಲ್ಲಿ ನಟಿ ಕಮ್ ಆರ್ ಜೆ ಸಿರಿ ರವಿಕುಮಾರ್ ಅವರು ಪತಿಯ ಜೊತೆಗೆ ಇರುವುದನ್ನು ಕಾಣಬಹುದು. ಈ ಫೋಟೋದಲ್ಲಿ ನಟಿ ಸೀರೆ ಉಟ್ಟು ಮುದ್ದು ಮುದ್ದಾಗಿ ರೆಡಿಯಾಗಿರುವುದನ್ನು ಕಾಣಬಹುದು. ಕೆಲವು ಫೋಟೋದಲ್ಲಿ ಅಪ್ಪಿಕೊಂಡರೆ, ಇನ್ನೂ ಒಂದು ಫೋಟೋದಲ್ಲಿ ಪತ್ನಿ ಸಿರಿಯವರಿಗೆ ಮಹರ್ಷಿ ಮುತ್ತು ನೀಡಿದ್ದಾರೆ. ನಟಿ ಸಿರಿ ರವಿಕುಮಾರ್ ಅವರು ಶೇರ್ ಮಾಡಿಕೊಂಡಿರುವ ಈ ಫೋಟೋಗೆ ಐನ್ನೂರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
2021 ರಲ್ಲಿ ಮಹರ್ಷಿ (Maharshi) ಎನ್ನುವವರ ಜೊತೆ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ಅವರ ಮದುವೆಯ ಸುಂದರ ಫೋಟೋಗಳು ವೈರಲ್ ಆಗಿತ್ತು. ಅದಲ್ಲದೇ ಆರ್ಜೆ ಮಾತ್ರವಲ್ಲದೇ ಟಿವಿ ಕಾರ್ಯಕ್ರಮಗಲ ನಿರೂಪಕಿ ಹಾಗೂ ನಟಿಯಾಗಿರುವ ಸಿರಿ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದರು.
ಡಿಸೆಂಬರ್ನಲ್ಲಿಯೇ ಸಿರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಗುರು ಹಿರಿಯರ ಸಮ್ಮುಖದಲ್ಲಿ ಸರಿ ಸಪ್ತಪದಿ ತುಳಿದಿದ್ದರು. ನಟಿ ಸಿರಿ ಅವರ ಮದುವೆಯ ವಿಚಾರ ಕೇಳಿ, ಅಭಿಮಾನಿಗಳಿಗೆ ಶಾಕ್ ಆಗಿದ್ದರು. ನಟಿ, ಮಾಡೆಲ್ ಹಾಗೂ ಆರ್ ಜೆ ಯಾಗಿ ಗುರುತಿಸಿಕೊಂಡಿರುವ ನಟಿ ಸಿರಿಯವರು .ಕನ್ನಡದ ಕೋಗಿಲೆ ಸೀಸನ್ 2 ಕಾರ್ಯಕ್ರಮಕ್ಕೆ ನಿರೂಪಕಿಯಾಗಿದ್ದರು.
ಕನ್ನಡದ ಕೋಗಿಲೆ (Kannadada Kogile) ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಇವರ ನಿರೂಪಣೆಯ ಶೈಲಿಯೂ ಪ್ರೇಕ್ಷಕ ವರ್ಗದ ಮನಸ್ಸು ಗೆದ್ದುಕೊಂಡಿತ್ತು. ಬೆಳ್ಳಿತೆರೆಯಲ್ಲಿಯೂ ಸಕ್ರಿಯರಾಗಿರುವ ಸಿರಿ, ರಕ್ಷಿತ್ ಶೆಟ್ಟಿ (Rakshith Shetty) ನಿರ್ಮಾಣದ ಸಕುಟುಂಬ ಸಮೇತ (Sakutumba Sametha) ಚಿತ್ರದಲ್ಲಿ ಸಹ ನಟಿಸಿದ್ದರು. ಇದೀಗ ರಾಜ್ ಬಿ ಶೆಟ್ಟಿ (Raj B Shetty) ಅವರ ಸ್ವಾತಿ ಮುತ್ತಿನ ಮಳೆ ಹನಿಯೇ (Swathi Muttina Male Haniye) ಸಿನಿಮಾಗೆ ನಾಯಕಿ ನಟಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯಕ್ಕೆ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ.