ಪುಣ್ಯಭೂಮಿಯಾಗಿರುವ ಅಯೋಧ್ಯೆಯಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟಲು ಮುಂದಾದ ಅಮಿತಾಭ್ ಬಚ್ಚನ್? ಜಾಗದ ಬೆಲೆ ಕೇಳಿದರೆ ತಲೆ ತಿರುಗುತ್ತೆ..!

ಸೆಲೆಬ್ರಿಟಿಗಳು ಸಿನಿಮಾದ ಜೊತೆ ಜೊತೆಗೆ ವೈಯುಕ್ತಿಕ ಜೀವನದ ಕುರಿತು ಸುದ್ದಿಯಾಗುವುದಿದೆ. ಕಳೆದ ಕೆಲವು ದಿನಗಳಿಂದ ಅಮಿತಾಭ್ ಬಚ್ಚನ್ (Amithabh Bacchan) ಮಗ ಹಾಗೂ ಸೊಸೆಯ ವಿಚ್ಛೇಧನದ ಸುದ್ದಿ ಯೊಂದಿಗೆ ಹರಿದಾಡುತ್ತಿದೆ. ಆದರೆ ಇದೀಗ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಮನೆಯ ಕಟ್ಟಲಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿವೆ.

ಅಂದಹಾಗೆ, ಉತ್ತರ ಪ್ರದೇಶ (Uttarapradesh)ದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಮಂದಿರವನ್ನು ಉದ್ಘಾಟಿಸಲಿದ್ದು, ಈಗಾಗಲೇ ಅನೇಕರಿಗೆ ಆಮಂತ್ರಣವು ತಲುಪಿದೆ.

ಎಲ್ಲರೂ ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಈ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಅಮಿತಾಭ್‌ ಬಚ್ಚನ್‌ ಅವರನ್ನೂ ಆಹ್ವಾನಿಸಲಾಗಿದ್ದು, ಇನ್ನಿತ್ತರರು ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ರಾಮಮಂದಿರದ ಉದ್ಘಾಟನೆ ಕಾರ್ಯಕ್ರಮಕ್ಕೆ ನಾವೆಲ್ಲಾ ಸಾಕ್ಷಿಯಾಗಲಿರುವ ಹೊತ್ತಿನಲ್ಲಿ ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ಮನೆ ನಿರ್ಮಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.

ಹೌದು, ಹೀಗಾಗಿ ನಟ ಪುಣ್ಯಭೂಮಿಯಾಗಿರುವ ಅಯೋಧ್ಯೆಯಲ್ಲಿ ಮನೆ ಕಟ್ಟಿಸಲು ನಿವೇಶನ ಖರೀದಿ ಮಾಡಿದ್ದಾರೆ ಎನ್ನುವ ಸುದ್ದಿಯೊಂದು ಹೊರಬಿದ್ದಿದೆ. ಮನೆಯನ್ನು ಕಟ್ಟಿಸಲು ಸರಯೂ ನದಿ (Sarayu River) ತೀರದಲ್ಲಿ ಮುಂಬೈ ಮೂಲದ ಡೆವಲಪರ್‌ ಕಂಪನಿಯಾದ ದಿ ಹೌಸ್‌ ಆಫ್‌ ಅಭಿನಂದನ್‌ ಲೋಧಾ (HoABL) ನಿವೇಶನವನ್ನು ಅಮಿತಾಭ್‌ ಬಚ್ಚನ್‌ ಖರೀದಿ ಮಾಡಿದ್ದಾರಂತೆ. ಸುಮಾರು 10 ಸಾವಿರ ಚದರ ಅಡಿಯಲ್ಲಿ ಬಾಲಿವುಡ್‌ ನಟ ಮನೆ ನಿರ್ಮಾಣ ಮಾಡಲಿದ್ದಾರಂತೆ. ಈ ಮನೆ ಕಟ್ಟಿಸಲು ನಿವೇಶನವನ್ನು 14.5 ಕೋಟಿ ರೂ. ಗೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿವೆ.

Leave a Reply

Your email address will not be published. Required fields are marked *