ಪುಟ್ಟಕ್ಕನ ಮಕ್ಕಳು ಧಾರಾವಾಹಿ ಖ್ಯಾತಿ ಯ ನಟಿ ಅಕ್ಷರರವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ?

ಕಿರುತೆರೆಯೂ ಪ್ರೇಕ್ಷಕ ವರ್ಗಕ್ಕೆ ದಿನ ನಿತ್ಯ ಮನೋರಂಜನೆಯ ಹಬ್ಬ ಎನ್ನಬಹುದು. ಕನ್ನಡ ಕಿರುತೆರೆ ಲೋಕದಲ್ಲಿ ಮನೋರಂಜನೆಗೆ ಸ್ವಲ್ಪವು ಕೊರತೆಯಿಲ್ಲ. ಕನ್ನಡ ಕಿರುತೆರೆ ಲೋಕವು ಬಹುದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಭಿನ್ನವಾಗಿ ಶೋ ಹಾಗೂ ಧಾರಾವಾಹಿ ಮೂಲಕ ಪ್ರೇಕ್ಷಕ ವರ್ಗದವರನ್ನು ರಂಜಿಸಲು ಬರುತ್ತಿರುತ್ತಾರೆ. ಇದೀಗ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿರುವ ಧಾರಾವಾಹಿಯಲ್ಲಿ ಪುಟ್ಟಕ್ಕನ ಮಕ್ಕಳು (Puttakkana Makkalu) ಕೂಡ ಒಂದು.

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸೀರೆ ಉಟ್ಟುಕೊಂಡು ಪಕ್ಕ ಹಳ್ಳಿ ಹುಡುಗಿಯ ನಟಿ ಅಕ್ಷರಾ (Akshara) ನಿಜ ಜೀವನದಲ್ಲಿ ತುಂಬಾನೇ ಮಾಡ್ರನ್. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಅಕ್ಷರರರವರ ಕುಟುಂಬದ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ನಟಿ ಅಕ್ಷರರವರ ಅಣ್ಣನ ಮದುವೆಯಲ್ಲಿ ತೆಗೆದಿರುವ ಫೋಟೋವಾಗಿದೆ. ಈ ಫೋಟೋದಲ್ಲಿ ನಟಿ ಅಕ್ಷರರವರ ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ಹಾಗೂ ಅಕ್ಷರ ಇರುವುದನ್ನು ಕಾಣಬಹುದು. ಈ ಫೋಟೋಗೆ ನಾಲ್ಕೂನೂರಕ್ಕೂ ಅಧಿಕ ವ್ಯೂಸ್ ಕಂಡಿದೆ.

ಈ ಹಿಂದೆಯಷ್ಟೇ ಸಂಕ್ರಾಂತಿ ಹಬ್ಬಕ್ಕೆಂದು ಪುಟ್ಟಕ್ಕನ ಮಗಳು ಸಹನಾ ಹೊಸದಾಗಿ ಫೋಟೋಶೂಟ್ (Photoshoot) ಮಾಡಿಸಿದ್ದರು. ಕಡುನೇರಳೆ ಮತ್ತು ನೀಲಿ ಬಣ್ಣ ಮಿಶ್ರಿತ ಉಡುಗೆ ತೊಟ್ಟು, ಫೋಟೋಗೆ ಪೋಸ್ ನೀಡಿದ್ದರು. ಬಲ್ಪ್ ಗಳ ಬೆಳಕಲ್ಲಿ ಮುಖವೊಡ್ಡಿರುವ ಅಕ್ಷರಾ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ನಟಿ ಅಕ್ಷರ ಅವರು ಪುಟ್ಟಕ್ಕನ ಮಕ್ಕಳು ಧಾರಾವಾಹಿಗೂ ಮೊದಲು ಅಮ್ಮೋರು (Amnoru) ಅನ್ನುವ ಧಾರಾವಾಹಿಯಲ್ಲಿ ಬಬ್ಲಿ ಬಬ್ಲಿ ಹುಡುಗಿಯಾಗಿ ನಟಿಸಿದ್ದರು. ಇನ್ನು ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ಅವಕಾಶವೊಂದು ಬಂದ ತಕ್ಷಣ ಅಕ್ಷರ ಅವರ ತಂದೆ ಮತ್ತು ತಾಯಿ ಖುದ್ದಾಗಿ ಒಪ್ಪಿಕೊಂಡಿದ್ದರು. ಸದ್ಯಕ್ಕೆ ಈ ಧಾರಾವಾಹಿಯಲ್ಲಿ ಸಹನಾ (Sahana) ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದುಕೊಂಡಿದ್ದಾರೆ.

ಮೂಲತಃ ಬೆಂಗಳೂರಿ (Banglore) ನವರಾದ ಅಕ್ಷರ ಅವರು ವಿದ್ಯಾಭ್ಯಾಸದಲ್ಲಿ ಮುಂದೆ ಇದ್ದರು. ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯ ಜೊತೆಗೂ ನಟಿ ಅಕ್ಷರರವರಿಗೆ ಬೆಳ್ಳಿತೆರೆ ಯಲ್ಲಿ ಅವಕಾಶಗಳು ಬಂದಿವೆ. ನಟಿ ಅಕ್ಷರರವರು ಅಭಿಷೇಕ್ ಅಂಬರೀಷ್ (Abhishek Ambarish) ನಟನೆಯ ಬ್ಯಾಡ್ ಮ್ಯಾನರ್ಸ್ (Bad Manners) ಎಂಬ ಸಿನಿಮಾದಲ್ಲೂ ನಟಿಸಿದ್ದಾರೆ. ಸದ್ಯಕ್ಕೆ ನಟಿ ಅಕ್ಷರ ಅವರಿಗೆ ಒಳ್ಳೆ ಒಳ್ಳೆಯ ಆಫರ್ ಗಳು ಬರುತ್ತಿದ್ದು ಇನ್ನಷ್ಟು ಅವಕಾಶಗಳು ಬಂದು ಖ್ಯಾತಿ ಗಳಿಸಲಿ ಎನ್ನುವುದೇ ಆಶಯ.

Leave a Reply

Your email address will not be published. Required fields are marked *