ಚಂದನವನದ ಖ್ಯಾತ ನಟ ಅಜಯ್ ರಾವ್ ಅವರ ಮುದ್ದಾದ ಕುಟುಂಬ ಹೇಗಿದೆ ಗೊತ್ತಾ? ಇಲ್ಲಿದೆ ಅಪರೂಪದ ಫೋಟೋ

ಕನ್ನಡ ಸಿನಿಮಾರಂಗವನ್ನೇ ನಂಬಿಕೊಂಡು ಅನೇಕ ನಟ ನಟಿಯರು ಬದುಕುತ್ತಿದ್ದಾರೆ. ಅಂತಹ ನಟರಲ್ಲಿ ಈ ನಟರ ಚಂದನವನದ ನಟ ಅಜಯ್ ರಾವ್ (Actor Ajay Rao) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?. ಸಿನಿ ಲೋಕದಲ್ಲಿ ಸಕ್ರಿಯರಾಗಿರುವುದರ ಜೊತೆಗೆ ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುವ ನಟ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಹೀಗಾಗಿನಟ ಅಜಯ್ ರಾವ್ ಅವರನ್ನು ಪಕ್ಕಾ ಫ್ಯಾಮಿಲಿ ಮ್ಯಾನ್ ಎನ್ನಬಹುದು. ಹೀಗಾಗಿ ಫ್ಯಾಮಿಲಿ ಜೊತೆಗೆ ಹೆಚ್ಚು ಕೊಡುವ ಇವರು ಫ್ಯಾಮಿಲಿ ಜೊತೆಗೆ ಟ್ರಿಪ್ ಹೋಗುತ್ತಿರುತ್ತಾರೆ.

ಈ ಹಿಂದೆಯಷ್ಟೇ ಮುದ್ದಿನ ಮಡದಿ ಸಪ್ನಾ (Sapna) ಹಾಗೂ ಮಗಳು ಚೆರಿಷ್ಮಾ (Cherishmaa) ಜೊತೆಗೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಫ್ಯಾಮಿಲಿ ಜೊತೆಗೆ ಫಾರಿನ್ ಟ್ರಿಪ್ ಹೋಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ನಟ ಅಜಯ್ ರಾವ್ ಅವರ ಮುದ್ದಾದ ಕುಟುಂಬದ ಫೋಟೋವೊಂದು ವೈರಲ್ ಆಗಿವೆ. ಈ ಫೋಟೋದಲ್ಲಿ ನಟ ಅಜಯ್ ರಾವ್ ಅವರು ವನ್ಯ ಜೀವಿಗಳ ವೀಕ್ಷಣೆಗೆ ತೆರಳಿದ್ದಾರೆ ಎನ್ನುವುದು ಖಾತರಿಯಾಗುತ್ತದೆ. ನಟ ಅಜಯ್ ರಾವ್ ಫ್ಯಾಮಿಲಿ ಫೋಟೋಗೆ ಮುನ್ನೂರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

ನಟ ಅಜಯ್ ರಾವ್ ಅವರ ಹಿನ್ನಲೆಯನ್ನು ಗಮನಿಸುವುದಾದರೆ, 2003 ರಲ್ಲಿ ಬಿಡುಗಡೆಗೊಂಡ ಎಕ್ಸ್ಯೂಸ್ ಮೀ (Excuse me) ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಆದಾದ ಬಳಿಕ 2008 ರಲ್ಲಿ ತೆರೆಗೆ ಬಂದ ತಾಜ್ ಮಹಲ್ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಂಡರು. ತದನಂತರ ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ಮ್ಯಾರೇಜ್ ಲವ್ ಸ್ಟೋರಿ, ಕೃಷ್ಣ ಲೀಲಾ, ಸೇರಿದಂತೆ ಇನ್ನು ಹಲವು ಚಿತ್ರಗಳಲ್ಲಿ ಅಭಿನಯಿಸಿದರು.

ಕೇವಲ ನಟರಾಗಿ ಮಾತ್ರವಲ್ಲ ನಿರ್ಮಾಪಕರಾಗಿ ಸ್ಯಾಂಡಲ್ ವುಡ್ ನಲ್ಲಿ ಕೆಲಸ ಮಾಡಿದ್ದಾರೆ ನಟ ಅಜಯ್ ರಾವ್. ಇಲ್ಲಿಯವರೆಗೂ ಒಟ್ಟು 29 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಪವನ್ ಭಟ್ ನಿರ್ದೇಶನದ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುವುದರ ಜೊತೆಯಲ್ಲಿ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.

ನಿರ್ದೇಶಕ ಪವನ್ ಭಟ್‌ (Pavan Bhat) ರವರು ಅಜಯ್‌ ರಾವ್‌ರವರಿಗೆ ಕಥೆಯನ್ನು ಹೇಳಿದ್ದರು. ಕಥೆಯನ್ನು ಕೇಳಿದ ಅಜಯ್ ರಾವ್ ಬಹಳಷ್ಟು ಇಂಪ್ರೆಸ್ ಆಗಿದ್ದರು. ಇದೀಗ ‘ಕಟಿಂಗ್ ಶಾಪ್’ (Cutting Shop) ಸಿನಿಮಾಕ್ಕೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪವನ್ ಭಟ್‌ರವರ ಜೊತೆ ಅಜಯ್ ರಾವ್ ನಿರ್ಮಾಪಕ ಹಾಗೂ ನಟರಾಗಿ ಸಾಥ್ ನೀಡಿದ್ದಾರೆ. ಇದೀಗ ನಟ ಅಜಯ್ ರಾವ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *