ವರಮಹಾಲಕ್ಷ್ಮಿ ವೃತ ಆಚರಿಸಿದ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮುದ್ದಿನ ಸೊಸೆ ಅವಿವಾ, ಫೋಟೋಗಳು ವೈರಲ್

ಸೆಲೆಬ್ರಿಟಿಗಳ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮವು ಜೋರಾಗಿತ್ತು. ಹೌದು, ರೆಬೆಲ್ ಸ್ಟಾರ್ ಅಂಬರೀಶ್ (Rebal Star Ambarish) ಅವರ ಸೊಸೆ ಅವಿವಾ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಸೊಸೆ ಅವಿವಾ ಬಿದ್ದಪ್ಪ (Aviva Biddappa) ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಶ್ರೀಮತಿಯಾಗಿ ಮೊದಲಬಾರಿಗೆ ವರಮಹಾಲಕ್ಷ್ಮಿ ಹಬ್ಬವನ್ನು ಪತಿಯೊಂದಿಗೆ ಆಚರಿಸಿದ್ದಾರೆ.

ಪತಿ ಅಭಿಷೇಕ್ ಅಂಬರೀಶ್ ಹಾಗೂ ಅತ್ತೆ ಸುಮಲತಾ ಅಂಬರೀಶ್ (Sumalatha Ambarish) ಅವರ ಜೊತೆಗೆ ಅವಿವಾ ಸರಳವಾಗಿ ಮನೆಯಲ್ಲಿಯೇ ಹಬ್ಬವನ್ನು ಸಂಭ್ರಮಿಸಿದ್ದು, ಈ ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ “ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಷಯಗಳು” ಎಂದು ಶುಭಾಶಯ ಕೂಡ ಹಂಚಿಕೊಂಡಿದ್ದಾರೆ.

ಅವಿವಾ ಬಿದ್ದಪ್ಪ (Aviva Biddappa) ರವರು ಶೇರ್ ಮಾಡಿಕೊಂಡಿರುವ ಫೋಟೋದಲ್ಲಿ ಹಸಿರು ಬಣ್ಣದ ಸೀರೆ, ಸಿಂಪಲ್ ಆಭರಣಗಳು, ತಲೆ ತುಂಬಾ ಮಲ್ಲಿಗೆ ಮುಡಿದು ಸರಳವಾಗಿ ಕಂಗೊಳಿಸಿದ್ದಾರೆ. ತನ್ನ ಪತಿ ಅಭಿಷೇಕ್ ಅಂಬರೀಶ್ ಜೊತೆಗೆ ಕ್ಯೂಟ್ ಆದ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಹೌದು, ಗೋಲ್ಡನ್ ಝರಿ ಇದ್ದಂತಹ ಗಿಣಿ ಹಸಿರುವ ಬಣ್ಣದ ಸೀರೆ ಉಟ್ಟಿದ್ದು ವೈಟ್ ಕಲರ್ ಬ್ಲೌಸ್ ಧರಿಸಿದ್ದರು. ಲಕ್ಷಣವಾಗಿ ತಲೆಬಾಚಿ ಮಲ್ಲಿಗೆ ಮುಡಿದಿದ್ದ ಅಂಬಿ ಸೊಸೆ, ಇತ್ತ ಮಗ ಅಭಿಷೇಕ್ ಅಂಬರೀಶ್ ಕೂಡ ವೈಟ್ ಕಲರ್ ಶರ್ಟ್ ಧರಿಸಿ ಮಿಂಚಿದ್ದರು.

ಸದ್ಯಕ್ಕೆ ವೈರಲ್ ಆಗಿರುವ ಫೋಟೋದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಸುಮಲತಾ ಅಂಬರೀಷ್ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಅತ್ತೆ ಪಕ್ಕ ಅವಿವಾ ಕುಳಿತುಕೊಂಡರೆ ಅಭಿಷೇಕ್ ಚೇರ್ ಹಿಂಭಾಗ ನಿಂತು ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ನಟ ಅಭಿಷೇಕ್‌ (Abhishek) ಹಾಗೂ ಫ್ಯಾಷನ್‌ ಉದ್ಯಮಿ ಅವಿವಾ ಬಿದ್ದಪ್ಪ (Aviva Biddappa) ಹೊಸ ಬದುಕಿಗೆ ಕಾಲಿಟ್ಟು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಒಕ್ಕಲಿಗ ಸಂಪ್ರದಾಯದಂತೆ ಬೆಂಗಳೂರಿನ ಚಾಮರವಜ್ರ (Chamaravajra) ದಲ್ಲಿ ಅಭಿ-ಅವಿವಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಒಕ್ಕಲಿಗ ಸಂಪ್ರದಾಯದಂತೆ ಸುಮಲತಾ ಅಂಬರೀಶ್​ ಮಗನ ಮದುವೆಯನ್ನು ನಡೆದಿತ್ತು.

ರೆಬೆಲ್ ಪುತ್ರನ ಮದುವೆಗೆ ಸ್ಯಾಂಡಲ್ ವುಡ್, ರಾಜಕೀಯ ಗಣ್ಯರು ಆಗಮಿಸಿ ಶುಭ ಹಾರೈಸಿದ್ದರು ಜೂನ್​ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ (Tripuravasi) ಯಲ್ಲಿ ಅದ್ದೂರಿಯಾಗಿ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆಯು ಅದ್ದೂರಿಯಾಗಿ ನಡೆದಿತ್ತು. ಅದಲ್ಲದೇ ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆದಿತ್ತು. ಸದ್ಯಕ್ಕೆ ಈ ಜೋಡಿಯು ಸುಖವಾಗಿ ಸಂಸಾರ ಮಾಡುತ್ತಿದ್ದು, ನಟ ಅಭಿಷೇಕ್ ಅಂಬರೀಶ್ ಅವರು ವೃತ್ತಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

Leave a Reply

Your email address will not be published. Required fields are marked *