ಖ್ಯಾತ ನಟ ಅಬ್ಬಾಸ್ ಅಲಿಯವರ ಮುದ್ದಿನ ಮಗಳು ಹೇಗಿದ್ದಾಳೆ ಗೊತ್ತಾ? ಫೋಟೋ ನೋಡಿ ಶಾ-ಕ್ ಆದ ನೆಟ್ಟಿಗರು

ಸಿನಿ ಜಗತ್ತು ಹಲವರನ್ನು ಕೈ ಬೀಸಿ ಕರೆದಿದೆ. ಕೆಲವರಿಗೆ ಅವಕಾಶಗಳನ್ನು ನೀಡಿ ತನ್ನ ಪ್ರತಿಭೆಗಳನ್ನು ತೋರ್ಪಡಿಸಲು ಒಂದೊಳ್ಳೆ ವೇದಿಕೆಯನ್ನು ಸೃಷ್ಟಿಸಿಕೊಟ್ಟಿದೆ. ಸಿನಿಮಾರಂಗದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಖ್ಯಾತಿ ಗಳಿಸಿಕೊಂಡವರು ಅನೇಕರಿದ್ದಾರೆ. ಅಂತಹವರಲ್ಲಿ ನಟ ನಟ ಅಬ್ಬಾಸ್‌ ಅಲಿ (Abbas Ali) ಕೂಡ ಒಬ್ಬರು.

ಹೌದು ಕನ್ನಡ (Kannada), ತೆಲುಗು (Telug), ತಮಿಳು (Tamil), ಮಲಯಾಳಂ (Malayalam) ಹಾಗೂ ಹಿಂದಿ (Hindi) ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು. ನೋಡುವುದಕ್ಕೆ ಸುಂದರವಾಗಿದ್ದ ನಟ ಅಬ್ಬಾಸ್ ಅವರು ​ 90ರ ದಶಕದಲ್ಲಿ ತನ್ನ ನಟನೆಯ ಮೂಲಕ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದುಕೊಂಡವರು. ಇವರಿಗೆ ಬಾಲ್ಯದ ದಿನ ಗಳಲ್ಲಿ ನಟನೆಯ ಮೇಲೆ ಆಸಕ್ತಿಯನ್ನು ಬೆಳೆಸಿಕೊಂಡವರು.

ಆದರೆ 1996ರಲ್ಲಿ ತಮಿಳಿನ ‘ಕಾದಲ್‌ ದೇಶಮ್‌’ (Kadal Desham) ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಆ ನಂತರದಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಾ ಹೋಯಿತು. ಸಾಲು ಸಾಲು ಅವಕಾಶಗಳ ಜೊತೆಗೆ ಸಿನಿಮಾರಂಗದಲ್ಲಿ ಬ್ಯುಸಿಯಾಗಿ ಬಿಟ್ಟರು. ಈಗಾಗಲೇ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡ ನಟನು ಸಿನಿ ಲೋಕದಿಂದ ಅಂತರವನ್ನು ಕಾಯ್ದುಕೊಂಡಿದ್ದಾರೆ.

ಫ್ಯಾಮಿಲಿ (Family) ಜೊತೆಗೆ ವಿದೇಶದಲ್ಲಿ ನೆಲೆಸಿರುವ ಅಬ್ಬಾಸ್ ಅವರ ಮಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನ್ಯೂಜಿಲೆಂಡ್‌ (Newzealand) ನಲ್ಲಿ ಫ್ಯಾಮಿಲಿ ಜೊತೆಗೆ ಇರುವ ಅಬ್ಬಾಸ್ ಅವರಿಗೆ ಇಷ್ಟು ದೊಡ್ಡ ಮಗಳಿದ್ದಾಳೆ ಎನ್ನುವುದನ್ನು ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅಬ್ಬಾಸ್ ಪುತ್ರಿ ಈರಾ ಅಲಿ (Ira Ali) ಯನ್ನು ನೋಡಿದ ನೆಟ್ಟಿಗರು ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ.

ಸಿನಿಮಾದಲ್ಲಿ ನಾಯಕಿಯಾಗಿ ಹೆಜ್ಜೆ ಹಾಕಿದರೆ ಸೂಪರ್ ಸಕ್ಸಸ್ ಎಂದು ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಸದ್ಯಕ್ಕೆ ನಟನ ಪುತ್ರಿಯ ಫೋಟೋಗಳು ಎಲ್ಲರ ಗಮನವನ್ನು ಸೆಳೆಯುತ್ತಿವೆ. ಮುಂಬರುವ ದಿನಗಳಲ್ಲಿ ನಟ ಅಬ್ಬಾಸ್ ಪುತ್ರಿ ಈರಾ ಅಲಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

Leave a Reply

Your email address will not be published. Required fields are marked *