ಸಿನಿಮಾ ಜಗತ್ತು ಎಂದರೆ ಅದೊಂದು ಬಣ್ಣದ ಲೋಕ. ಬಣ್ಣ ಬಣ್ಣಗಳ ಕನಸು ಕಂಡು ಬಂದವರು ಎಲ್ಲರೂ ಇಲ್ಲಿ ನೆಲೆ ಕಾಣಲು ಸಾಧ್ಯವಿಲ್ಲ. ಈ ಲೋಕಕ್ಕೆ ಸುಲಭವಾಗಿ ಎಂಟ್ರಿ ಕೊಟ್ಟು , ಸಿನಿಮಾದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅವಕಾಶದ ಜೊತೆಗೂ ಅದೃಷ್ಟ ಕೈ ಹಿಡಿದರೆ ನೇಮ್ ಫೇಮ್ ಎರಡು ಕೂಡ ಬರುತ್ತದೆ. ಆದರೆ ಒಬ್ಬ ಸೆಲೆಬ್ರಿಟಿಯಾದ ಮೇಲೆ ಗಾಸಿಫ್ ಗಳ ಬಾಯಿಗೂ ತುತ್ತಾಗುವುದು ಸಹಜ.
ಇನ್ನು, ಅಲ್ಲದೇ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟವರು ಎಲ್ಲರೂ ಕೂಡ ಫೇಮಸ್ ಆಗಬೇಕೆಂದು ಏನಿಲ್ಲ. ಕೆಲವರು ಒಂದೆರಡು ಸಿನಿಮಾಗಳನ್ನು ಮಾಡಿ ಯಶಸ್ಸು ಕಂಡರೆ ಮಾತ್ರ ಇಲ್ಲಿ ನೆಲೆಯುತ್ತಾರೆ. ಇನ್ನು ಕೆಲವು ನಟಿ ಮದುವೆ ಎಂಬ ಬಂಧಕ್ಕೆ ಬಿದ್ದರೆ ಸಾಕು, ಆಮೇಲೆ ಸಿನಿಮಾ ರಂಗಕ್ಕೆ ಮರಳುವುದೇ ಇಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳೂ ನಮ್ಮ ಸಿನಿಮಾ ರಂಗದಲ್ಲಿಯೇ ಇದೆ. ಇನ್ನು ಕೆಲವರು ಇದ್ದಾರೆ, ಈ ಲೋಕಕ್ಕೆ ಒಮ್ಮೆ ಎಂಟ್ರಿ ಕೊಟ್ಟರೆ ಸಾಕು, ಆಮೇಲೆ ಅದೆಷ್ಟೋ ಕಷ್ಟವೇ ಅಗಲಿ, ಸೋಲು ಗೆಲುವೇ ಸಿಗಲಿ.
ಎಲ್ಲವನ್ನು ಜಯಿಸಿ, ಸ್ಟಾರ್ ಪಟ್ಟ ಗಿಟ್ಟಿಸಿಕೊಂಡು ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡು ಬಿಡುತ್ತಾರೆ. ಸಿನಿಮಾರಂಗದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡು, ಇಂದು ಯಾರು ಊಹೆ ಮಾಡದ ಮಟ್ಟಿಗೆ ಬೆಳೆದಿರುವವರು ಚಂದನವನದಲ್ಲಿದ್ದಾರೆ. ಈಗಾಗಲೇ ಈ ಸಿನಿಮಾರಂಗದಲ್ಲಿ ನೆಲೆ ಕಂಡವರು ಸಾಕಷ್ಟು ಜನರಿದ್ದಾರೆ. ಹೌದು, ಅಂತಹವರ ಸಾಲಿನಲ್ಲಿ ಕನ್ನಡ ಸಿನಿಮಾರಂಗದ ಬೇಡಿಕೆಯ ಪೋಷಕ ನಟ ಅಚ್ಯುತ್ ಕುಮಾರ್ ಒಬ್ಬರು. ಸದ್ಯಕ್ಕೆ ಸಾಲು ಸಾಲು ಅವಕಾಶಗಳನ್ನು ಪಡೆದು ಕೊಂಡು ಬ್ಯುಸಿ ನಟರೆನಿಸಿಕೊಂಡಿದ್ದಾರೆ.
ಇವರು ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ಪಟ್ಟಣದವರು. ಮಾರ್ಚ್ 8, 1966ರಲ್ಲಿ ಜನಿಸಿದ ಅಚ್ಯುತ್ ಕುಮಾರ್ ಅವರಿಗೆ ರಂಗಭೂಮಿಯಲ್ಲಿ ತುಂಬಾನೇ ಆಸಕ್ತಿಯಿತ್ತು. ಇದಕ್ಕಾಗಿ ನಟ ಅಚ್ಯುತ್ ಅವರು ಹೆಚ್ಚಾಗಿ ತರಬೇತಿ ಪಡೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್ ಕಾಸರವಳ್ಳಿ ಅವರು 2000ರ ಇಸವಿಯಲ್ಲಿ ದೂರದರ್ಶನ ಪ್ರಸಾರವಾಗುತ್ತಿದ್ದ ತಮ್ಮ ನಿರ್ದೇಶನದ ಗೃಹ ಭಂಗ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ಟರು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ನಟ ಅಚ್ಯುತ್ ಕುಮಾರ್ ಅವರು ಮೂಡಲ ಮನೆ, ಪ್ರೀತಿ ಇಲ್ಲದ ಮೇಲೆ, ಧಾರಾವಾಹಿಯ ಮೂಲಕ ಕಿರುತೆರೆ ಲೋಕದಲ್ಲಿ ನೆಲೆ ಕಂಡುಕೊಂಡರು.
ಹೀಗೆ ಪೋಷಕ ನಟನಾಗಿ ಸಾಕಷ್ಟು ಖ್ಯಾತಿ ಗಳಿಸಿದ್ದ ಅಚ್ಯುತ್ ಕುಮಾರ್ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ತಿರುವು ನೀಡಿದ್ದು ಮೊಗ್ಗಿನ ಮನಸ್ಸು ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತದನಂತರದಲ್ಲಿ 2007ರಲ್ಲಿ ತೆರೆಕಂಡ ಆ ದಿನಗಳು ಸಿನಿಮಾದಲ್ಲಿ ಐಲ್ ಆಯಿಲ್ ಕುಮಾರ್ ಎಂಬ ಪಾತ್ರ ನಿರ್ವಹಿಸಿದ್ದರು. ಅಚ್ಯುತ್ ಅವರ ನಟನೆಗೆ ಸಿನಿಮಾರಂಗದಲ್ಲಿ ಸಾಲು ಸಾಲು ಅವಕಾಶಗಳು ಬರತೊಡಗಿದವು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಇವರಿಗೆ ‘ನಾನು ನನ್ನ ಕನಸು’ ಎಂಬ ಸಿನಿಮಾದಲ್ಲಿ ಅಮೋಘ ನಟನೆಯ ಮೂಲಕ ಎಲ್ಲರ ಮನಸ್ಸು ಗೆದ್ದುಕೊಂಡರು.

ಸಿನಿಮಾಗಳಲ್ಲಿ ಅತ್ಯುತ್ತಮ ಪೋಷಕ ನಟ ಫಿಲ್ಮ್ಫೇರ್ ಪ್ರಶಸ್ತಿಯೂ ಇವರಿಗೆ ಲಭಿಸಿತು. ಅಚ್ಯುತ್ ಕುಮಾರ್ ಅವರ ನಟನೆಯ ಹೆಜ್ಜೆಗಳು ಎಂಬ ಸಿನಿಮಾದಲ್ಲಿ ಜೂಜಿನ ವ್ಯಾಸನಿಯ ಪಾತ್ರಕ್ಕಾಗಿ ಕರ್ನಾಟಕದ ಅತ್ಯುತಮ ಪೋಷಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಾಂತಾರ ಸಿನಿಮಾದಲ್ಲಿಯೂ ತನ್ನ ನಟನೆಯಿಂದಾಗಿ ಮನಸ್ಸು ಗೆದ್ದುಕೊಂಡಿದ್ದಾರೆ. ಪೋಷಕ ನಟನಾಗಿ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿರುವ ಅಚ್ಯುತ್ ಕುಮಾರ್ ಅವರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿವೆ.
ಬಾಯ್ ಫ್ರೆಂಡ್ ಲವ್ ಮಾಡಿ ನಿರ್ಲಕ್ಷ ಮಾಡಿದ ಎಂದು ಈ ಯುವತಿ ಎಂತಾ ಕೆಲಸ ಮಾಡಿಕೊಂಡುಳು ಗೊತ್ತಾ? ಲವ್ ಮಾಡುವ ಮುನ್ನ ನೋಡಿ!!
ಇನ್ನು ಬೆಳ್ಳಿತೆರೆಯಲ್ಲಿ ಬ್ಯುಸಿ ಪೋಷಕ ನಟನಾಗಿ ಗುರುತಿಸಿಕೊಂಡಿರುವ ಅಚ್ಯುತ್ ಕುಮಾರ್ ಅವರ ಪತ್ನಿ ಯಾರು ಎಂಬ ಕುತೂಹಲವಿರುವುದು ಸಹಜ. ಹೌದು, ಇವರ ಪತ್ನಿ ನಂದಿನಿ ಪಟವರ್ಧನ್. ನಂದಿನಿ ಪಟವರ್ಧನ್ ಕೂಡ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇವರು ಕೂಡ ನೀನಾಸಂನಲ್ಲಿ ಹೆಚ್ಚಾಗಿ ನಾಟಕದ ತರಬೇತಿ ಕೂಡ ಪಡೆದಿದ್ದಾರೆ. ಒಟ್ಟಿನಲ್ಲಿ ಅಚ್ಯುತ್ ಕುಮಾರ್ ದಂಪತಿಗಳಿಬ್ಬರೂ ಕೂಡ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.