ಮದುವೆ (Marriage) ಎನ್ನುವ ವಿಚಾರ ಬಂದಾಗ ಗಂಡು ಹೆಣ್ಣಿನ ಜೀವನದ ಪ್ರಶ್ನೆಯು ಕೂಡ, ಅದರ ಜೊತೆಗೆ ಎರಡು ಕುಟುಂಬದ ಬೆಸುಗೆಯು ಕೂಡ. ಹೀಗಾಗಿ ಹೆಣ್ಣು ಹಾಗೂ ಗಂಡಿನ ಕಡೆಯವರು ತಮ್ಮ ಮನೆತನಕ್ಕೆ ಈ ಹೆಣ್ಣು ಅಥವಾ ಈ ಗಂಡು ಸೂಕ್ತವಾಗಿದ್ದಾರೆ ಎಂದು ಎಲ್ಲಾ ರೀತಿಯಿಂದಲೂ ನೋಡಿಕೊಂಡು ಮದುವೆಗೆ ಮುಂದಾಗುತ್ತಾರೆ.
ಆದರೆ ಮದುವೆಯ ವಿಚಾರಕ್ಕೆ ಸಂಬಂಧ ಪಟ್ಟಂತೆ ಚಾಣಕ್ಯ (Chanakya) ನು ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆಯಲ್ಲಿ ಹೆಣ್ಣನ್ನು ಆಯ್ಕೆ ಮಾಡುವಾಗ ಯಾವ ರೀತಿಯ ಹೆಣ್ಣನ್ನು ತರಬೇಕು ಎನ್ನುವುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಮದುವೆ ಜೀವನದ ಪ್ರಮುಖ ಹೆಜ್ಜೆಯಾಗಿದ್ದು, ಇಲ್ಲಿ ಗಂಡು ಹೆಣ್ಣು ಇಬ್ಬರಲ್ಲಿ ಒಬ್ಬರು ಭಿನ್ನವಾಗಿದ್ದರೂ ಕೂಡ ಹೊಂದಿಕೆ ಎನ್ನುವುದು ದೂರದ ಮಾತಾಗಿರುತ್ತದೆ.

ಅದಲ್ಲದೇ ಬಹುತೇಕ ಪುರುಷರು ಮದುವೆಯಾಗುವ ವೇಳೆಯನ್ನು ಸುಂದರವಾದ ಹೆಣ್ಣು ತನ್ನ ಸಂಗಾತಿಯಾಗಬೇಕು ಎಂದು ಬಯಸುತ್ತಾರೆ. ಆದರೆ ಚಾಣಕ್ಯ (Chanakya) ನ ಪ್ರಕಾರವಾಗಿ ಹೆಣ್ಣು ಹೊರನೋಟಕ್ಕಿಂತ ಒಳನೋಟಕ್ಕೆ ಸುಂದರವಾಗಿರಬೇಕು. ಹೆಣ್ಣಿನ ಗುಣಗಳು ಮತ್ತು ಆಲೋಚನೆಗಳಿಂದ ಮದುವೆಯಾಗಬೇಕು. ಆದರೆ ಆಂತರಿಕ ಸೌಂದರ್ಯವನ್ನು ನೋಡಿಕೊಂಡು ಮದುವೆಯಾಗಬೇಕೋ ಬೇಡವೋ ಎನ್ನುವುದನ್ನು ನಿರ್ಧಾರ ಮಾಡಿ ಎನ್ನುವ ಸಲಹೆಯನ್ನು ನೀಡುತ್ತಾರೆ.
ಅದಲ್ಲದೇ ಹೆಣ್ಣು ಹಾಗೂ ಹೆಣ್ಣಿನ ಕುಟುಂಬದ ಇತಿಹಾಸವು ಉತ್ತಮವಾಗಿರಬೇಕು. ಒಳ್ಳೆಯ ಸಂಸಾರವಿಲ್ಲದ ಹೆಣ್ಣನ್ನು ಸುಂದರವಾಗಿದ್ದರೂ ಮದುವೆಯಾಗಬಾರದು. ಆಕೆಗೆ ಒಳ್ಳೆಯ ಸಂಸಾರವಿದ್ದರೆ ಮಾತ್ರ ಮದುವೆಯಾಗುವುದು ಉತ್ತಮ. ಅಂತಹ ಹೆಣ್ಣನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದರೆ ಇಂತಹ ಮಹಿಳೆಯಿಂದಾಗಿ ಅತ್ತೆಯ ಕುಟುಂಬ ಭವಿಷ್ಯದಲ್ಲಿ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವುದು ಚಾಣಕ್ಯನ ಮಾತು.
ಮಹಿಳೆಯೂ ಎಷ್ಟು ಸುಂದರವಾಗಿದ್ದರೇನು ಆದರೆ ಒರಟು ಸ್ವಭಾವವನ್ನು ಹೊಂದಿರಲೆಬಾರದು. ಒಂದು ವೇಳೆ ಅಂತಹ ಹುಡುಗಿಯನ್ನು ಮದುವೆಯಾದರೆ ಆಕೆಯು ತನ್ನ ಗಂಡನನ್ನು ತನಗೆ ಬೇಕಾದುದನ್ನು ಮಾಡಲು ಒತ್ತಾಯಿಸುತ್ತಾಳೆ. ಅಷ್ಟೇ ಅಲ್ಲದೇ ಆಕೆಯ ಒತ್ತಾಯದಿನ ಗಂಡನು ತನಗೆ ಇಷ್ಟವಿಲ್ಲದೇ ಕೆಲಸಗಳನ್ನು ಮಾಡುವ ಸಂದರ್ಭಗಳೇ ಹೆಚ್ಚಾಗಿರುತ್ತದೆ.
ಹೀಗಾಗಿ ಅಂತಹ ಹುಡುಗಿಯು ಇದ್ದರೆ ಆಕೆಯನ್ನು ಗೊತ್ತಿದ್ದೂ ಮದುವೆಯಾಗುವುದು ಒಳ್ಳೆಯದಲ್ಲ ಎನ್ನುವುದು ಚಾಣಕ್ಯನ ಅಭಿಪ್ರಾಯ.ಮಹಿಳೆ ಕೆಟ್ಟ ಸ್ವಭಾವವನ್ನು ಹೊಂದಿದ್ದರೆ, ಆ ಮಹಿಳೆಯ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಡುವ ತೀರ್ಮಾನವು ಬೇಡ. ಆ ಹೆಣ್ಣಿನ ಕೆಟ್ಟ ಸ್ವಭಾವದಿಂದ ಸಂಸಾರವನ್ನು ಹಾಳಾಗಬಹುದು. ಸುಳ್ಳು ಹೇಳುವ ಹೆಣ್ಣು ಇದ್ದರೆ ಆಕೆಯ ಜೊತೆಗೆ ಮದುವೆಯ ತೀರ್ಮಾನವನ್ನು ಮಾಡಬೇಡಿ.
ಗಂಡನ ಬಳಿಯು ಸುಳ್ಳು ಹೇಳಿ ಅಥವಾ ಗಂಡನ ಬಗ್ಗೆ ಸುಳ್ಳು ಕುಟುಂಬವನ್ನು ಹಾಳು ಮಾಡಬಲ್ಲಲು. ತನ್ನ ಕುಟುಂಬಕ್ಕೆ ವಿಶ್ವಾಸದ್ರೋಹ ಮಾಡುವ ಮಹಿಳೆಯು ಕುಟುಂಬ ಉನ್ನತ್ತಿಗಾಗಿ ಶ್ರಮಿಸಲಾರಳು. ಆದರೆ ಈ ಹೆಣ್ಣು ಗಂಡನ ಬಳಿ ನಂಬಿಕೆ ವಿಶ್ವಾಸದಿಂದ ಇರಲು ಸಾಧ್ಯವಿಲ್ಲ. ಹೀಗಾಗಿ ಅಂತಹ ಹೆಣ್ಣು ಇದ್ದರೆ ಮದುವೆಯಾಗುವುದು ಒಳ್ಳೆಯದಲ್ಲ. ಅದಲ್ಲದೆ ಈ ಚಾಣಕ್ಯನ ಹೇಳುವ ಪ್ರಕಾರ ಹೆಣ್ಣಿಗೆ ಧಾರ್ಮಿಕ ನಿಷ್ಠೆ ಎನ್ನುವುದು ಬಹಳ ಮುಖ್ಯವಾಗಿರುತ್ತದೆ.
ಮಹಿಳೆ ಕೆಲವು ಉಪವಾಸಗಳನ್ನು ಮಾಡಬೇಕು.ಪೂಜೆ ಪುನಸ್ಕಾರ ಹಾಗೂ ದೇವರನ್ನು ಪ್ರಾರ್ಥಿಸಬೇಕು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಭಾಗಿಯಾಗುವ ಹೆಣ್ಣಿನ ಜೊತೆಗೆ ಜೀವನ ಹಂಚಿಕೊಳ್ಳುವುದು ಉತ್ತಮವಾಗಿದೆ ಎನ್ನಬಹುದು. ಅದಲ್ಲದೇ, ಮನೆಗೆಲಸ ಗೊತ್ತಿಲ್ಲದ ಮಹಿಳೆಯನ್ನು ಮದುವೆಯಾಗಬಾರದು. ಇಂತಹ ಹೆಣ್ಣಿಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ತಿಳಿದಿರುವುದಿಲ್ಲ.