ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ABZO VS01 ಎಲೆಕ್ಟ್ರಿಕ್ ಬೈಕ್, ಗ್ರಾಹಕರ ಕೈಗೆ ಅಗ್ಗದ ಬೆಲೆಯಲ್ಲಿ ಲಭ್ಯ, ಇಲ್ಲಿದೆ ಮಾಹಿತಿ

ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಗೆ ಎಲೆಕ್ಟ್ರಿಕ್ ವಾಹನ (Electric Vehicle) ಗಳ ಕಾರುಬಾರು ಜೋರಾಗಿದೆ. ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ವಿವಿಧ ಕಂಪೆನಿಗಳು ಪರಿಚಯಿಸುತ್ತಿದೆ. ಇಂಧನದ ಬೆಳೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅದಲ್ಲದೇ ಈ ಎಲೆಕ್ಟ್ರಿಕ್ ವಾಹನಗಳ ಬೆಲೆ ಹೆಚ್ಚಾಗಿದ್ದರೂ ಕೂಡ ಪೆಟ್ರೋಲ್ (Petrol) ಗೆ ಹಣ ಸುರಿಯುವುದಕ್ಕಿಂತ ಒಂದು ಸಲ ಹಣ ಹಾಕಿ ಈ ಎಲೆಕ್ಟ್ರಿಕ್ ವಾಹನ ಖರೀದಿಸುವುದು ಬೆಸ್ಟ್ ಎನ್ನುವವರೇ ಹೆಚ್ಚು.

ಇದೀಗ ಗುಜರಾತ್ ಪ್ರಧಾನ ಕಚೇರಿ (Gujarath Main Office) ಯ ಎಲೆಕ್ಟ್ರಿಕ್ ಆಟೋಮೊಬೈಲ್ ತಯಾರಕರಾದ ABZO ಮೋಟಾರ್ಸ್ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಆಗಿರುವ ABZO VS01 ಅನ್ನು ಮಾರುಕಟ್ಟೆಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ರೂಪಾಂತರವನ್ನು ಮಾತ್ರ ಮಾರುಕಟ್ಟೆಯಲ್ಲಿ ಪರಿಚಯಿಸಲಾಗಿದ್ದು ಇದರ ಬೆಲೆಯು 1.8 ಲಕ್ಷದಿಂದ ರೂ. 2.22 ಲಕ್ಷದವರೆಗೆ ಇದೆ ಎನ್ನಲಾಗಿದೆ.

ABZO VS01 ಮೋಟಾರ್‌ಸೈಕಲ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಈ ಬೈಕ್ 72 V 70Ah ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 180 ಕಿ.ಮೀ ಮೈಲೇಜ್ ನೀಡುತ್ತದೆ. ಮೋಟಾರ್‌ಸೈಕಲ್ ಮುಂಭಾಗ ಮತ್ತು ಹಿಂಭಾಗದ ಎಲ್‌ಇಡಿ ಲ್ಯಾಂಪ್‌ಗಳು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟ್ಯೂಬ್ಲೆಸ್ ಟೈರ್‌ಗಳೊಂದಿಗೆ 17-ಇಂಚಿನ ಅಲಾಯ್ ವೀಲ್‌ಗಳು, 1,473 ಎಂಎಂ ವೀಲ್‌ಬೇಸ್, 158 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ಸೀಟ್ ಎತ್ತರವನ್ನು ಹೊಂದಿದ್ದು, ನೋಡಲು ಆಕರ್ಷಕವಾಗಿರಲಿದೆ.

ABZO VS01 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೆಟ್ರೊ-ಥೀಮ್ ಕ್ರೂಸರ್ ಡಿಸೈನ್ ಅನ್ನು ಹೊಂದಿದ್ದು, ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಮೋಡ್‌ಗಳಲ್ಲಿ ಲಭ್ಯವಿದೆ. ಆಯಾ ಮೋಡ್‌ಗಳಿಗೆ ಅನುಗುಣವಾಗಿ 45ಕಿ.ಮೀ, 65ಕಿ.ಮೀ ಮತ್ತು 85ಕಿ.ಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ. 6.3 KW ನ ಗರಿಷ್ಠ ಪವರ್ (8.44 bhp) ಮತ್ತು 190 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮೋಟಾರ್‌ಸೈಕಲ್ ಪುನರುತ್ಪಾದಕ ಬ್ರೇಕಿಂಗ್ (ರೀಜೆನ್ ಬ್ರೇಕಿಂಗ್) ತಂತ್ರಜ್ಞಾನದೊಂದಿಗೆ ಬರಲಿದೆ. ಸಾಮಾನ್ಯ ಚಾರ್ಜರ್ ಅನ್ನು ಬಳಸಿಕೊಂಡು ಚಾರ್ಜ್ ಮಾಡಿದರೆ ಸರಿಸುಮಾರು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆಗಲು ಆರು ಗಂಟೆ 35 ನಿಮಿಷಗಳು ತಗಲುತ್ತದೆ. ವೇಗದ ಚಾರ್ಜಿಂಗ್ ತಂತ್ರಜ್ಞಾನವು ಲಭ್ಯವಿದ್ದು, ಈ ಚಾರ್ಜರ್ ನಿಂದ ಮೂರು ಗಂಟೆ 20 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು.

ಮೋಟಾರ್‌ಸೈಕಲ್‌ಗೆ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್‌ ಗಳನ್ನು ಕಾಣಬಹುದು. ಮುಂಭಾಗ ಮತ್ತು ಹಿಂಭಾಗದ ಎರಡೂ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ ಗಳಿದ್ದು, ಕಾಂಬಿ-ಬ್ರೇಕಿಂಗ್ ಸಿಸ್ಟಮ್ (CBS) ನೊಂದಿಗೆ ಜೋಡಿಯಾಗಿ ಲಭ್ಯವಿದೆ. ಅದಲ್ಲದೇ ರಿವರ್ಸ್ ಮೋಡ್ ಕೂಡ ನೀಡಲಾಗಿದೆ. ಇ ಬೈಕ್ ಇಂಪೀರಿಯಲ್ ರೆಡ್, ಮೌಂಟೇನ್ ವೈಟ್, ಜಾರ್ಜಿಯನ್ ಬೇ ಮತ್ತು ಬ್ಲಾಕ್ ಎಂಬ ನಾಲ್ಕು ವಿಭಿನ್ನ ಬಣ್ಣಗಳಲ್ಲಿ ಈ ಲಭ್ಯವಿದ್ದು , ಗ್ರಾಹಕರಿಗೆ ನೂರಕ್ಕೆ ನೂರರಷ್ಟು ಇಷ್ಟವಾಗುತ್ತದೆ.

Leave a Reply

Your email address will not be published. Required fields are marked *