ತನ್ನ ಕುಟುಂಬವನ್ನೇಲ್ಲಾ ಬಿಟ್ಟು ಚಹಾ ಮಾರಲು ಹೊರಟಿದ್ದ ಅಭಿಷೇಕ್ ಬಚ್ಚನ್!! ಐಶ್ವರ್ಯ ರೈ ಬಿಚ್ಚಿಟ್ಟ ಸತ್ಯ!!

ಇತ್ತೀಚಿನ ದಿನಗಳಲ್ಲಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ (Abhishek Bacchan – Aishwarya Rai) ಯವರು ವೈಯುಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಹೌದು, ಅಭಿಷೇಕ್ ಮತ್ತು ಐಶ್ವರ್ಯ ವೈವಾಹಿಕ ಜೀವನದಲ್ಲಿ ಬಿ-ರುಕು ಉಂಟಾಗಿದೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ಇದಕ್ಕೆ ಸಂಬಂಧ ಪಟ್ಟಂತೆ ದಿನಕ್ಕೊಂದು ವಿಚಾರಗಳು ಹೊರಬೀಳುತ್ತಿದ್ದು ಆದರೆ ಯಾವುದಕ್ಕೂ ಸ್ಪಷ್ಟನೆ ಸಿಕ್ಕಿಲ್ಲ.

ಹೌದು, ಈ ವಿಚಾರದ ಬಗ್ಗೆ ಅಭಿಷೇಕ್ ಬಚ್ಚನ್ ದಂಪತಿಗಳಾಗಲಿ, ಅಮಿತಾಭ್ ಬಚ್ಚನ್ (Amitabh Bacchan)ಕುಟುಂಬವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಹೀಗಿರುವಾಗಲೇ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನ (Interview) ವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಸದ್ಯಕ್ಕೆ ಅಭಿಷೇಕ್ ಬಚ್ಚನ್ ಅವರು ಹೇಳಿರುವ ಮಾತುಗಳು ಸದ್ಯಕ್ಕೆ ಸುದ್ದಿಯಲ್ಲಿದ್ದು ಅಭಿಮಾನಿಗಳು ಹೀಗೂ ಆಗಿತ್ತಾ ಎಂದು ಬಾಯಿಗೆ ಕೈ ಇಟ್ಟಿದ್ದಾರೆ.

ಇತ್ತೀಚೆಗೆ, ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಭಿಷೇಕ್ ಬಚ್ಚನ್ (Abhishek Bacchan) ತಮ್ಮ ವೃತ್ತಿ ಜೀವನದ ಆ ದಿನಗಳಲ್ಲಿ ನೆನಪಿಸಿಕೊಂಡಿದ್ದಾಳೆ. ಈ ವೇಳೆಯಲ್ಲಿ ತನ್ನ ಜೀವನದ ಏಳುಬೀಳುಗಳ ಬಗ್ಗೆ ಮಾತನಾಡಿದ್ದು, ‘ನನ್ನ ಕಾಲೇಜನ್ನು ಮಧ್ಯದಲ್ಲಿಯೇ ಬಿಟ್ಟೆ. ನನ್ನ ತಂದೆ ಆರ್ಥಿಕವಾಗಿ ಸ್ವಲ್ಪ ಕಷ್ಟದಲ್ಲಿದ್ದರು. ಅವರು ಕಂಪನಿಯನ್ನು ತೆರೆದಿದ್ದರು. ಅದು ಸಾಕಷ್ಟು ನಷ್ಟವನ್ನುಂಟುಮಾಡಿತು. ಹಾಗಾಗಿ ನಾನು ನನ್ನ ತಂದೆಯ ಹತ್ತಿರ ಇರಬೇಕು ಎಂದು ಬಯಸಿದ್ದೆ. ಗೌತಮ್ ಬೆರ್ರಿ (Gowtham Berry) ಗೆ ಪ್ರೊಡಕ್ಷನ್ ಬಾಯ್ ಆಗಿ ಹೇಗೆ ಕೆಲಸ ಮಾಡಿದ್ದೆ. ಸೆಟ್​ನಲ್ಲಿ ಚಹಾ ಕೂಡಾ ಮಾಡಿದ್ದೆ’ ಎಂದಿದ್ದಾರೆ.

ಅಷ್ಟೇ ಅಲ್ಲದೇ, ‘ನಟನಾಗಲು ಹಂಬಲಿಸುತ್ತಿದ್ದ ಅಭಿಷೇಕ್ ಬಚ್ಚನ್ ಅವರ ಹಾದಿ ಸುಲಭವಾಗಿರಲಿಲ್ಲ. ಅಮಿತಾಬ್ ಬಚ್ಚನ್ ಅವರ ಮಗನನ್ನು ಲಾಂಚ್ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಯಾವುದೇ ನಿರ್ದೇಶಕರು ಸಿದ್ಧರಿರಲಿಲ್ಲ. 20 ವರ್ಷಗಳ ಹಿಂದೆ, ನೀವು ತಿಂಗಳುಗಳ ಮುಂಚೆಯೇ ಬಟ್ಟೆ ಧರಿಸುವುದು ಪ್ಲಾನ್ ಮಾಡಬೇಕಾಗಿತ್ತು. ಈಗಿನಂತೆ ಬಟ್ಟೆ ಕಳುಹಿಸುತ್ತಿರಲಿಲ್ಲ. ಇದು ದೊಡ್ಡ ವಿಷಯ. ಫಿಲ್ಮ್‌ಫೇರ್ ಮತ್ತು ಸ್ಕ್ರೀನ್ ಮಾತ್ರ ದೊಡ್ಡ ಪ್ರಶಸ್ತಿಗಳಾಗಿದ್ದವು. ಅದೊಂದು ಸಂದರ್ಭವಾಗಿತ್ತು. ಅದೊಂದು ದೊಡ್ಡ ಗೌರವವಾಗಿತ್ತು’.

‘ನಾನು ಏನು ಧರಿಸಬೇಕೆಂದು ತಿಳಿಯಲಿಲ್ಲ. ನನ್ನ ಬಳಿ ಅಷ್ಟು ಬಟ್ಟೆ ಇರಲಿಲ್ಲ, ಖರೀದಿಸುವ ಪರಿಸ್ಥಿತಿಯೂ ಇರಲಿಲ್ಲ. ನಾವು ಕಠಿಣ ಸಮಯವನ್ನು ಎದುರಿಸುತ್ತಿದ್ದೆವು. ಹಾಗಾಗಿ ಖರ್ಚು ಕಡಿಮೆ ಮಾಡುತ್ತಿದ್ದೆವು. ನನಗೆ ಏನು ಧರಿಸಬೇಕೆಂದು ತಿಳಿದಿರಲಿಲ್ಲ. ಜೀನ್ಸ್ ಮತ್ತು ಟಿ-ಶರ್ಟ್‌ನಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ. ಹಾಗಾಗಿ, ಒಂದೆರಡು ವರ್ಷಗಳ ಹಿಂದೆ ನನ್ನ ತಂಗಿಯ ಮದುವೆಗಾಗಿ ಮಾಡಿದ್ದ ಶೇರ್ವಾನಿಯನ್ನು ನಾನು ಧರಿಸಿ ಹೋಗಿದ್ದೆ’ ಎಂದು ಹೇಳಿದ್ದಾರೆ.

ಇದೇ ವೇಳೆ ತನಗೆ ಅವಕಾಶ ಕೊಟ್ಟ ನಿರ್ದೇಶಕರನ್ನು ನೆನಪಿಸಿಕೊಂಡಿದ್ದು, ‘ಬಾರ್ಡರ್ ಚಿತ್ರಕ್ಕಾಗಿ ಜೆಪಿ ದತ್ತಾ (JP Datta) ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದು ವೇದಿಕೆಯಿಂದ ಕೆಳಗೆ ನಡೆದುಕೊಂಡು ಹೋಗುತ್ತಿದ್ದಾಗ, ಅಮಿತಾಬ್ ಬಚ್ಚನ್ ಜೊತೆಗೆ ಕುಳಿತಿದ್ದ ನನ್ನನ್ನು ಅವರು ಗುರುತಿಸಿದ್ದರು. ಎರಡು ದಿನಗಳ ನಂತರ, JP ದತ್ತಾ ಅಭಿಷೇಕ್‌ಗೆ ತನ್ನ ಮೊದಲ ಚಿತ್ರವನ್ನು ನೀಡಿದ್ದರು. ವೃತ್ತಿ ಜೀವನ ಆರಂಭಿಸುವುದಕ್ಕೆ ಇಷ್ಟೆಲ್ಲಾ ಕಷ್ಟ ಪಟ್ಟಿರುವುದು ಅಮಿತಾಬ್ ಪುತ್ರ ಎನ್ನುವ ಕಾರಣಕ್ಕೆ’ ಎಂದಿದ್ದಾರೆ.

Leave a Reply

Your email address will not be published. Required fields are marked *