ನಾವು ಡೈವೋರ್ಸ್ ಪಡೆಯುತ್ತಿದ್ದೆನೆ.. ಕೊನೆಗೂ ಮೌನ ಮುರಿದ ಅಭಿಷೇಕ್ ಬಚ್ಚನ್!! ನಟಿಯ ಪತಿ ಕೊಟ್ಟ ಕಾರಣವೇನು ಗೊತ್ತಾ..

ನಟಿ ಐಶ್ವರ್ಯಾ ರೈ (Aishwarya Rai) ಬಾಲಿವುಡ್​ನಲ್ಲಿ ಬೇಡಿಕೆ ನಟಿಯರಲ್ಲಿ ಒಬ್ಬರು. ಬಾಲಿವುಡ್ ನನಟಿ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈಯವರು ವೈಯುಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಕಳೆದ ಕೆಲವೊಂದು ದಿನಗಳಿಂದ ನಟಿಯ ಡೈ-ವೋರ್ಸ್ ವಿಚಾರವೊಂದು ಹರಿದಾಡುತ್ತಿವೆ. ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ (Aishwarya Rai and Abhishek Bacchan) ದಾಂಪತ್ಯದಲ್ಲಿ ನಡೆಯುತ್ತಿರುವ ಬಿ-ರುಕು ಮೂಡಿದೆ.

ಸದ್ಯಕ್ಕೆ ಐಶ್ವರ್ಯ ರೈ ಬಚ್ಚನ್ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಅದಲ್ಲದೇ ನಟಿಯಾಗಲಿ ಬಚ್ಚನ್ ಫ್ಯಾಮಿಲಿಯಾಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಆದರೆ ಇದೀಗ ಅಭಿಷೇಕ್ ಬಚ್ಚನ್ ಅವರು ಡೈ-ವೋರ್ಸ್ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಈ ಹಿಂದೆ ಸದ್ಯ ಬಾಲಿವುಡ್ ಪವರ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿ-ಚ್ಛೇದನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡಿತ್ತು.

ಆದರೆ ಆದಾದ ಬಳಿಕ ಈ ಸುದ್ದಿ ಎನ್ನುವುದು ಖಾತರಿಯಾಗಿತ್ತು. ಆದರೆ ಇದೀಗ ಈ ಜೋಡಿಯ ಹಳೆಯ ಟ್ವೀಟ್ ಒಂದು ಸಖತ್ ವೈರಲ್ ಆಗುತ್ತಿದೆ.ಕಳೆದ ಕೆಲವು ವರ್ಷಗಳ ಹಿಂದೆ ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನ ಪಡೆಯುತ್ತಾರೆ ಎಂಬ ವದಂತಿ ಹಬ್ಬುತ್ತಿದ್ದಂತೆ, ಪೋಸ್ಟ್ ಶೇರ್ ಮಾಡಿ ಆ ವದಂತಿಗೆ ತಮಾಷೆಯ ಮೂಲಕವೇ ಪೂರ್ಣವಿರಾಮ ಹಾಡಿದ್ದರು.

ವೈರಲ್ ಆಗಿರುವ ಪೋಸ್ಟ್ ನಲ್ಲಿ ಅಭಿಷೇಕ್, “ಸರಿ.. ನಾನು ವಿಚ್ಛೇದನ ಪಡೆಯುತ್ತಿದ್ದೇನೆ. ನನಗೆ ಈ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು! ಅಂದಹಾಗೆ ನಾನು ಮರು ಮದುವೆ ಯಾವಾಗ ಆಗುತ್ತೇನೆ ಎಂಬುದನ್ನು ಸಹ ನನಗೆ ತಿಳಿಸುವಿರಾ? ಧನ್ಯವಾದಗಳು.ನನಗೆ ಮತ್ತು ಐಶ್ವರ್ಯಾಗೆ ಹೇಗೆ ನಮ್ಮ ಜೀವನವನ್ನು ನಡೆಸಬೇಕು ಎಂಬುದು ತಿಳಿದಿದೆ. ಮೂರನೇ ವ್ಯಕ್ತಿ ಅದರ ಬಗ್ಗೆ ತಿಳಿಸಿಕೊಡಲು ಅನುಮತಿಸುವುದಿಲ್ಲ.

ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ಅವಳು ನನ್ನನ್ನು ಎಷ್ಟು ಪ್ರೀತಿಸುತ್ತಾಳೆಂದು ನನಗೆ ತಿಳಿದಿದೆ. ನೀವು ನಿಮ್ಮ ಅನುಕೂಲಕ್ಕಾಗಿ ಏನನ್ನಾದರೂ ತಪ್ಪಾಗಿ ಅರ್ಥೈಸಿಕೊಂಡಿದ್ದರೆ, ಅದನ್ನೇ ಮುಂದುವರಿಸಿ. ಅಷ್ಟಕ್ಕೂ ನಾನು ಸಾರ್ವಜನಿಕ ವ್ಯಕ್ತಿ. ನಾನು ಎಲ್ಲಾ ಸಮಯದಲ್ಲೂ ಮಾಧ್ಯಮವನ್ನು ಸಂತೋಷಪಡಿಸಲು ಸಾಧ್ಯವಿಲ್ಲ.

ನನ್ನ ಮದುವೆ ಮತ್ತು ನನ್ನ ಜೀವನ ಮಾಧ್ಯಮಗಳು ಏನು ಹೇಳುತ್ತವೆ ಎಂಬುದನ್ನು ಅನುಸರಿಸಲು-ಅರಿಯಲು ಹೋಗುವುದಿಲ್ಲ. ಹಾಗಾಗಿ ಇದು ನಿಜವಾಗಿಯೂ ನನಗೆ ಸಮಸ್ಯೆಯಲ್ಲ” ಎಂದಿದ್ದರು. ಈ ಪೋಸ್ಟ್ ವೊಂದು ಹರಿದಾಡುತ್ತಿದ್ದು, ಆದರೆ ಕಳೆದ ಕೆಲವು ದಿನಗಳಿಂದ ವೈರಲ್ ಆಗಿರುವ ಡೈವೋರ್ಸ್ ವಿಚಾರಕ್ಕೆ ಸಂಬಂಧ ಪಟ್ಟಂತೆ ಈ ಜೋಡಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Leave a Reply

Your email address will not be published. Required fields are marked *