ಹಿಂದಿನ ಕಾಲದಲ್ಲಿ ಎಲ್ಲಾ ಸಂಬಂಧಗಳಿಗೂ ಅದರದ್ದೇ ಆದ ಮಹತ್ವವಿತ್ತು. ನಮ್ಮ ಹಿರಿಯರು ಕೂಡ ಸಂಬಂಧವನ್ನು ಅಷ್ಟೇ ಜೋಪಾನವಾಗಿಟ್ಟುಕೊಂಡಿದ್ದರು. ವ್ಯಕ್ತಿ ವ್ಯಕ್ತಿಗಳ ನಡುವೆ ಏನಾದರೂ ತಪ್ಪಾದರೆ ಅದನ್ನು ತಿದ್ದಿ ನಡೆಯುವ ಮನೋಭಾವವಿತ್ತು. ಆದರೆ ಆ ಕಾಲವಿಲ್ಲ, ಸಂಬಂಧಗಳ ಮೌಲ್ಯವೇ ತಿಳಿದಿಲ್ಲ. ಇತ್ತೀಚೆಗಷ್ಟೇ ನಡೆದ ಈ ಘಟನೆಯೂ ಎಲ್ಲರನ್ನು ಬೆಚ್ಚಿ ಬೀಳಿಸಿತ್ತು.
ಭಾಯಂದರ್‌ನಲ್ಲಿ ತೊರೆಗೆ ತಳ್ಳಿ ಕಥೆ ಮುಗಿಸಿದ ಆರೋಪದ ಮೇಲೆ 22 ವರ್ಷದ ಯುವಕನನ್ನು ಬಂಧಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಂಧಿತ ಆರೋಪಿಯೂ ಅದೇ ರತ್ನಗಿರಿ ಜಿಲ್ಲೆಯ ರಾಜಾಪುರದ ಮತ್ತೊಬ್ಬ ಮಹಿಳೆಯ ಜೊತೆಗೆ ಸಂಬಂಧ ಬೆಳೆಸಿದ್ದ ಎಂದು ತನಿಖಾಧಿಕಾರಿಗಳಿಗೆ ತಿಳಿದು ಬಂದಿತ್ತು.
ಅಭಿಷೇಕ್ ಸರ್ಫರ್ ಎಂದು ಗುರುತಿಸಲಾದ ಆರೋಪಿಯು ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಬಯಸಿದ್ದನು ಮತ್ತು ಆರು ವರ್ಷಗಳಿಂದ ಸಂಬಂಧದಲ್ಲಿದ್ದವಳ ಜೀವ ತೆಗೆಯಲು ನಿರ್ಧರಿಸಿದ್ದನು ಎಂದು ಪೊಲೀಸರು ತಿಳಿಸಿದ್ದರು. ಹೌದು, ಮಲಬಾರ್ ಹಿಲ್ ಪೊಲೀಸರು ಸರ್ಫರ್ ಜೊತೆ ಸಂಬಂಧ ಹೊಂದಿದ್ದ 20 ವರ್ಷದ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು.
ಅಭಿಷೇಕ್ ಸರ್ಫರ್ ಮತ್ತು ಮೃ-ತ ಅಂಕಿತಾ ಸುರೇಶ್ ಶಿವಗನ್ 2016 ರಿಂದ ಸಂಬಂಧ ಹೊಂದಿದ್ದರು. ಕಳೆದೆರಡು ತಿಂಗಳಿಂದ ಅಂಕಿತಾ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ನಿರಾಕರಿಸಿದರೆ ಅವರ ಊರಿಗೆ ಹೋಗಿ ಇಬ್ಬರ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿಸುವುದಾಗಿ ಹೆದರಿಸಿದ್ದಳು ಎನ್ನಲಾಗಿತ್ತು. ಆದರೆ, ಅಭಿಷೇಕ್ ಸರ್ಫರ್ ಬೇರೆ ಮಹಿಳೆಯ ಜೊತೆಗೆ ಸಂಬಂಧ ಬೆಳೆಸುತ್ತಿದ್ದ ಕಾರಣ ಅಂಕಿತಾಳನ್ನು ಮದುವೆಯಾಗಲು ಇಷ್ಟವಿರಲಿಲ್ಲ.
ಇತ್ತ ಅಂಕಿತಾ ಜೊತೆಗೆ ಜೊತೆಗೆ ಈತನು ಸಂಬಂಧ ಹೊಂದಿದ್ದಾನೆಂದು ಈ ಮಹಿಳೆಗೆ ತಿಳಿದಿತ್ತು. ಈ ಬಗ್ಗೆ ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, “ಈ ಮಹಿಳೆ ನಲಸೋಪಾರಾದಲ್ಲಿ ಉಳಿದುಕೊಂಡಿದ್ದಾಳೆ. ಬೋರಿವಲಿಯಲ್ಲಿ ಎಲ್ಲೋ ಕೆಲಸ ಮಾಡುತ್ತಿದ್ದಾಳೆ, ಅಭಿಷೇಕ್ ಸರ್ಫರ್ ನ ಕೆಲಸದ ಸ್ಥಳಕ್ಕೆ ಹತ್ತಿರದಲ್ಲಿದೆ.
ಸುಮಾರು ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ನೋಡುತ್ತಿದ್ದರು. ಅಭಿಷೇಕ್ ಈ ಮಹಿಳೆಯನ್ನು ಮದುವೆಯಾಗಲು ಬಯಸಿದ್ದನು. ಈ ನಡುವೆ ಆ ಮಹಿಳೆಯೂ ಅಂಕಿತಾ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುವಂತೆ ಹೇಳಿದ್ದಳು. ಹೀಗಾಗಿ ಆರು ವರ್ಷಗಳ ಕಾಲ ಸಂಬಂಧಹೊಂದಿದ್ದ ಅಂಕಿತಾಳ ಜೀವವನ್ನು ಈತನೇ ಕೊನೆಗೊಳಿಸಿದ್ದನು ಎನ್ನುವುದು ನಿಜಕ್ಕೂ ವಿಪರ್ಯಾಸ.