ಅವಿವಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ ನಟ ಅಭಿಷೇಕ್ ಅಂಬರೀಶ್, ಭಾವುಕರಾದ ಸುಮಲತಾ ಅಂಬರೀಶ್

ಚಂದನವನದ ನಟ ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಪ್ರೀತಿಸಿದ ಹುಡುಗಿಯ ಕೈ ಹಿಡಿದಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಹೌದು, ಕಳೆದ ಕೆಲವು ವರ್ಷಗಳಿಂದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ (Fashion Designer Shreeprasad) ಬಿದ್ದಪ್ಪ ಪುತ್ರಿ ಅವಿವಾ (Avivaa) ಅವರು ಹಲವು ವರ್ಷಗಳಿಂದ ಅಭಿಯನ್ನು ಪ್ರೀತಿಸುತ್ತಿದ್ದರು. ಇಬ್ಬರ ಮನೆಯವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದಾರೆ.

ಕೊನೆಗೂ ದೀರ್ಘಕಾಲದ ಪ್ರೀತಿಗೆ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯ ಮುದ್ರೆ ಒತ್ತಿದ್ದು, ಸತಿ-ಪತಿಯರಾಗಿದ್ದಾರೆ. ಇದೀಗ ಮಾಂಗಲ್ಯ ಧಾರಣೆ ಮುಹೂರ್ತ ನೆರವೇರಿದೆ. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರ (Manikya Chamara Vajra) ದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಅಭಿಷೇಕ್ ಅವಿವಾ ಕೊರಳಿಗೆ ತಾಳಿ ಕಟ್ಟಿದ್ದಾರೆ. ಮಗನು ತಾಳಿ ಕಟ್ಟುವ ವೇಳೆ ಸುಮಲತಾ ಅಂಬರೀಶ್ (Sumalata Ambarish) ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಮಾಂಗಲ್ಯ ಧಾರಣೆಯ ವೇಳೆ ಸುಮಲತಾರವರು ಭಾವುಕರಾದ ಕ್ಷಣದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಬೆಂಗಳೂರಿನ ಅರಮನೆ ಮೈದಾನದ ಚಾಮರ ವಜ್ರದಲ್ಲಿ ಮದುವೆಯೂ ನಡೆಯುತ್ತಿದೆ. ​ಒಕ್ಕಲಿಗ ಸಂಪ್ರದಾಯದಂತೆ ಸುಮಲತಾ ಅಂಬರೀಶ್​ ಮಗನ ಮದುವೆಯನ್ನು ಮಾಡಿದ್ದು, ನಟ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rock Line Vankatesh) ಉಸ್ತುವಾರಿಯಲ್ಲಿ ಮದುವೆ ಸಮಾರಂಭವು ನಡೆಯುತ್ತಿದೆ ಈ ಅದ್ಧೂರಿ ವಿವಾಹ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ರಜನೀಕಾಂತ್( Super Star Rajanikanth), ಸುಹಾಸಿನಿ (Suhasini), ವೆಂಕಯ್ಯ ನಾಯ್ಡು (Venkayya Naydu), ಅನಿಲ್ ಕುಂಬ್ಳೆ (Anil Kumble) , ನಟ ಮೋಹನ್ ಬಾಬು (Actor Mohan Babu) ಸೇರಿದಂತೆ ಟಾಲಿವುಡ್, ಸ್ಯಾಂಡಲ್ ವುಡ್, ರಾಜಕೀಯ, ಕ್ರಿಕೆಟ್ ಗಣ್ಯರು ಆಗಮಿಸಿದ್ದಾರೆ. ಹೊಸ ಬದುಕಿಗೆ ಕಾಲಿಟ್ಟ ವಧೂ-ವರರಿಗೆ ಶುಭಾಶಯ ಕೋರಿದ್ದಾರೆ.

ಜೂನ್​ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ (Tripuravasi) ಯಲ್ಲಿ ಅದ್ದೂರಿಯಾಗಿ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ನಡೆಯಲಿದೆ. ಸಿನಿಮಾರಂಗದ ಗಣ್ಯರು ಸೇರಿದಂತೆ ರಾಜಕೀಯಗಣ್ಯರು ಭಾಗಿಯಾಗಲಿದ್ದಾರೆ. ಅದಲ್ಲದೇ, ಇದೇ ತಿಂಗಳ ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. 

 

Leave a Reply

Your email address will not be published. Required fields are marked *