ಬೀಗರೂಟದ ವೇಳೆಯಲ್ಲಿ ಆದ ಸಣ್ಣ ತಪ್ಪಿಗೆ ಮಂಡ್ಯದ ಜನರಲ್ಲಿ ಕೈ ಮುಗಿದು ಕ್ಷಮೆ ಕೇಳಿದ ನಟ ಅಭಿಷೇಕ್ ಅಂಬರೀಶ್ ಮತ್ತು ಸುಮಲತಾ!!! ನಿಜಕ್ಕೂ ಆಗಿದ್ದೇನು!!

ರೆಬಲ್​ ಸ್ಟಾರ್’ ಖ್ಯಾತಿಯ ಹಿರಿಯ ನಟ ದಿ.​ ಅಂಬರೀಶ್ (Ambarish) ಅವರ​ ಪುತ್ರ ಅಭಿಷೇಕ್​ ಅಂಬರೀಶ್​ (Abhishek Ambarish) ಮತ್ತು ಅವಿವಾ ಬಿದ್ದಪ್ಪ (Aviva Biddappa) ಅವರ ಮದುವೆಯೂ ಜೂನ್ 5 ರಂದು ಅದ್ದೂರಿಯಾಗಿ ನಡೆದಿತ್ತು. ಇನ್ನು, ಜೂನ್ 16 ರಂದು ನಿನ್ನೆ ಮದುವೆಯ ಬೀಗರ ಔತಣಕೂಟವನ್ನು ಮಂಡ್ಯದಲ್ಲಿ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು.

ಮದ್ದೂರು (Madduru) ತಾಲೂಕಿನ ಗೆಜ್ಜಲಗೆರೆ (Gejjalagere) ಬಳಿಯ 15 ಎಕರೆ ಪ್ರದೇಶದಲ್ಲಿ ಬೀಗರೂಟವನ್ನು ಆಯೋಜನೆ ಮಾಡಲಾಗಿತ್ತು. ಸುಮಾರು 50 ಸಾವಿರ ಜನರಿಗೆ ಬೊಂಬಾಟ್​ ಬಾಡೂಟ ತಯಾರಿಸಲಾಗಿತ್ತು. ಅದಲ್ಲದೆ ಮಂಡ್ಯದ ಜನರನ್ನು ಖುಷಿ ಪಡಿಸುವ ಸಲುವಾಗಿ ಅಭಿಮಾನಿಗಳ ಬೃಹತ್​ ವೇದಿಕೆಯನ್ನು ತಯಾರಿಸಲಾಗಿತ್ತು. ವಿಶಾಲವಾದ ಸ್ಥಳದಲ್ಲಿ ಬೃಹತ್​ ಜರ್ಮನ್​ ಟೆಂಟ್​ ಹಾಕಿಸಿ ಒಮ್ಮೆಲೇ 4,500 ಮಂದಿ ಕುಳಿತುಕೊಳ್ಳುವಂತಹ ಆಸನದ ವ್ಯವಸ್ಥೆ ಮಾಡಲಾಗಿತ್ತು.

ಮಂಡ್ಯ (Mandya) ದ ಪ್ರಖ್ಯಾತ ಬಾಣಸಿಗರ ತಂಡದ 900 ಜನರು ಸೇರಿ ಅಡುಗೆ ತಯಾರಿಯನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದರು. 7 ಟನ್​ ಮಟನ್​ ಮತ್ತು 8 ಟನ್​ ಚಿಕನ್​ ಬಳಸಿ ಬಗೆ ಬಗೆಯ ಆಹಾರ ಪದಾರ್ಥ ಗಳನ್ನು ತಯಾರಿಸಿದ್ದರು. ರಾಗಿ ಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋ​ಳಿ ಸಾಂಬಾರ್​, ಕಬಾಬ್​, ಮೊಟ್ಟೆ, ತಿಳಿ ಸಾಂಬಾರ್​, ಬಾದುಶಾ, ಪಾಯಸ, ಬೀಡಾ, ಐಸ್​ಕ್ರೀಂ, ಬಾಳೆಹಣ್ಣು ಸೇರಿದಂತೆ ಅನೇಕರ ಖಾದ್ಯಗಳಿದ್ದವು. ಆದರೆ ಕೊನೆಗೆ ಅನೇಕರಿಗೆ ಊಟವು ಸಿಗಲಿಲ್ಲ, ಈ ಕಾರಣಕ್ಕಾಗಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಆದರೆ ಈ ಬಗ್ಗೆ ಅಭಿಷೇಕ್ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಜೆಪಿ ನಗರದಲ್ಲಿನ ನಿವಾಸದಲ್ಲಿ ಅಭಿಷೇಕ್ ಅಂಬರೀಶ್ ಅವರು ಮಾಧ್ಯಮದವರ ಜೊತೆಗೆ ಮಾತನಾಡಿದ್ದು, “ನಮ್ಮ ತಂದೆ-ತಾಯಿ ಆಸೆಯಂತೆ ಮಂಡ್ಯದಲ್ಲಿ ಬೀಗರ ಊಟ ಏರ್ಪಿಡಿಸಲಾಗಿತ್ತು. ತುಂಬಾ ಜನರು ಕಷ್ಟ ಪಟ್ಟು ವ್ಯವಸ್ಥೆ ಮಾಡಿದ್ದರು. ಊಟದಲ್ಲಿ ಯಾವುದೇ ಕೊರತೆಯಾಗಿಲ್ಲ. ಯಾರನ್ನೂ ದುಡ್ಡು ಕೊಟ್ಟು ಕರೆಯಿಸಿಲ್ಲ. ಎಲ್ಲರೂ ಪ್ರೀತಿ- ಅಭಿಮಾನದಿಂದ ಬಂದಿದ್ದಾರೆ. ಕೆಲವರು ಅಡುಗೆ ಮನೆಗೆ ನುಗ್ಗಿದ್ದಾಗ ಸಣ್ಣ ಪುಟ್ಟ ತೊಂದರೆಯಾಗಿದೆ. ಯಾರನ್ನೂ ಊಟ ಇಲ್ಲದೆ ಕಳುಹಿಸಬೇಕೆಂದು ಕರೆಯಿಸಿಲ್ಲ. ಏನಾದರೂ ತೊಂದರೆಯಾಗಿದ್ದರೆ ದಯವಿಟ್ಟು ಕ್ಷಮಿಸಿ” ಎಂದಿದ್ದಾರೆ.

ಜನರು ನಿರೀಕ್ಷೆಗಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಊಟಕ್ಕಿಂತ ಹೆಚ್ಚಾಗಿ ನಿಮ್ಮನ್ನು ನೋಡಲು ನಾವು ಬಂದಿದ್ದೇವು ಎಂದು ಹೇಳಿದವರೇ ಹೆಚ್ಚು. ಹಲವರಿಗೆ ಊಟ ಮಿಸ್ ಆಗಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಆದರೆ, ರಾಜಕೀಯ ವಿರೋಧಿಗಳು ಇದನ್ನೇ ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಲು ಮುಂದಾಗಿದ್ದಾರೆ. ಅವರಿಗೂ ಒಳ್ಳೆಯದು ಆಗಲಿ. ನಮ್ಮ ತಂದೆಯ ಆಸೆಯಂತೆ ಮದುವೆಯಾಗಿದ್ದೇನೆ. ಇಲ್ಲದಿದ್ದರೆ ಸಿಂಪಲ್ ಆಗಿ ಮದುವೆಯಾಗುತ್ತಿದ್ದೆ. ಅವಿವಾ ಮಂಡ್ಯ ಜನತೆಯ ಪ್ರೀತಿ ಕಂಡು ಸ್ಪೀಚ್ ಲೆಸ್ ಆಗಿದ್ದರು. ಜನರು ಇಷ್ಟೊಂದು ಪ್ರೀತಿ ತೋರಿಸುತ್ತಾರಾ ಎಂದು ಎಮೋಶನಲ್ ಆಗಿದ್ದರು” ಎಂದಿದ್ದಾರೆ ಅಭಿಷೇಕ್ ಅಂಬರೀಶ್.

Leave a Reply

Your email address will not be published. Required fields are marked *