ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಮದುವೆ ಅದ್ದೂರಿಯಾಗಿ ನಡೆದಿದೆ. ಮದುವೆಗೂ ಮೊದಲು ಮದುವೆ ಶಾಸ್ತ್ರಗಳು ಕೂಡ ಅಚ್ಚುಕಟ್ಟಾಗಿಯೇ ನಡೆದಿದೆ. ಹೌದು, ಅಂಬಿ ಕನಸಿನಂತೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮದುವೆ ಮಾಡಿದ್ದು, ಈ ಎಲ್ಲದರ ಉಸ್ತುವಾರಿಯನ್ನು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ವಹಿಸಿಕೊಂಡಿದ್ದರು. ಮದುವೆ, ಆರತಕ್ಷತೆ ಕಾರ್ಯಕ್ರಮ ಹೀಗೆ ಎಲ್ಲವೂ ಬಹಳ ಸಂಭ್ರಮದಿಂದಲೇ ನಡೆಯಿತು. ನಟ ಅಭಿಷೇಕ್ ಅಂಬರೀಶ್ ಅವರ ಮದುವೆಗೆ ಸ್ಯಾಂಡಲ್ ವುಡ್ ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರು, ರಾಜಕೀಯ ಗಣ್ಯರು ಹಾಗೂ ಕ್ರಿಕೆಟಿಗರು ಸಾಕ್ಷಿಯಾಗಿದ್ದರು. ಇತ್ತ ನಟನ ಮದುವೆಯ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ.
ಜೂನ್ 10 ರನ್ನು ನಗರದ ಖಾಸಗಿ ಹೋಟೆಲ್‌ನಲ್ಲಿ ಆಪ್ತರಿಗಾಗಿ ಸುಮಲತಾ ಭರ್ಜರಿ ಪಾರ್ಟಿ ಆಯೋಜಿಸಲಾಗಿತ್ತು. ಹೌದು, ಕ್ಲಬ್ ಅಭಿವಾ (Abhivaa) ಹೆಸರಿನಲ್ಲಿ ಸಂಗೀತ್ ಪಾರ್ಟಿಯಲ್ಲಿ ಆಯೋಜನೆಗೊಂಡಿತ್ತು. ಈ ಪಾರ್ಟಿಯಲ್ಲಿ ಚಂದನವನದ ತಾರೆಯರು ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಅದರ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ‘ಬುಲ್ ಬುಲ್’ (Bul Bul) ಚಿತ್ರದ ‘ಜ್ಯೂನಿಯರ್ ಸೀನಿಯರ್’ ಸಾಂಗ್‌ಗೆ ದರ್ಶನ್ ಹಾಗೂ ಅಭಿಷೇಕ್ ಅಂಬರೀಶ್ ಸಖತ್ ಡಾನ್ಸ್ಮಾಡಿದ್ದಾರೆ. ಅದರ ಜೊತೆಗೆ, ‘ಹೇ ಜಲೀಲಾ’ ಹಾಡಿಗೆ ದರ್ಶನ್, ಯಶ್, ಸುಮಲತಾ ಅಂಬರೀಶ್ (Sumlatha Ambarish) ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋವೊಂದು ಸದ್ಯ ವೈರಲ್ ಆಗುತ್ತಿದ್ದುಈ ವಿಡಿಯೋ ನೋಡಿದ ಫ್ಯಾನ್ಸ್ ಫಿದಾ ಆಗಿದ್ದಾರೆ.
ಈ ವಿಡಿಯೋದಲ್ಲಿ ಯಶ್ (Yash) ಕಪ್ಪು ಬಣ್ಣದ ಶೇರ್ವಾನಿ- ಧೋತಿ ಧರಿಸಿದ್ದಾರೆ. ದರ್ಶನ್ (Darshan) ಅವರು ಧರಿಸಿದ್ದ ತೊಟ್ಟಿದ್ದ ಸೂಟ್ ಬ್ಲೇಸರ್ ತೆಗೆದು ಕಪ್ಪು ಬಣ್ಣದ ಟೀಶರ್ಟ್- ಪ್ಯಾಂಟ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಈ ಮೂರು ಜನ ಸ್ಟೇಜ್ ಮೇಲೆ ಅಂಬಿ ಮ್ಯಾನರಿಸಂ ಅನ್ನು ತೋರಿಸುವ ಮೂಲಕ ಚಿಂದಿ ಡಾನ್ಸ್ ಮಾಡಿದ್ದಾರೆ. ಚಂದನವನದ ತಾರೆಯರು ಕ್ಲಬ್ ಅಭಿವಾ ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಜೋಶ್‌ನಲ್ಲಿ ಕುಣಿದಿದ್ದು, ಯಶ್, ದರ್ಶನ್, ಸುಮಲತಾ ಜೊತೆಗೆ ಮಾಲಾಶ್ರೀ (Malashree) , ರಮ್ಯಾಕೃಷ್ಣ (Ramyakrishana) ಕೂಡ ಸಾಥ್ ಕೊಟ್ಟಿದ್ದಾರೆ. ಸದ್ಯಕ್ಕೆ ಸಂಗೀತ್ ಪಾರ್ಟಿಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.