ರೆಬೆಲ್‌ಸ್ಟಾರ್ ಅಂಬರೀಶ್ ಮನೆಯಲ್ಲಿ ನಿನ್ನೆ (Abhishek Ambarish – Aviva Marriage) ಸಂಭ್ರಮದ ವಾತಾವರಣ ಮನೆ ಮಾಡಿತ್ತು. ನಟ ಅಂಬರೀಶ್ (Actor Ambarish) ಹಾಗೂ ಸುಮಲತಾ (Sumalatha) ರವರ ಮಗ ಅಭಿಷೇಕ್ ಹಾಗೂ ಅವಿವಾ ಮದುವೆ ಬಹಳ ಅದ್ದೂರಿಯಾಗಿ ನಡೆದಿದೆ. ಖ್ಯಾತ ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ (Aviva Biddappa) ಜೊತೆ ನಟ ಅಭಿಷೇಕ್ ಅಂಬರೀಶ್ ಸಪ್ತಪದಿ ತುಳಿದಿದ್ದಾರೆ. ಅವಿವಾ ಬಿದ್ದಪ್ಪ ಧರಿಸಿದ್ದ ನೆಕ್ ಲೇಸ್ ಬೆಲೆ ಕೇಳಿದರೆ ಶಾಕ್ ಆಗುವುದು ಪಕ್ಕಾ.
ಹೌದು ಫ್ಯಾಷನ್ ಐಕಾನ್ ಪ್ರಸಾದ್ ಪುತ್ರಿ ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಅಂಬರೀಶ್ ಅವರು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಂದಹಾಗೆ, ಅಭಿಷೇಕ್ ಹಾಗೂ ಅವಿವಾ ಪ್ರೀತಿಸಿ ಮದುವೆ ಆಗಿದ್ದಾರೆ. ಎರಡು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸತಿ ಪತಿಗಳಾಗಿದ್ದಾರೆ. ಬೆಂಗಳೂರಿನ ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ 9:30-10:30 ಮೂರ್ಹತದಲ್ಲಿ ಅಭಿಷೇಕ್ , ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಅವಿವಾ ಬಿದ್ದಪ್ಪರವರು ಧರಿಸಿದ್ದ ನೆಕ್ ಲೆಸ್ ಹೈ ಲೈಟ್ ಆಗಿತ್ತು. ಇಪ್ಪತ್ತು ಲಕ್ಷ ಬೆಲೆ ಬಾಳುವ ನೆಕ್ ಲೆಸ್ ಧರಿಸಿದ್ದರು.
ರೆಬೆಲ್ ಸ್ಟಾರ್ ಪುತ್ರ ಮದುವೆಗೆ ಕಾಲಿವುಡ್, ಟಾಲಿವುಡ್ನಿಂದ ಅನೇಕರು ಗಣ್ಯರು ಆಗಮಿಸಿದ್ದಾರೆ. ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ (Super Star Rajanikanth) ಕೂಡ ಅಭಿಷೇಕ್ ಮದುವೆಗೆ ಆಗಮಿಸಿ ಶುಭಾಶಯ ತಿಳಿಸಿದ್ದಾರೆ. ಅದಲ್ಲದೇ ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ದಂಪತಿಗಳಿಗೆ ಸಿನಿಮಾರಂಗ , ರಾಜಕೀಯ ರಂಗದವರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
Newly married couple #AbishekAmbareesh Aviva Bidappa beaming with smile#Weddingceremony #Wedding #Sandalwood #KFI pic.twitter.com/PCr2oanAFe
— Bangalore Times (@BangaloreTimes1) June 5, 2023
ಇನ್ನು, ಜೂನ್ 7 ರಂದು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ (Tripuravasi) ಯಲ್ಲಿ ಅದ್ದೂರಿಯಾಗಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಆರತಕ್ಷತೆ ನಡೆಯಲಿದೆ. ಇದೇ ತಿಂಗಳ ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ನಟ ಅಭಿಷೇಕ್ ಅಂಬರೀಶ್ ಅವರ ಮದುವೆಯ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಮ್ಮ ನೆಚ್ಚಿನ ನಟನ ಮದುವೆಯ ಫೋಟೋ ಹಾಗೂ ವಿಡಿಯೋಗಳನ್ನು ನೋಡಿ ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.