ದರ್ಶನ್ ಅವರ ಮಾತಿಗೆ ಬೆಲೆ ಕೊಟ್ಟು ಮಂಡ್ಯದ ಸೊಸೆಯಾಗಿ ಅವಿವಾ ಬಿದ್ದಪ್ಪ ನಡೆದುಕೊಂಡ ರೀತಿ ಹೇಗಿತ್ತು ನೋಡಿ!! ಅವಿವಾ ನೋಡೋಕೆ ಎರಡು ಕಣ್ಣು ಸಾಲದು!!

Abhishek ambareesh wife aviva bidappa at madya beegara oota function  : ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ಜೂನ್ 5 ರಂದು ಪ್ರೀತಿಸಿದ ಹುಡುಗಿ ಅವಿವಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಅಂಬಿ ಕನಸಿನಂತೆಯೇ ಮದುವೆಯೂ ಅದ್ದೂರಿಯಾಗಿ ನಡೆದಿದೆ. ಸದ್ಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ದಂಪತಿಗಳು ಮಂಡ್ಯದ ಜನರ ಮುಂದೆ ಪ್ರತ್ಯಕ್ಷವಾಗಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆ ಕಾರ್ಯಕ್ರಮ ಹಾಗೂ ಆರತಕ್ಷತೆ ಹಮ್ಮಿಕೊಂಡಿದ್ದ ಅಭಿಷೇಕ್ ಅಂಬರೀಶ್ (Abhishek Ambarish) ಹಾಗೂ ಅವಿವಾ (Aviva) ಇಂದು ಮಂಡ್ಯದಲ್ಲಿ ಭೀಗರೂಟ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಅಭಿಷೇಕ್ ಅಂಬರೀಶ್ ಪತ್ನಿಯ ಕೈ ಹಿಡಿದು ಮಂಡ್ಯದಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಮಂಡ್ಯ (Mandya) ಕ್ಕೆ ನವಜೋಡಿ ತಮ್ಮ ಖಾಸಗಿ ಕಾರಿನಲ್ಲಿ ಬಂದು ಇಳಿದಿದ್ದಾರೆ. ಪಿಂಕ್ ಸೀರೆಯಲ್ಲಿ ಅವಿವಾ ಮುದ್ದಾಗಿ ಕಾಣಿಸಿಕೊಂಡಿದ್ದು, ಶರ್ಟ್‌- ಪಂಚೆ ಜೊತೆ ಶಲ್ಯ ಧರಿಸಿದ್ದಾರೆ. ಮಂಡ್ಯದಲ್ಲಿ ವಿಶಾಲವಾದ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಮಂದಿ ಕುಳಿತು ಊಟ ಮಾಡುವಾಗೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಬೆಳಗ್ಗೆ 11 ಗಂಟೆಯಿಂದಲೇ ಔತಣಕೂಟ ಆರಂಭಗೊಂಡಿದ್ದು, ಇತ್ತ ಮಂಡ್ಯ ಜನರನ್ನು ಕಂಡು ಅಭಿಷೇಕ್ ಹಾಗೂ ಅವಿವಾ ಕೈ ಮುಗಿದಿದ್ದಾರೆ. ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಅದಲ್ಲದೆ, ಅಭಿಷೇಕ್ ಮತ್ತು ಅವಿವಾ ಅದ್ದೂರಿ ಪಾರ್ಟಿ (Party) ಆಯೋಜನೆ ಮಾಡಲಾಗಿತ್ತು. ಬೆಂಗಳೂರಿ (Banglore) ನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಭಾಗವಹಿಸಿದ್ದರು. ಈ ಸಂಗೀತ ಸಮಾರಂಭದಲ್ಲಿ ಮಾಲಾಶ್ರೀ ಕುಟುಂಬ (Malashree Family), ಗುರುಕಿರಣ್ ಕುಟುಂಬ (Gurukiran Family), ಭಾರತಿ ವಿಷ್ಣುವರ್ಧನ್ (Bharathi Vishnuvardhan) ಭಾಗಿಯಾಗಿದ್ದರು.

ಅದರ ಜೊತೆಗೆ ಅನಿರುದ್ಧ್ (Aniruddh), ಅದಿತಿ ಪ್ರಭುದೇವ (Aditi Prabhudeva), ಹಿರಿಯ ನಟಿ ಜಯಪ್ರದಾ (Jayapradaa) ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivarajkumar) ಸೇರಿದಂತೆ ಅನೇಕರು ಆಗಮಿಸಿದ್ದರು. ಸಂಗೀತ್ ಪಾರ್ಟಿಯಲ್ಲಿ ಸೆಲೆಬ್ರಿಟಿಗಳು ಭರ್ಜರಿಸ್ ಸ್ಟೆಪ್ ಹಾಕಿದ್ದರು. ಸುಮಲತಾ ಅಂಬರೀಷ್ , ಅಭಿಷೇಕ್, ಅವಿವಾ ಜೊತೆ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೂಡ ಡಾನ್ಸ್ ಮಾಡಿದ್ದು, ಈ ಡಾನ್ಸ್ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವಿದೇಶದಲ್ಲಿ ಹನಿಮೂನ್ ಎಂಜಾಯ್ ಮಾಡುತ್ತಿರುವ ಆಶಿಶ್ ವಿದ್ಯಾರ್ಥಿ ಮತ್ತು ಹೆಂಡತಿ ರೂಪಾಲಿ. ಹೇಗೆ ಮಜಾ ಮಾಡುತ್ತಿದ್ದಾರೆ ನೋಡಿ!!

Leave a Reply

Your email address will not be published. Required fields are marked *