ರೆಬೆಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಮದುವೆಯೂ ಅದ್ದೂರಿಯಾಗಿ ನಡೆದಿದೆ. ಜೂನ್ 5 ರಂದು ಪ್ರೀತಿಸಿದ ಹುಡುಗಿ ಅವಿವಾ ಜೊತೆಗೆ ಕಾಲಿಟ್ಟರು. ಅದಲ್ಲದೆ, ಅಭಿಷೇಕ್-ಅವಿವಾ ಅದ್ದೂರಿ ವೆಡ್ಡಿಂಗ್ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಾದ ಯಶ್, ಶಿವಣ್ಣ, ಪ್ರಭುದೇವ, ಜಯಪ್ರದಾ ಸೇರಿ ಅನೇಕ ತಾರೆಯರ ಭಾಗಿಯಾಗಿದ್ದು ಈ ಪಾರ್ಟಿಯೂ ಕಲರ್ ಫುಲ್ ಆಗಿತ್ತು.
ಅಂದಹಾಗೆ, ಮದುವೆ ಮತ್ತು ಆರತಕ್ಷತೆಯ ಬಳಿಕ ಅಭಿಷೇಕ್ ಮತ್ತು ಅವಿವಾ ಅದ್ದೂರಿ ಪಾರ್ಟಿ Party) ಆಯೋಜಿಸಿದ್ದರು. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಪಾರ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರು ಭಾಗವಹಿಸಿದ್ದರು. ಈ ಸಂಗೀತ ಪಾರ್ಟಿಯಲ್ಲಿ ಸೆಲೆಬ್ರಿಟಿಗಳ ಡಾನ್ಸ್ ಹೈ ಲೈಟ್ ಆಗಿತ್ತು. ಸುಮಲತಾ ಅಂಬರೀಷ್ , ಅಭಿಷೇಕ್, ಅವಿವಾ ಜೊತೆ ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೂಡ ಡಾನ್ಸ್ ಮಾಡಿದ್ದಾರೆ.
ಹೌದು, ಅಂಬರೀಶ್ (Ambarish) ಹಾಡಿಗೆ ಎಲ್ಲರೂ ಹೆಜ್ಜೆ ಹಾಕಿದ್ದ ವಿಡಿಯೋಗಳು ವೈರಲ್ ಆಗಿವೆ. ಈ ಸಂಗೀತ ಸಮಾರಂಭದಲ್ಲಿ ಮಾಲಾಶ್ರೀ ಕುಟುಂಬ, ಗುರುಕಿರಣ್ ಕುಟುಂಬ, ಭಾರತಿ ವಿಷ್ಣುವರ್ಧನ್, ಅನಿರುದ್ಧ್, ಪ್ರಭುದೇವ, ಹಿರಿಯ ನಟಿ ಜಯಪ್ರದಾ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಕಳೆದ ಕೆಲವು ದಿನಗಳ ಹಿಂದೆ ನಟ ಅಭಿಷೇಕ್ ಅವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮ, ಸಂಗೀತ್ ಕಾರ್ಯಕ್ರಮ, ಅರಿಶಿಣ ಶಾಸ್ತ್ರ ಸೇರಿದಂತೆ ಹಲವು ಮದುವೆ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದ್ದವು. ಅದಲ್ಲದೇ ಜೂನ್ 5 ರಂದು 9:30 ರಿಂದ 10:30 ವರೆಗಿನ ಮಹೂರ್ತದಲ್ಲಿ ಅಭಿಷೇಕ್ ಮತ್ತು ಅವಿವಾ ತಮ್ಮಿಬ್ಬರ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದರು.
ಬೆಂಗಳೂರಿನ ಜಯಮಹಲ್ (Jayamahal) ನ ಮಾಣಿಕ್ಯ ಚಾಮರ ವಜ್ರ ಕಲ್ಯಾಣ ಮಂಟಪ (Chamaravajra Kalyana Mantapa) ದಲ್ಲಿ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಹಾಗೂ ಕುಟುಂಬಸ್ಥರು ಹಾಗೂ ಸ್ಯಾಂಡಲ್ ವುಡ್ ಸ್ಟಾರ್ಸ್ ಗಳು ಭಾಗಿಯಾಗಿದ್ದರು. ಒಕ್ಕಲಿಗ ಸಂಪ್ರದಾಯದಂತೆ ನಡೆದ ಮದುವೆ ಸಮಾರಂಭಕ್ಕೆ ಅನೇಕರು ಸಾಕ್ಷಿಯಾಗಿದ್ದರು.
ಅದರ ಜೊತೆಗೆ, ಜೂನ್ 7ರಂದು (ಇಂದು) ಪ್ಯಾಲೇಜ್ ಗ್ರೌಂಡ್‌ನಲ್ಲಿ ಆರತಕ್ಷತೆ ಕಾರ್ಯಕ್ರಮವು ನಡೆಯಿತು. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು, ಆತ್ಮೀಯರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು. ನಟ ಅಭಿಷೇಕ್ ಅಂಬರೀಶ್ ಅವರ ಮದುವೆಯ ಸಂಭ್ರಮದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೇ ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಕೂಟ ಏರ್ಪಡಿಸಲಾಗಿದೆ. ಲಕ್ಷಕ್ಕೂ ಹೆಚ್ಚು ಜನ ಭಾಗಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.