ಸ್ವಾಧೀನವಿಲ್ಲದ ಕಾಲಿನಲ್ಲಿ ರಾಯರ ದರ್ಶನ ಪಡೆಯಲು ಬಂದ ಯುವತಿ, ಆದರೆ ಮಠದಲ್ಲಿಯೇ ಆಯಿತು ಪವಾಡ, ಇಲ್ಲಿದೆ ನೋಡಿ!!

ದೇವರು (God) ಇಲ್ಲ ಎಂದು ಹೇಳುವುದು ಸುಲಭ. ಆದರೆ ಕೆಲವೊಮ್ಮೆ ನಮ್ಮ ಸುತ್ತ ಮುತ್ತಲಿನಲ್ಲಿ ನಡೆಯುವ ಘಟನೆಗಳು ದೇವರಿದ್ದಾನೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತದೆ. ಅದರಲ್ಲಿಯು ಗುರು ರಾಯರನ್ನು ನಂಬಿದರೆ ಭಕ್ತರನ್ನು ಎಂತಹ ಸನ್ನಿವೇಶದಲ್ಲಿಯು ಕೈ ಬಿಡುವುದಿಲ್ಲ. ಗುರು ರಾಯ (Guru Raya) ರ ಪವಾಡ ಎಂದರೆ ಅಷ್ಟಿಷ್ಟಲ್ಲ.

ಈಗಾಗಲೇ ಅಂತಹ ಪವಾಡಗಳು ನಡೆದಿರುವುದು ಉದಾಹರಣೆಗಳು ಇವೆ. ಗುರು ರಾಯರನ್ನು ನಂಬಿದ ಭಕ್ತಳ ಬಾಳಲ್ಲಿ ಇಂತಹದೊಂದು ಪವಾಡವು ನಡೆದಿದೆ. ಹೌದು, ಚಿತ್ರದುರ್ಗದ ರಾಯರ ಮಠ (Rayara Mata at Chitradurga) ದಲ್ಲಿ ಪವಾಡವೊಂದು ನಡೆದಿದ್ದು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬೆಂಗಳೂರಿನ ಯಲಹಂಕ (Banglore Yalahanka) ಮೂಲದ ಶ್ರೀಕಾಂತ್ ಮತ್ತು ಅರುಣಾ (Shreekanth and Arunaa) ದಂಪತಿ ಶಿವಮೊಗ್ಗ (Shivamogga) ದಿಂದ ಬೆಂಗಳೂರಿಗೆ ತೆರಳುತ್ತಿದ್ದರು.

ವಿಕಲಚೇತನ ಮಗಳು ತೇಜಸ್ವಿನಿ (Tejaswini) ಮಗ ಸಾಗರ್​ (Sagar) ಕೂಡ ರಾಯನ ದರ್ಶನಕ್ಕಾಗಿ ಬಂದಿದ್ದರು.ತನ್ನ ಇಬ್ಬರು ಮಕ್ಕಳಿಗೆ ಅಂಗ ವೈಕಲ್ಯ ಕಾಡುತ್ತಿದ್ದ ಕಾರಣ ಹೀಗಾಗಿ ವೀಲ್ ಚೇರ್ ನಲ್ಲಿಯೇ ಮಠಕ್ಕೆ ಬಂದಿದ್ದರು. ಶ್ರೀರಾಯರು ವೆಂಕಣ್ಣಗೆ ಮೋಕ್ಷ ಕೊಟ್ಟ ಸ್ಥಳ ಹಾಗೂ ಶ್ರೀರಾಯರ ಚಲ ಬೃಂದಾವನ ದರ್ಶನವಿರುವ ಮಠವಾಗಿದೆ. ಹೌದು ರಕ್ತನಾಳ ಸಮಸ್ಯೆಯಿಂದ ಕಳೆದ ಆರು ತಿಂಗಳಿಂದ ತೇಜಸ್ವಿನಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಳು.

ಹೀಗಾಗಿ ಒಬ್ಬಳೇ ಯಾರ ಸಹಾಯವು ಇಲ್ಲದೇನೆ ನಡೆಯುವುದು ಕಷ್ಟವಾಗಿತ್ತು. ಆದರೆ ರಾಯರ ದರ್ಶನ ನಂತರ ಮಗಳಿಗೆ ಒಂದು ಪ್ರದಕ್ಷಿಣೆ ಹಾಕಬೇಕೆಂದು ಆಸೆಯಾಗಿದೆ. ಅಮ್ಮನನ್ನು ಕೇಳಿದಳು, ಅಮ್ಮ ಅನುಮತಿ ನೀಡಿ ರಾಯರಲ್ಲಿ ಪ್ರಾರ್ಥಿಸಿದ್ದಾಳೆ. ಆ ವೇಳೆಯಲ್ಲಿ ಯಾರು ಕೂಡ ನಂಬಲು ಸಾಧ್ಯವಾಗದ ಪವಾಡವೊಂದು ನಡೆದೇ ಹೋಗಿದೆ.

ಸಂಜೆ ರಾಯರ ಮಠಕ್ಕೆ ವೀಲ್ ಚೇರ್​ನಲ್ಲಿ ಬಂದಿದ್ದ ತೇಜಸ್ವಿನಿ, ರಾಯರ ಮಠವನ್ನು ಮೂರು ಸುತ್ತು ಹಾಕಿದ್ದಾಳೆ. ರಾಯರ ಪವಾಡದಿಂದ ತೇಜಸ್ವಿನಿ ನಡೆದಾಡಿದ್ದಾಳೆಂದು ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ. ಈ ಪವಾಡ ನೋಡಿ ಅಲ್ಲಿದ್ದವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ರಾಯರು ಇದ್ದಾರೆ ಎನ್ನುವುದಕ್ಕೆ ಇದಕ್ಕಿಂತ ಮತ್ತೊಂದು ಉದಾಹರಣೆಯ ಅಗತ್ಯವಿಲ್ಲ.

Leave a Reply

Your email address will not be published. Required fields are marked *