ಹುಟ್ಟು ಸಾ-ವಿನ ಲೆಕ್ಕಾಚಾರವನ್ನು ಯಾರು ಕೂಡ ತಿಳಿಯಲು ಸಾಧ್ಯವಿಲ್ಲ. ಇವತ್ತಿದ್ದವರು ನಾಳೆ ಇರುತ್ತಾರೆಯೇ ಎನ್ನುವ ಗ್ಯಾರಂಟಿ ಕೂಡ ಇಲ್ಲ. ಆದರೆ ಈ ಘಟನೆಯ ಬಗ್ಗೆ ತಿಳಿದರೆ ಎಂತಹವರಿಗಾದರೂ ಕರುಳು ಚು-ರ್ ಎನ್ನದೇ ಇರದು. ತಮ್ಮ ಸುಂದರ ಸಂಸಾರದ ಖುಷಿಯನ್ನು ಹೆಚ್ಚಿಸಲು ಮತ್ತೊಂದು ಜೀವ ಬರುತ್ತದೆ ಎಂದರೆ ಯಾವುದೇ ವ್ಯಕ್ತಿಗೆ ಖುಷಿಯಾಗಲ್ಲ ಹೇಳಿ?.
ತನ್ನ ಕಂದಮ್ಮನನ್ನು ಎತ್ತಿ ಮುದ್ದಾಡಬೇಕು ಎನ್ನುವ ಕನಸು ಎಲ್ಲಾ ಗಂಡಸಿಗೂ ಇರುತ್ತದೆ. ಆದರೆ ಆಂಧ್ರದ ಆಸ್ಪತ್ರೆ (Andhra) ವೊಂದರಲ್ಲಿ ಮಗು ಜನಸಿದ್ದು, ಇತ್ತ ಅದೇ ಆಸ್ಪತ್ರೆಯಲ್ಲಿ ಮಗುವಿನ ತಂದೆ ಸಾ-ವನ್ನಪ್ಪಿದ್ದಾರೆ. ಕಾರಂಪುಡಿ (Karampudi) ಯ ಬತ್ತಿನ ಆನಂದ್ ಅವರು ಮೃ- ತಪಟ್ಟ ದುರ್ದೈವಿ. ಹೌದು ಈ ಆನಂದ್ ಅವರ ಪತ್ನಿ ರಾಮಾಂಜಿನಿ (Anand Wife Ramanjini) ತುಂಬು ಗರ್ಭಿಣಿ.
ಇನ್ನೇನು ಕೆಲವೇ ದಿನಗಳಲ್ಲಿ ತನ್ನ ಮುದ್ದಾದ ಕಂದ ಭೂಮಿಬರುವ ಖುಷಿ ತವಕ. ಆದರೆ ಮಗುವಿನ ಜನನದ ಖುಷಿ ಒಂದೆಡೆಯಾದರೆ, ಪತಿಯೇ ಇಲ್ಲ ಎನ್ನುವ ನೋ-ವು ಇನ್ನೊಂದೆಡೆ. ಹೌದು, ರಾಮಾಂಜಿನಿಯವರಿಗೆ ಶುಕ್ರವಾರ ರಾತ್ರಿ ಹೆರಿಗೆ ನೋ-ವು (Delivery Pain) ಕಾಣಿಸಿಕೊಂಡಿದ್ದು, ರಾತ್ರಿ 9 ಗಂಟೆಗೆ ಸುಮಾರಿಗೆ ಆನಂದ ತನ್ನ ಪತ್ನಿಯನ್ನು ಆಶಾ ಕಾರ್ಯಕರ್ತೆಯರ ಜೊತೆಗೆ ಕಾರಂಪುಡಿ ಪಿಎಚ್‌ಸಿ (Primary Health Centre) ಕರೆದುಕೊಂಡು ಹೋಗಿದ್ದರು.
ಅಲ್ಲಿ ವೈದ್ಯರು ಇರಲಿಲ್ಲ, ಹೀಗಾಗಿ ಗುರಜಾಲ ಸರ್ಕಾರಿ ಆಸ್ಪತ್ರೆ (Gurajala Government Hospital) ಗೆ ಹೋಗುವಂತೆ ಹೇಳಿದ್ದರು. ಅಲ್ಲಿಂದ 108 ಆಂಬ್ಯುಲೆನ್ಸ್ ನಲ್ಲಿ 20 ಕಿ.ಮೀ ದೂರದ ಗುರಜಾಲ ಆಸ್ಪತ್ರೆಗೆ ಕರೆದುಕೊಂಡು ಬಂದ ಕೂಡಲೇ ವೈದ್ಯರು ತುಂಬು ಗರ್ಭಿಣಿಯನ್ನು ಪರೀಕ್ಷಿಸಿದ್ದರು.ಆ ಬಳಿಕ ವೈದ್ಯರು ಆಮ್ನಿಯೋಟಿಕ್ ದ್ರವ ಕಡಿಮೆಯಾಗಿದೆ. ಅದಲ್ಲದೇ ರಕ್ತಹೀನತೆಯಿದ್ದು, ನರಸರಾವ್ ಪೇಟೆ ಸರ್ಕಾರಿ ಆಸ್ಪತ್ರೆ (Narasarav Pete Government Hospital) ಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದರು.
ಆಸ್ಪತ್ರೆಯಿಂದ ಆಸ್ಪತ್ರೆಗೆ ತಿರುಗಾಡಿದ್ದ ಈ ದಂಪತಿಗಳ ಬದುಕಿನಲ್ಲಿ ಕಾರ್ಮೋಡ ಕವಿಯುತ್ತದೆ ಎಂದು ಸ್ವತಃ ಅವರಿಗೂ ಕೂಡ ತಿಳಿದಿರಲಿಲ್ಲ. ವೈದ್ಯರ ಸಲಹೆಯಂತೆ ಪತಿ ಆನಂದ್ ಹೆಂಡತಿಯನ್ನು ನರಸರಾಯಪೇಟೆ ಆಸ್ಪತ್ರೆಗೆ ಆಂ-ಬ್ಯುಲೆನ್ಸ್ನಲ್ಲಿ ಕಳುಹಿಸಿದ್ದರು. ಆನಂದ್ ಅವರು ಬೈಕ್ ನಲ್ಲಿ ಆಸ್ಪತ್ರೆಗೆ ತೆರಳಿದ್ದು, ಆದರೆ ಈ ವೇಳೆಯಲ್ಲಿ ಆನಂದ್ ಅವರನ್ನು ಕರೆದುಕೊಂಡು ಹೋಗಲು ಯಮನು ಕಾಯುತ್ತಿದ್ದ ಎಂದು ಅನಿಸುತ್ತದೆ.
ಜೂಲಕಲ್ಲು (Julikallu) ಎಂಬ ಸ್ಥಳದಲ್ಲಿ ರಸ್ತೆಯ ಗುಂಡಿಗೆ ಬಿದ್ದ ಪರಿಣಾಮವಾಗಿ ಆನಂದ್ ಅವರು ಗಾ-ಯಗೊಂಡಿದ್ದರು. ಆ ತಕ್ಷಣವೇ ಕಾರಂಪುಡಿಯಿಂದ ಆಂಬುಲೆನ್ಸ್‌ನಲ್ಲಿ ನರಸರಾವ್‌ಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಗಾ-ಯಗೊಂಡಿದ್ದ ಆನಂದ್ ಇ-ಹಲೋಕ ತ್ಯಜಿಸಿದ್ದರು.
ಇತ್ತ ಆನಂದ್ ಪತ್ನಿ ಮುಂಜಾನೆಯ ವೇಳೆಯಲ್ಲಿ ಹೆಣ್ಣು ಮಗುವಿನ ಜನ್ಮ ನೀಡಿದ್ದು, ಈ ಘಟನೆಯಿಂದ ಕುಟುಂಬದಲ್ಲಿ ಮೌನ ಆವರಿಸಿದೆ. ಮಗುವಿನ ಆಗಮನದ ಖುಷಿ ಒಂದೆಡೆಯಾದರೆ, ರಾಮಾಂಜಿನಿಯವರು ಪತಿಯನ್ನು ಕಳೆದುಕೊಂಡ ದುಃಖದಲ್ಲಿದ್ದು, ಈ ಕಷ್ಟವು ಯಾವ ಹೆಣ್ಣಿಗೂ ಬೇಡ ಎನ್ನುವಂತಾಗಿದೆ.