ಕೆಲವೊಮ್ಮೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ಏನು ಶೇರ್ ಮಾಡಿದರೂ ಕೂಡ ವೈರಲ್ ಆಗುತ್ತಿರುತ್ತದೆ. ಹೀಗಾಗಿ ಕೆಲವು ಯುವಕ ಯುವತಿಯರು ನೆಟ್ಟಿಗರ ಗಮನ ಸೆಳೆಯಲು ನಾನಾ ರೀತಿಯ ಎಡವಟ್ಟು ಮಾಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಜೀವದ ಜೊತೆಗೆ ಆಟವಾಡುವ ಯುವಕ ಯುವತಿಯರ ಸಂಖ್ಯೆಗೇನು ಕೊರತೆಯಿಲ್ಲ.
ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral) ಆಗಿ ನೆಟ್ಟಿಗರ ಗಮನ ಸೆಳೆಯುತ್ತಿರುತ್ತದೆ. ಇದೀಗ ಯುವಕನೊಬ್ಬ ರೈಲಿನಲ್ಲಿ ಹುಚ್ಚಾಟ ಮೆರೆದಿರುವ ಘಟನೆಯೊಂದು ನಡೆದಿದೆ. ಮುಂಬೈ ಲೋಕಲ್ ರೈಲಿ (Mumbai Local Train) ನಲ್ಲಿ ಯುವಕನು ತನ್ನ ಜೀವವನ್ನು ಲೆಕ್ಕಿಸದೆ ಚಲಿಸುವ ರೈಲಿನಲ್ಲಿ ಅತಿರೇಕ ಎನಿಸುವಂತೆ ವರ್ತಿಸಿದ್ದಾನೆ.

ಕುರ್ಲಾ (Kurla) ದಿಂದ ಮನ್ಖುರ್ದ್ (Mankhurd) ಗೆ ಸಂಚರಿಸುತ್ತಿದ್ದ ಮುಂಬೈ ಲೋಕಲ್ ರೈಲಿನಲ್ಲಿ ಯುವಕನೊಬ್ಬ ಫುಟ್ಬೋರ್ಡ್ನ ಕೆಳಗೆ ಇಳಿದು ಗಾಳಿಗೆ ತೇಲಾಡುತ್ತಿದ್ದಾನೆ. ಈ ವಿಡಿಯೋವನ್ನು ಎಕ್ಸ್ನಲ್ಲಿ ಶೇರ್ ಮಾಡಲಾಗಿದ್ದು, ಸದ್ಯಕ್ಕೆ ಯುವಕನ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (Social Media) ದಲ್ಲಿ ವೈರಲ್ ಆಗುತ್ತಿದೆ.
ರೈಲಿನಲ್ಲಿ ಕುಳಿತುಕೊಳ್ಳಲು ಸೀಟುಗಳು ಖಾಲಿಯಿದ್ದರೂ ಈ ಯುವಕನು ಈ ರೀತಿಯ ಹುಚ್ಚಾಟ ಮಾಡಿದ್ದಾನೆ. ಅ-ಪಾಯಕಾರಿ ಸ್ಟಂಟ್ ಮಾಡಿದ್ದು, ಆತನ ಹುಚ್ಚಾಟ ಎಷ್ಟಿದೆ ಎನ್ನುವುದು ನೀವಿಲ್ಲಿ ನೋಡಬಹುದು. ಈ ಯುವಕನ ವಿಡಿಯೋದಲ್ಲಿ ರೈಲು ಮೆಟ್ಟಿಲಗಳ ಮೇಲೆ ಯುವಕನು ನಿಂತು ಕೊಂಡು ರೈಲಿನ ರಾಡ್ ಹಿಡಿದುಕೊಂಡಿದ್ದಾನೆ.
ತನ್ನ ಸ್ಟಾಪ್ ಬರುತ್ತಿದ್ದಂತೆಯೇ ರೈಲು ನಿಲ್ಲಿಸುವ ಮುನ್ನವೇ ಯುವಕನು ರೈಲಿನಿಂದ ಜಿಗಿದಿದ್ದಾನೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ವಿಡಿಯೋ ನೋಡಿದ ರೈಲ್ವೆ ಸಂರಕ್ಷಣಾ ಪಡೆಯು ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹುಚ್ಚು ಸಾಹಸ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇತ್ತ ನೆಟ್ಟಿಗರು (Netizens) ಈ ಯುವಕನ ಈ ರೀತಿಯ ವ-ರ್ತನೆಗೆ ಗರಂ ಆಗಿದ್ದು ಖಾ-ರವಾಗಿಯೇ ಪ್ರತಿಕ್ರಿಯೆ ನೀಡುತ್ತಿದ್ದಾರೆ.