ಇತ್ತೀಚೆಗಿನ ದಿನಗಳಲ್ಲಿ ಗಂಡ ಹೆಂಡತಿ ಸಂಬಂಧಗಳು ಅರ್ಥವನ್ನು ಕಳೆದುಕೊಳ್ಳುತ್ತಿದೆ. ಗಂಡ ಹೆಂಡಿರ ನಡುವೆ ಮೂರನೇ ವ್ಯಕ್ತಿಯ ಪ್ರವೇಶದಿಂದ ಸಂಬಂಧಗಳಲ್ಲಿ ಬಿ-ರುಕು ಮೂಡುತ್ತಿದೆ. ಚೆನ್ನೈ (Chennai) ಬಳಿ ಪತ್ನಿ ತನ್ನ ಸ್ನೇಹಿತನೊಂದಿಗೆ ಸೇರಿ ಪತಿಯನ್ನು ಓಡುವ ರೈಲಿನಿಂದ ತಳ್ಳಿ ಕೊ-ಲೆ ಮಾಡಲು ಯತ್ನಿಸಿದ ಘಟನೆಯೊಂದು ನಡೆದಿತ್ತು.
ಮೆಕ್ಯಾನಿಕ್ ರಾಜೇಂದ್ರನ್ (Rajendran) ಚೆನ್ನೈನ ಅವಡಿ ನಿವಾಸಿಯಾಗಿದ್ದು, ಇವರನ್ನು ಅರಕ್ಕೋಣಂ (Aarakkonam) ಬಳಿ ಚೆನ್ನೈನಿಂದ ತಿರುತ್ತಣಿಗೆ ಹೋಗುತ್ತಿದ್ದ ವೇಳೆಯಲ್ಲಿ ವಿದ್ಯುತ್ ರೈಲಿನಿಂದ ಬಿದ್ದು ಚಿ-ಕಿತ್ಸೆಗಾಗಿ ಅರಕ್ಕೋಣಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆಯು ಬಳಿಕ ಅರಕ್ಕೋಣಂ ರೈಲ್ವೆ ಪೊಲೀಸರು (Aarakkonam Railway Police) ಆತನನ್ನು ವಿಚಾರಣೆಗೆ ಒಳಪಡಿಸಿದ್ದರು.
ಆ ವೇಳೆಯಲ್ಲಿ ವ್ಯಕ್ತಿಯು ಏನಾಯಿತು ಎನ್ನುವುದನ್ನು ಬಾಯಿಬಿಟ್ಟಿದ್ದು, ‘ಕಳೆದ 29ರಂದು ಮಧ್ಯಾಹ್ನ ತಿರುತ್ತಣಿ ಮುರುಗನ್ ದೇಗುಲ (Tiruttani Temple) ಕ್ಕೆ ತೆರಳಲು ಚೆನ್ನೈನಿಂದ ತಿರುತ್ತಣಿಗೆ ಅವಡಿ ಬಳಿಯ ಎಲೆಕ್ಟ್ರಿಕ್ ರೈಲು ಹತ್ತಿದೆ. ನಾನು ಅರಕ್ಕೋಣಂ ಮತ್ತು ತಿರುತ್ತಣಿ ನಡುವಿನ ಕಟ್ಟು ರೈಲ್ವೇ ಮೇಲ್ಸೇತುವೆ ಬಳಿ ಇದ್ದಾಗ, ಟವೆಲ್ ನಿಂದ ಮುಖವನ್ನು ಮುಚ್ಚಿಕೊಂಡಿದ್ದ ಮೂವರು ವ್ಯಕ್ತಿಗಳು ನನ್ನನ್ನು ಕೊ-ಲ್ಲಲು ರೈಲಿನಿಂದ ಕೆಳಗೆ ತಳ್ಳಿದರು.
ನಾನು ಗಾ-ಯಗೊಂಡು ಪ್ರಜ್ಞೆ ಕಳೆದುಕೊಂಡೆ. ಸಂಜೆ ಪ್ರಜ್ಞೆ ಬಂದಾಗ ಅರಕ್ಕೋಣಂ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದೆ. ನನಗೂ ನನ್ನ ಪತ್ನಿ ಅಶ್ವಿನಿಗೂ ಆಗಾಗ ಕೌಟುಂಬಿಕ ಕಲಹ ಉಂಟಾಗುತ್ತಿತ್ತು. ಇದರಿಂದ ಆತನ ಪತ್ನಿ ಕೂಲಿ ಆಳುಗಳನ್ನು ಬಳಸಿ ನನ್ನ ಹತ್ಯೆಗೆ ಮುಂದಾಗಿರುವ ಶಂಕೆ ವ್ಯಕ್ತವಾಗಿದೆ,’’ ಎಂದಿದ್ದರು.
ಮೆಕ್ಯಾನಿಕ್ ರಾಜೇಂದ್ರನ್ ಅವರಿಂದ ಹೇಳಿಕೆ ಪಡೆದುಕೊಂಡಿದ್ದ ಪೊಲೀಸರು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದರು.ಆ ಬಳಿಕ ಪೊಲೀಸರು ಈ ಘಟನೆಗೆ ಸಂಬಂಧಪಟ್ಟಂತೆ ರಾಜೇಂದ್ರನ್ ಪತ್ನಿ ಅಶ್ವಿನಿ (Ashwini) ಯನ್ನು ವಿಚಾರಣೆ ನಡೆಸಿದ್ದರು. ತನಿಖೆಯ ವೇಳೆಯಲ್ಲಿ ಆಕೆ ಮತ್ತು ಆಕೆಯ ಸ್ನೇಹಿತ ಚೆನ್ನೈ ಸೆಂಬಿಯಂ (Sembiyam) ನ ಅನುರಾಗ್ (Anurag) ನಡುವೆ ಅ-ನೈತಿಕ ಸಂಬಂಧವಿತ್ತು.
ಈ ವಿಚಾರವಾಗಿ ರಾಜೇಂದ್ರನ್ ಹಾಗೂ ಅವರ ಪತ್ನಿ ಅಶ್ವಿನಿ ನಡುವೆ ಜಗಳ ನಡೆದಿತ್ತು. ಅನುರಾಗ್ ಜೊತೆ ಅಶ್ವಿನಿ ಪ್ರತಿದಿನ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಅದಲ್ಲದೇ, ಪತಿ ರಾಜೇಂದ್ರನ್ ಅವರು ತಿರುತ್ತಣಿ ಮುರುಗನ್ ದೇವಸ್ಥಾನಕ್ಕೆ ಹೋಗುವುದಾಗಿ ಅಶ್ವಿನಿಗೆ ತಿಳಿಸಿದ್ದನು. ಈ ವಿಚಾರವನ್ನು ಅನುರಾಗ್ ಗೆ ತಿಳಿಸಿದ್ದಳು. ಕೊನೆಗೆ ಅಶ್ವಿನಿ ಮಾತು ಕೇಳಿ ಅನುರಾಗ್ ಪ್ಲಾನ್ ಮಾಡಿ, ರೈಲಿನಲ್ಲಿ ಚಲಿಸುತ್ತಿದ್ದ ರಾಜೇಂದ್ರನ್ ನನ್ನು ತ-ಳ್ಳಿದ್ದನು.
ಆದರೆ ರೈಲು ನಿಧಾನವಾಗಿ ಚಲಿಸುತ್ತಿದ್ದ ಕಾರಣ ರಾಜೇಂದ್ರನ್ ಕೆಳಗೆ ಬಿದ್ದಿದ್ದರಿಂದ ಗಂ-ಭೀರ ಗಾ-ಯಗೊಂಡು ಪ್ರಾ-ಣಾಪಯದಿಂದ ಪಾರಾಗಿದ್ದರು. ಕೊನೆಗೂ ಈ ಕೃತ್ಯ ಎಸಗಿದ್ದ ಅಶ್ವಿನಿ, ಆಕೆಯ ಗೆಳೆಯ ಅನುರಾಗ್ (Anuraj), ಕಮಲೇಶ್ವರನ್ (Kamaleshwaran) ಮತ್ತು ದಿನೇಶ್ (Dinesh) ಅವರನ್ನು ಪೊಲೀಸರು ಬಂ-ಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವೆಲ್ಲೂರು ಕೇಂದ್ರ ಕಾ-ರಾಗೃಹದಲ್ಲಿ ಇರಿಸಿದ್ದು, ಈ ಘಟನೆಯನ್ನು ನೋಡಿದಾಗ ಮನುಷ್ಯನು ಸ್ವಾರ್ಥಕ್ಕಾಗಿ ಏನನ್ನು ಮಾಡಲು ಸಿದ್ಧವಿದ್ದಾನಲ್ಲ ಎಂದೆನಿಸುತ್ತದೆ.