ಗಂಡ ನೀಡುತ್ತಿದ್ದ ಹಿಂ-ಸೆ ತಾಳಲಾರದೆ ಜೀವ ಕಳೆದುಕೊಂಡ ಗೃಹಿಣಿ, ತನಿಖೆಯ ವೇಳೆ ಹೊರಬಿಟ್ಟು ಅಸಲಿ ಸತ್ಯ, ಆಗಿದ್ದೇನು ಗೊತ್ತಾ?

ನಾವಿಂದು ಅಭಿವೃದ್ಧಿ (Development) ಹೊಂದಿದ್ದು, ಎಲ್ಲವನ್ನು ಬಲ್ಲವರಾಗಿದ್ದೇವೆ. ಆದರೆ ಸ್ವಾರ್ಥಕ್ಕಾಗಿ ಬೇರೆಯವರ ಜೀವನದ ಜೊತೆಗೂ ಆಟ ಆಡುವ ಮಟ್ಟಿಗೆ ನಮ್ಮ ಮನಸ್ಥಿತಿಗಳು ತಲುಪಿದೆ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಕೊ-ಲೆ, ಅ-ತ್ಯಾಚಾರ ಹಾಗೂ ಆ-ತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇಂತಹದ್ದೇ ಒಂದು ಘಟನೆಯೊಂದು ಬೆಂಗಳೂರಿ (Banglore) ನಲ್ಲಿ ಬೆಳಕಿಗೆ ಬಂದಿದ್ದು ಮನೆಯಲ್ಲಿ ಫ್ಯಾನ್​ಗೆ ನೇ-ಣು ಬಿಗಿದುಕೊಂಡು ಗೃಹಿಣಿಯೊಬ್ಬರು ಸು-ಸೈಡ್ ಮಾಡಿಕೊಂಡಿದ್ದಾರೆ.

ಈ ಸಂಬಂಧ ಗೋವಿಂದರಾಜನಗರ ಠಾಣೆ (Govinda Nagar Station) ಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆಕೆಯ ಪತಿ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಯ ಬಳಿಕ ಅಸಲಿ ವಿಚಾರಗಳು ಬೆಳಕಿಗೆ ಬಂದಿದ್ದು ಪೊಲೀಸರಿಗೂ ಕೂಡ ಶಾ-ಕ್ ತರಿಸಿದೆ. ಕಳೆದ ತಿಂಗಳು ಅ.26 ರಂದು ಐಶ್ವರ್ಯ (Aishwarya) ಆ-ತ್ಮಹತ್ಯೆ ಮಾಡಿಕೊಂಡಿದ್ದರು.

ಈ ಐಶ್ವರ್ಯ ಆ-ತ್ಮಹತ್ಯೆ ಬಳಿಕ ಮನೆ ಮಂದಿ ಗೋವಾ (Goa) ಹಾಗೂ ಮುಂಬೈ (Mumbai) ನಲ್ಲಿ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಐದು ವರ್ಷಗಳ ಹಿಂದೆ ರಾಜೇಶ್ (Rajesh) ಎಂಬುವವರನ್ನು ಐಶ್ವರ್ಯ ಮದುವೆಯಾಗಿದ್ದು, ಸುಖವಾಗಿ ಸಂಸಾರ ಮಾಡುತ್ತಿದ್ದರು. ಈ ರಾಜೇಶ್ ಎನ್ನುವ ವ್ಯಕ್ತಿಯು ಡೈರಿ ರಿಚ್ ಐಸ್ ಕ್ರೀಮ್ ಕಂಪನಿ (Dairy Rich Ice Cream Company) ಓನರ್ ಆಗಿದ್ದು, ಈ ಕಂಪೆನಿಯಲ್ಲಿಯೇ ಐಶ್ವರ್ಯ ತಂದೆ ಸುಬ್ರಮಣಿ (Subramani) ಯ ತಂಗಿ ಗಂಡ ರವೀಂದ್ರ (Ravindra) ಆಡಿಟರ್ ಆಗಿ ಕೆಲಸ ಮಾಡುತ್ತಿದ್ದನು.

ಈ ವ್ಯಕ್ತಿಯೇ ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದನು ಎನ್ನಲಾಗಿದೆ ಎಂಬಿಎ ಓದಿದ್ದ ಐಶ್ವರ್ಯಳ ಬದುಕನ್ನೇ ಈ ಮದುವೆ ಹಾಳು ಮಾಡಿತ್ತು. ಯಾರದೋ ದ್ವೇ-ಷಕ್ಕೆ ಪ್ರತಿಭಾವಂತ ಯುವತಿಯ ಬದುಕು ಹಾಳಾಗಿತ್ತು. ಹೌದು, ಈ ರವೀಂದ್ರ ಮತ್ತು ಸುಬ್ರಮಣಿ ಕುಟುಂಬದಲ್ಲಿ ಮನಸ್ತಾಪ ಇತ್ತು. ಈ ಕಾರಣದಿಂದಾಗಿ ಸುಬ್ರಮಣಿಯ ಮೇಲಿನ ದ್ವೇ-ಷದಿಂದಾಗಿ ಐಶ್ವರ್ಯಳ ಬದುಕನ್ನೇ ಹಾಳು ಮಾಡುವ ಕೆಲಸಕ್ಕೆ ಮುಂದಾಗಿದ್ದರು.

ಮದುವೆ ಮಾಡಿಸಿದ್ದ ಈ ರವೀಂದ್ರ ಕುಟುಂಬ ಐಶ್ಯರ್ಯ ಗುಣನಡತೆಯ ಬಗ್ಗೆ ಪತಿ ರಾಜೇಶ್ ಕುಟುಂಬಕ್ಕೆ ಅ-ನುಮಾನ ಬರುವಂತೆ ಹೇಳಿಕೊಡುತ್ತಿದ್ದನು. ಈ ಐಶ್ವರ್ಯಳ ಪೋಟೋಗಳನ್ನ ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಬಾಯಿಗೆ ಬಂದಂತೆ ಹೇಳುತ್ತಿದ್ದು, ಈ ವಿಚಾರದಿಂದ ರಾಜೇಶ್ ಐಶ್ವರ್ಯಳಿಗೆ ಹಿಂ-ಸೆ ನೀಡುತ್ತಿದ್ದನು ಎನ್ನಲಾಗಿದೆ. ಈ ನಡುವೆ ರಾಜೇಶ್ ಕುಟುಂಬಸ್ಥರು ಐಶ್ವರ್ಯಳಿಗೆ ವ-ರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು.

ಹೀಗಾಗಿ ತನ್ನ ಸಂಪಾದನೆಯ ಹಣದಲ್ಲಿ ಗಂಡನಿಗೆ ಬೈಕ್ ಹಾಗೂ ಚಿನ್ನವನ್ನು ಕೊಡಿಸಿದ್ದಳು. ಎಲ್ಲವನ್ನು ಸಹಿಸಿಕೊಂಡಿದ್ದ ಈ ಐಶ್ವರ್ಯಳು ಬಹಳ ನೊಂ-ದುಕೊಂಡಿದ್ದಳು. ಈ ಘಟನೆ ನಡೆಯುವ ಕೆಲವು ದಿನಗಳ ಹಿಂದೆ ತನ್ನ ತಾಯಿ ಮನೆಗೆ ಬಂದು ಹೋಗಿದ್ದಳು. ಅಲ್ಲಿಂದ ಮರಳಿ ಬಂದಿದ್ದ ಐಶ್ವರ್ಯ ಕೆಲ ದಿನಗಳು ಬಿಟ್ಟು ಡೆತ್ ನೋಟ್ ಬರೆದಿಟ್ಟು ಜೀವ ಕಳೆದುಕೊಂಡಿದ್ದಳು.

ಈ ಘಟನೆ ಸಂಬಂಧಪಟ್ಟಂತೆ ಐಶ್ವರ್ಯಾಳ ತಾಯಿ, ರಾಜೇಶ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದು, ಐಶ್ವರ್ಯ ಪತಿ ರಾಜೇಶ್ (Rajesh), ಮಾವ ಗಿರಿಯಪ್ಪ (Giriyappa), ಅತ್ತೆ ಸೀತಾ (Seetha), ಮೈದುನ ವಿಜಯ್ (Vijay), ಮೈದುನನ ಪತ್ನಿ ತಸ್ಮಿನ್ (Tasmin) ರನ್ನು ಬಂಧಿಸಿದ್ದಾರೆ. ತನಿಖೆ ಬಳಿಕ ಅಸಲಿ ವಿಚಾರ ಹೊರ ಬಿದ್ದಿದ್ದು ಐಶ್ವರ್ಯಳ ಕುಟುಂಬಸ್ಥರು ಮುದ್ದಿನ ಮಗಳನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.

Leave a Reply

Your email address will not be published. Required fields are marked *